ಹೊಸದಿಗಂತ ಡಿಜಿಟಲ್ ಡೆಸ್ಕ್:
ಕನ್ನಡದ ನಟಿಯರು ಬಾಲಿವುಡ್‌ಗೆ ಹಾರೋದು ದೊಡ್ಡ ವಿಷಯ ಅಲ್ಲ ಅನ್ನೋ ಅಷ್ಟು ಕಾಮನ್ ಆಗೋಗಿದೆ. ಇದೀಗ ಕನ್ನಡದ ಮತ್ತೊಬ್ಬ ನಟಿ ಬಾಲಿವುಡ್‌ಗೆ ಹಾರೋಕೆ ತಯಾರಾಗಿದ್ದಾರೆ.
ಕನ್ನಡದ ‘ಗಾಳಿಪಟ 2’ ನಟಿ ಸಂಯುಕ್ತಾ ಮೆನನ್ ಬಾಲಿವುಡ್‌ಗೆ ಹಾರಿದ್ದಾರೆ. ನಟಿ ಕಾಜೋಲ್ ಹಾಗೂ ಪ್ರಭುದೇವ ಸಿನಿಮಾ ಇದಾಗಿದ್ದು, ಮುಖ್ಯವಾದ ಪಾತ್ರವೊಂದನ್ನು ಮಾಡಿದ್ದಾರೆ.
ವಿರೂಪಾಕ್ಷ, ಡೆವಿಲ್ ಸಿನಿಮಾಗಳ ಮೂಲಕ ಸೈ ಎನಿಸಿಕೊಂಡಿರುವ ಸಂಯುಕ್ತಾಗೆ ಬಿಗ್ ಚಾನ್ಸ್ ಸಿಕ್ಕಿದೆ. ಬಾಲಿವುಡ್‌ನ ‘ಮಹಾರಾಗ್ನಿ’ ಸಿನಿಮಾದಲ್ಲಿ ಸಂಯುಕ್ತಾ ಕೂಡ ಕಾಣಿಸಿಕೊಂಡಿದ್ದಾರೆ.