ಮನ್‌ಕಿಬಾತ್‌ನಲ್ಲಿ ಚಾಮರಾಜನಗರದ ವರ್ಷಾ ಹೆಸರು ಹೇಳಿದ ಪ್ರಧಾನಿ, ಯಾರಿವರು?

ಹೊಸದಿಗಂತ ಡಿಜಿಟಲ್ ಡೆಸ್ಕ್:

ಇಂದು ಮನ್ ಕಿ ಬಾತ್ ಸರಣಿಯ 107 ನೇ ರೇಡಿಯೋ ಕಾರ್ಯಕ್ರಮದಲ್ಲಿ ಪ್ರಧಾನಿ ಮೋದಿ ಚಾಮರಾಜನಗರದ ವರ್ಷಾ ಅವರ ಹೆಸರನ್ನು ಉಲ್ಲೇಖಿಸಿದ್ದಾರೆ.

ಯಾರೀ ವರ್ಷಾ? ಇವರು ಮಾಡಿದ ಸಾಧನೆಯೇನು?

ವರ್ಷಾ ಅವರು ಸದಾ ಮನ್ ಕಿ ಬಾತ್ ಕಾರ್ಯಕ್ರಮವನ್ನು ಕೇಳುತ್ತಾರೆ. ಈ ಕಾರ್ಯಕ್ರಮದಿಂದ ಪ್ರೇರೇಪಣೆ ಪಡೆದು ಸ್ವಂತ ಉದ್ಯಮ ಆರಂಭಿಸಿದ್ದಾರೆ. ಬಾಳೆ ಹಣ್ಣಿನ ಸಿಪ್ಪೆಯಿಂದ ಜೈವಿಕ ಗೊಬ್ಬರ ತಯಾರಿಸುವುದು, ಸ್ಥಳೀಯ ಉತ್ಪನ್ನಗಳನ್ನು ಬಳಸಿ ಕರಕುಶಲ ವಸ್ತುಗಳನ್ನು ತಯಾರಿಸುತ್ತಾರೆ.

ಯಾರ ಮೇಲೆಯೂ ಅವಲಂಬಿತರಾಗದೇ ತಾವೇ ಸ್ವಾವಲಂಬಿ ಜೀವನ ನಡೆಸುತ್ತಿದ್ದಾರೆ. ಇಷ್ಟೇ ಅಲ್ಲ ಇತರ ಹೆಣ್ಣುಮಕ್ಕಳಿಗೂ ವರ್ಷಾ ಕೆಲಸ ನೀಡಿ ಅವರಿಗೂ ಆರ್ಥಿಕವಾಗಿ ನೆರವಾಗಿದ್ದಾರೆ. ಇವರ ಕಂಪನಿ ಹೆಸರು ಆಕೃತಿ ಎಕೋ ಫ್ರೆಂಡ್ಲಿ ಎಂಟರ್‌ಪ್ರೈಸಸ್.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!