ಹೊಸದಿಗಂತ ಡಿಜಿಟಲ್ ಡೆಸ್ಕ್:
ಕನ್ನಡ ಚಿತ್ರರಂಗ ಅಲ್ಲದೇ ಆಲ್ ಇಂಡಿಯಾ ಸೂಪರ್ ಸ್ಟಾರ್ ಆಗಿ ಗುರುತಿಸಿಕೊಂಡಿರುವ ಕಿಚ್ಚ ಸುದೀಪ್ ಮುಖ್ಯಭೂಮಿಕೆಯ ಮುಂದಿನ ಬಹುನಿರೀಕ್ಷಿತ ಚಿತ್ರ ‘ಬಿಲ್ಲ ರಂಗ ಬಾಷʼ ಈಗಾಗಲೇ ಸೆಟ್ಟೇರಿದೆ. ಈ ಸಿನಿಮಾದಲ್ಲಿ ಸುದೀಪ್‌ಗೆ ಹೀರೋಯಿನ್ ಆಗೋದು ಯಾರು ಎನ್ನುವ ಪ್ರಶ್ನೆ ಅಭಿಮಾನಿಗಳಲ್ಲಿ ಎದುರಾಗಿದೆ.
ಸಿನಿಮಾದಲ್ಲಿ ಮೂವರು ನಟಿಯರ ಹೆಸರು ಕೇಳಿಬರ್ತಿದೆ. ಕೆಜಿಎಫ್‌ನಲ್ಲಿ ಮಿಂಚಿ ತೆಲುಗು ಇಂಡಸ್ಟ್ರಿಗೆ ಹಾರಿದ್ದ ನಟಿ ಶ್ರೀನಿಧಿ ಶೆಟ್ಟಿ, ಸಪ್ತಸಾಗರದಾಚೆ ಎಲ್ಲೋ ಮುಗಿಸಿ ತೆಲುಗು ಸಿನಿಮಾದಲ್ಲಿ ಬ್ಯುಸಿ ಇರುವ ರುಕ್ಮಿಣಿ ವಸಂತ್ ಹಾಗೂ ಕರಾವಳಿಯ ಪ್ಯಾನ್ ನಟಿ ಪೂಜಾ ಹೆಗ್ಡೆ ಹೆಸರು ಕೂಡ ಕೇಳಿಬರುತ್ತಿದೆ.