ಯಾರೆ ರಾಜಕಾಲುವೆ ಒತ್ತುವರಿ ಮಾಡಿದರೂ ತೆರವು ಮಾಡಬೇಕು: ಡಿಸಿಎಂ ಡಿ.ಕೆ. ಶಿವಕುಮಾರ್ ಖಡಕ್ ಸೂಚನೆ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ಬೆಂಗಳೂರು ನಗರ ಪ್ರದಕ್ಷಿಣೆ ನಡೆಸಿದ ಡಿಸಿಎಂ, ಹಲವೆಡೆ ರಾಜಕಾಲುವೆ ಒತ್ತುವರಿಯಾದ ಬಗ್ಗೆ ಪರಿಶೀಲನೆ ನಡೆಸಿದರು.

ಈ ವೇಳೆ ಮಾತನಾಡಿದ ಅವರು, ಒತ್ತುವರಿ ತೆರವಿಗೆ ಕೋರ್ಟ್ ನಿಂದ ಸ್ಟೇ ತಂದವರೆಲ್ಲರೂ ಒತ್ತುವರಿ ತೆರವು ಮಾಡಬೇಕು. ಇಲ್ಲವಾದಲ್ಲಿ ಕಾನೂನು ಮೂಲಕವೇ ಸರ್ಕಾರದಿಂದ ಕ್ರಮ ಕೈಗೊಳ್ಳಬೇಕಾಗುತ್ತದೆ ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ಎಚ್ಚರಿಕೆ ನೀಡಿದ್ದಾರೆ.

ದಿವ್ಯಶ್ರೀ ಅಪಾರ್ಟ್ ಮೆಂಟೇ ಇರಲಿ, ಶಿವಕುಮಾರ್ ಅಪರ್ಟ್ ಮೆಂಟೇ ಆಗಿರಲಿ ಯಾರೆ ರಾಜಕಾಲುವೆ ಒತ್ತುವರಿ ಮಾಡಿದರೂ ಕೂಡ ತೆರವುಗೊಳಿಸಲಾಗುವುದು. ಕೋರ್ಟ್ ನಿಂದ ಸ್ಟೇ ತಂದವರು ತಾವಾಗಿಯೇ ತೆರವು ಮಾಡಿದರೆ ಒಳಿತು. ಇಲ್ಲವಾದಲ್ಲಿ ನಾವು ಕೂಡ ಕಾನೂನು ಮೂಲಕವಾಗಿಯೇ ತೆರವು ಕಾರ್ಯಾಚರಣೆ ಮಾಡುತ್ತೇವೆ ಎಂದು ಹೇಳಿದರು.

ಮಳೆ ಬಂದಾಗ ಹಲವು ಪ್ರದೇಶಗಳಿಗೆ ನೀರು ನುಗ್ಗಿ ಜನರು ಕಣ್ಣೀರಿಡುತ್ತಿದ್ದಾರೆ. ಇಷ್ಟಾದರೂ ರಾಜಕಾಲುವೆ ಒತ್ತುವರಿ ಮುಂದುವರೆದಿದೆ. ಎಲ್ಲಿಯೂ ಬುಲ್ಡೋಜರ್ ಕಾರ್ಯಾಚರಣೆ ನಿಲ್ಲಿಸಲು ನಾವು ಸೂಚಿಸಿಲ್ಲ. ಕಾರ್ಯಾಚರಣೆ ಮುಂದುವರೆದಿದೆ. ಖಾಸಗಿ ಡವಲಪರ್ಸ್ ಕೋರ್ಟ್ ಮೂಲಕ ಸ್ಟೇ ತಂದಿದ್ರೆ ನಾವು ನಮ್ಮ ಕ್ರಮದ ಮೂಲಕ ಕೆಲಸ ಮಾಡುತ್ತೇವೆ ಎಂದು ಹೇಳಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!