Friday, November 14, 2025

ಯಾರಿಗೆ ಬಿʼಹಾರʼ? 170 ಕ್ಷೇತ್ರಗಳಲ್ಲಿ NDA ಗೆ ಮುನ್ನಡೆ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ಬಿಹಾರದಲ್ಲಿ 243 ಕ್ಷೇತ್ರಗಳಿಗೆ ನಡೆದ ಚುನಾವಣಾ ಫಲಿತಾಂಶ ಇಂದು ಹೊರಬೀಳಲಿದೆ. ಸಮೀಕ್ಷೆಗಳು ಈಗಾಗಲೇ ಎನ್‌ಡಿಎ ಅತಿದೊಡ್ಡ ಪಕ್ಷವಾಗಿ ಹೊರಹೊಮ್ಮಿದೆ ಎಂದು ತೋರಿಸಿವೆ.

ಇನ್ನೂ ಮತ ಎಣಿಕೆಯಲ್ಲಿ ಎನ್‌ಡಿಎ ಬೆಳಗ್ಗೆ 10:20 ಗಂಟೆ ಟ್ರೆಂಡ್‌ ವೇಳೆಗೆ ಮ್ಯಾಜಿಕ್‌ ನಂಬರ್‌ ಗಡಿ ದಾಟಿದ್ದು, 170 ಹೆಚ್ಚು ಕ್ಷೇತ್ರಗಳಲ್ಲಿ ಮುನ್ನಡೆ ಸಾಧಿಸಿದೆ. ಹೀಗಾಗಿ ಸಿಎಂ ನಿತೀಶ್‌ ಕುಮಾರ್‌ ಫಲಿತಾಂಶಕ್ಕೂ ಮುನ್ನವೇ ವಿಜಯ ಘೋಷಿಸಿದ್ದಾರೆ.

ವಿಶೇಷವೆಂದ್ರೆ ಕೆಲವು ಕ್ಷೇತ್ರಗಳಲ್ಲಿ ಬಿಜೆಪಿ ಅಭ್ಯರ್ಥಿಗಳು ಮುನ್ನಡೆ ಸಾಧಿಸಿದ್ರೆ, ಕೆಲ ಕ್ಷೇತ್ರಗಳಲ್ಲಿ ಆರ್‌ಜೆಡಿ ಅಭ್ಯರ್ಥಿಗಳು ಪ್ರಬಲವಾಗಿದ್ದು, ಮಹಾಘಟಬಂಧನ್‌ ಅಭ್ಯರ್ಥಿಗಳ ಕಟ್ಟಿಹಾಕುವಲ್ಲಿ ಪ್ರಭಾವ ಬೀರಿದ್ದಾರೆ.

ಬೆಳಗ್ಗೆ 10 ಗಂಟೆ ವೇಳೆಗೆ ಮುಜಾಫರ್‌ಪುರ ನಗರ ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿಯ ರಂಜನ್ ಕುಮಾರ್ 2,545 ಮತಗಳೊಂದಿಗೆ ಕಾಂಗ್ರೆಸ್‌ನ ವಿಜೇಂದ್ರ ಚೌಧರಿ (1,970 ಮತಗಳು) ಗಿಂತ 575 ಮತಗಳಿಂದ ಮುನ್ನಡೆ ಕಾಯ್ದುಕೊಂಡಿದ್ದಾರೆ.

ಆದ್ರೆ ಆರ್‌ಜೆಡಿಯ ತನುಶ್ರೀ ಕುಮಾರಿ ಬರಚಟ್ಟಿ ಕ್ಷೇತ್ರದಲ್ಲಿ ಮುನ್ನಡೆಯಲ್ಲಿದ್ದಾರೆ. ಜೆಡಿಯುನ ಅಮರೇಂದ್ರ ಕುಮಾರ್ ಪಾಂಡೆ ಕುಚಾಯ್‌ಕೋಟ್‌ನಲ್ಲಿ 1,398 ಮತಗಳು, ಸುನಿಲ್ ಕುಮಾರ್ ಭೋರೆ ಕ್ಷೇತ್ರದಲ್ಲಿ 3,000 ಮತಗಳು, ರಾಮಸೇವಕ್ ಸಿಂಗ್ ಹತುವಾ ಕ್ಷೇತ್ರದಲ್ಲಿ 1,369 ಮತಗಳಿಂದ ಮುನ್ನಡೆ ಕಾಯ್ದುಕೊಂಡಿದ್ದಾರೆ.

error: Content is protected !!