ಬಹುತೇಕ ಮಕ್ಕಳಿಗೆ “ಮಾಥ್ಸ್” ಅಂದ್ರೆ ಮೊದಲೇ ಭಯ ಶುರುವಾಗುತ್ತದೆ. ಪರೀಕ್ಷೆ, ಟೇಬಲ್, ಲೆಕ್ಕಗಳು ಅನ್ನೋ ಮಾತು ಕೇಳುತ್ತಿದ್ದಂತೆಯೇ ಒತ್ತಡ ಕಾಣಿಸಿಕೊಳ್ಳುತ್ತದೆ. ಆದರೆ ಗಣಿತ ಅಷ್ಟೊಂದು ಕಷ್ಟದ ವಿಷಯವಲ್ಲ. ಅದನ್ನು ಹೇಗೆ ಪರಿಚಯ ಮಾಡಿಸುತ್ತೇವೆ, ಹೇಗೆ ಕಲಿಸುತ್ತೇವೆ ಅನ್ನೋದು ಮಕ್ಕಳ ಮನಸ್ಸಿನ ಮೇಲೆ ದೊಡ್ಡ ಪರಿಣಾಮ ಬೀರುತ್ತದೆ. ಸರಿಯಾದ ವಿಧಾನದಲ್ಲಿ ಕಲಿಸಿದರೆ ಗಣಿತವೂ ಒಂದು ಆಟದಂತೆ ಆಸಕ್ತಿದಾಯಕವಾಗಬಹುದು.
- ಮೊದಲ ಅನುಭವವೇ ಭಯ ಹುಟ್ಟಿಸುತ್ತದೆ
ಚಿಕ್ಕ ವಯಸ್ಸಿನಲ್ಲೇ “ಇದು ಕಷ್ಟ” ಎಂದು ಹೇಳುವುದು ಅಥವಾ ತಪ್ಪು ಮಾಡಿದಾಗ ಬೈಯುವುದು ಮಕ್ಕಳಲ್ಲಿ ಭಯವನ್ನು ಹುಟ್ಟಿಸುತ್ತದೆ. ಮೊದಲ ಅನುಭವ ಕೆಟ್ಟದ್ದಾಗಿದ್ದರೆ, ಅವರು ಗಣಿತವನ್ನು ದೂರದಿಂದಲೇ ನೋಡುತ್ತಾರೆ. - ಒತ್ತಡದ ಓದುವ ವಿಧಾನ
ಮತ್ತೆ ಮತ್ತೆ ಬರೆಯುವುದು, ಪಾಠ ಕಂಠಪಾಠ ಮಾಡಿಸುವುದು, ಪರೀಕ್ಷೆ ಭಯ – ಇವೆಲ್ಲವೂ ಗಣಿತವನ್ನು ಬೋರ್ ವಿಷಯವನ್ನಾಗಿ ಮಾಡುತ್ತವೆ. ಅರ್ಥ ಮಾಡಿಸದೆ ಕಲಿಸಿದರೆ ಮಕ್ಕಳು ಗೊಂದಲಕ್ಕೆ ಒಳಗಾಗುತ್ತಾರೆ. - ತಪ್ಪು ಮಾಡಲು ಅವಕಾಶ ಇಲ್ಲದಿರುವುದು
ಗಣಿತದಲ್ಲಿ ತಪ್ಪಾದರೆ ತಕ್ಷಣ ಗದರಿಸುವುದು ಮಕ್ಕಳ ಆತ್ಮವಿಶ್ವಾಸವನ್ನು ಕಡಿಮೆ ಮಾಡುತ್ತದೆ. ಆದರೆ ಲೆಕ್ಕದಲ್ಲಿ ತಪ್ಪು ಮಾಡುವುದು ಸಹಜ. ಅದರಿಂದಲೇ ಅವರು ಕಲಿಯುತ್ತಾರೆ.
ಇದನ್ನೂ ಓದಿ:
- ಹೋಲಿಕೆ ಮಾಡುವ ಅಭ್ಯಾಸ
“ಅವನು ಚೆನ್ನಾಗಿ ಮಾಡ್ತಾನೆ, ನಿಂಗೆ ಯಾಕೆ ಆಗಲ್ಲ?” ಅಂತ ಹೋಲಿಸಿದರೆ ಮಕ್ಕಳಿಗೆ ಇನ್ನಷ್ಟು ಭಯ ಬರುತ್ತದೆ. ಇದರಿಂದ ಗಣಿತದ ಮೇಲೆ ಆಸಕ್ತಿ ಕಡಿಮೆಯಾಗುತ್ತದೆ. - ಆಸಕ್ತಿದಾಯಕವಾಗಿ ಕಲಿಸದಿರುವುದು
ಆಟ, ಉದಾಹರಣೆ, ದಿನನಿತ್ಯದ ಜೀವನದ ಜೊತೆ ಸಂಪರ್ಕ ಮಾಡಿ ಕಲಿಸಿದರೆ ಗಣಿತ ಸುಲಭವಾಗುತ್ತದೆ. ಆದರೆ ಪುಸ್ತಕಕ್ಕೆ ಮಾತ್ರ ಸೀಮಿತ ಮಾಡಿದರೆ ಅದು ಕಷ್ಟದ ವಿಷಯದಂತೆ ಕಾಣುತ್ತದೆ.



