ಹೊಸದಿಗಂತ ಡಿಜಿಟಲ್ ಡೆಸ್ಕ್:
ಒಬ್ಬೊಬ್ಬರಿಗೆ ಒಂದೊಂದು ಬಗೆಯ ಆಹಾರ ಇಷ್ಟ. ಕೆಲವರಿಗೆ ಸಿಹಿ, ಕೆಲವರಿಗೆ ಸಪ್ಪೆ, ಕೆಲವರಿಗೆ ಖಾರದ ಪದಾರ್ಥಗಳೆಂದರೆ ಬಲು ಪ್ರಿಯ. ಹೆಚ್ಚಿನವರು ಮಸಾಲೆಯುಕ್ತ ಆಹಾರವನ್ನು ಇಷ್ಟಪಡುತ್ತಾರೆ. ಬಾಯಿ ಖಾರದಿಂದ ಉರಿಯುತ್ತಿದ್ದರೂ ಇನ್ನೂ ಬೇಕು ಎನ್ನುವಷ್ಟು ಖಾರ ಇಷ್ಟ ಹಲವರಿಗೆ. ಆದರೆ, ಮೆಣಸಿನಕಾಯಿ ತಿಂದ ಕೂಡಲೇ ಬಾಯಿ, ನಾಲಿಗೆ ಉರಿಯೋದು ಯಾಕೆ ಅಂತ ಗೊತ್ತಾ? ಇಲ್ಲಿ ನೋಡಿ..
ಮೆಣಸಿನಕಾಯಿಯಲ್ಲಿ ಕ್ಯಾಪ್ಸೈಸಿನ್ ಎಂಬ ಸಂಯುಕ್ತವಿದೆ. ಇದು ಕಣ್ಣು ಅಥವಾ ಬಾಯಿಗೆ ಸಿಕ್ಕಾಗ ಉರಿಯೂತ ಉಂಟಾಗುತ್ತದೆ. ಮೆಣಸಿನಕಾಯಿ ಜಾಸ್ತಿ ಇದ್ದಾಗ ನಿಮಗೆ ಖಾರ ರುಚಿಯಾಗಲು ಇದೇ ಕಾರಣ. ಮೆಣಸಿನಕಾಯಿ ನಾಲಿಗೆ ಸೋಕಿದಾಗ ಅದರಲ್ಲಿರುವ ಸಂಯುಕ್ತ ಚರ್ಮದ ಮೇಲೆ ಪ್ರತಿಕ್ರಿಯಿಸಿ ರಾಸಾಯನಿಕವನ್ನು ರಕ್ತಕ್ಕೆ ಬಿಡುಗಡೆ ಮಾಡುತ್ತದೆ. ಈ ತೀವ್ರವಾದ ಶಾಖದ ಸುಡುವ ಸಂಕೇತವು ಮೆದುಳಿಗೆ ತಲುಪುತ್ತದೆ. ಇದರಿಂದಲೇ ಖಾರದ ಅಂಶ ಗೊತ್ತಾಗುತ್ತದೆ.
ಅತ್ಯಂತ ಖಾರದ ಮೆಣಸಿನಕಾಯಿ ಯಾವುದು?
ಕೆರೊಲಿನಾ ರೀಪರ್ ವಿಶ್ವದ ಅತ್ಯಂತ ಖಾರದ ಮೆಣಸಿನಕಾಯಿ ಎಂಬ ಖ್ಯಾತಿ ಪಡೆದಿತ್ತು. ಈಗ ಪೆಪ್ಪರ್ ಏಕ್ಸ್ ಈ ದಾಖಲೆಯನ್ನು ಮುರಿದಿದೆ. ಪೆಪ್ಪರ್ ಎಕ್ಸ್ ಈಗ ವಿಶ್ವದ ಅತ್ಯಂತ ಖಾರದ ಮೆಣಸಿನಕಾಯಿಯಾಗಿದೆ.