ಪಿರಿಯಡ್ಸ್ ಸಮಯದಲ್ಲಿ ಒಳಗಿನಿಂದಲೇ ದೇಹದಲ್ಲಿ ಸಾಕಷ್ಟು ಬದಲಾವಣೆ ಹಾಗೂ ಕಿರಿಕಿರಿ ಆಗುತ್ತದೆ. ಇದರ ಜೊತೆಗೆ ಪ್ಯಾಡ್‌ಗಳಿಂದ ಇನ್ನಷ್ಟು ತೊಂದರೆ ಕಾಣಿಸುತ್ತದೆ. ಪ್ಯಾಡ್‌ಗಳ ಬದಲು ಒಮ್ಮೆ ಕಪ್ಸ್ ಬಳಕೆ ಮಾಡಿ ನೋಡಿ, ನಿಮ್ಮ ದೃಷ್ಟಿಕೋನವೇ ಬದಲಾದೀತು..
ಪ್ಯಾಡ್‌ಗಿಂತ ಕಪ್ಸ್ ಯಾಕೆ ಉತ್ತಮ?
ಪ್ರತೀ ಎರಡು ಮೂರು ಗಂಟೆಗೊಮ್ಮೆ ಪ್ಯಾಡ್ ಬದಲಾಯಿಸಬೇಕು, ಆದರೆ 12 ಗಂಟೆಗೊಮ್ಮೆ ಕಪ್ ಕ್ಲೀನ್ ಮಾಡಿಕೊಳ್ಳಬಹುದು.
ಪ್ಯಾಡ್ ದುಬಾರಿ, ಆದರೆ ಕಪ್ಸ್ ಒಮ್ಮೆ ಖರೀದಿ ಮಾಡಿದರೆ ವರ್ಷಗಟ್ಟಲೆ ಬಳಕೆ ಮಾಡಬಹುದು.
ಪ್ಯಾಡ್‌ನಲ್ಲಿ ಲೀಕೇಜ್ ಟೆನ್ಶನ್ ಇರುತ್ತದೆ, ಆದರೆ ಕಪ್ಸ್‌ನಲ್ಲಿ ಈ ಟೆನ್ಶನ್ ಇಲ್ಲ.
ಪದೇ ಪದೆ ಪ್ಯಾಡ್ ಬದಲಾಯಿಸಲು ವಾಶ್‌ರೂಂಗೆ ಹೋಗೋದು ಕವರ್ ಸುತ್ತಿ ಬಿಸಾಡೋದು ಕಿರಿಕಿರಿ ಮಾಡಬಹುದು, ಆದರೆ ಕಪ್ಸ್ 12 ಗಂಟೆಗೊಮ್ಮೆ ತೆಗೆದು ತೊಳೆದು ಮತ್ತೆ ಹಾಕಿಕೊಳ್ಳಬಹುದು.
ಪ್ಯಾಡ್‌ಗಾಗಿ ಪ್ಲಾಸ್ಟಿಕ್ ಬಳಕೆ ಮಾಡಲಾಗುತ್ತದೆ ಇದು ಪರಿಸರಕ್ಕೆ ಹಾನಿಕರ, ಕಪ್ಸ್ ಎಕೊ ಫ್ರೆಂಡ್ಲಿ ಸಿಲಿಕಾನ್‌ನಿಂದ ಮಾಡಲಾಗುತ್ತದೆ.
ಪ್ಯಾಡ್ ಹಾಕಿಕೊಂಡು ಸ್ಪೋರ್ಟ್ಸ್, ಫಿಸಿಕಲ್ ಆಕ್ಟಿವಿಟಿ ಮಾಡೋದು ಕಷ್ಟ, ಆದ್ರೆ ಕಪ್ಸ್ ಬಳಕೆ ಮಾಡಿ ಇದೆಲ್ಲಾ ಮಾಡಬಹುದು.
ಪ್ಯಾಡ್ ಧರಿಸಿ ಜಲಕ್ರೀಡೆ ಅಥವಾ ನೀರಿನಲ್ಲಿ ಇಳಿಯಲು ಸಾಧ್ಯ ಇಲ್ಲ ಆದರೆ ಕಪ್ಸ್ ಬಳಸಿ ಸ್ವಿಮ್ ಕೂಡ ಮಾಡಬಹುದು.