ಈಗಿನ ಮಕ್ಕಳ್ಯಾಕೆ ಇಷ್ಟೊಂದು ಸೂಕ್ಷ್ಮ? ಮೊಬೈಲ್‌ ನೋಡಬೇಡ ಎಂದಿದ್ದಕ್ಕೆ ಬಾಲಕ ಆತ್ಮಹತ್ಯೆ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ಮೊಬೈಲ್ ನೋಡಬೇಡ ಎಂದು ತಂದೆ ಮಗನಿಗೆ ಬುದ್ದಿವಾದ ಹೇಳಿದ್ದಕ್ಕೆ ಮನನೊಂದ ಮಗ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ಉತ್ತರ ಕನ್ನಡ ಜಿಲ್ಲೆಯ ಹಳಿಯಾಳದ ಮಂಗಳವಾಡ ಗ್ರಾಮದಲ್ಲಿ ನಡೆದಿದೆ.

ಹಳಿಯಾಳದ ಸರ್ಕಾರಿ ಪ್ರಾಥಮಿಕ ಶಾಲೆಯ ಏಳನೇ ತರಗತಿ ವಿದ್ಯಾರ್ಥಿ ಓಂ ಕದಂ (13) ಆತ್ಮಹತ್ಯೆ ಮಾಡಿಕೊಂಡಿದ್ದಾನೆ.

ಮನೆಯಲ್ಲಿ ಪ್ರತಿದಿನ ಹೆಚ್ಚು ಮೊಬೈಲ್ ನೋಡುತ್ತಾ ಕಾಲಕಳೆಯುತ್ತಿದ್ದ ಮಗನಿಗೆ ತಂದೆ ಮನೋಹರ್ ಮೊಬೈಲ್ ನೋಡದಂತೆ ಬುದ್ದಿವಾದ ಹೇಳುತಿದ್ದರು. ಮಾತು ಕೇಳದೇ ಓಂ ಕದಂ ಹಠಕ್ಕೆ ಬಿದ್ದು ಮೊಬೈಲ್ ನೋಡುತಿದ್ದ. ಮಂಗಳವಾರ ರಾತ್ರಿ ಮೊಬೈಲ್ ನೋಡುತ್ತಾ ಕಾಲ ಕಳೆಯುತಿದ್ದ ಮಗನಿಗೆ ಗದರಿಸಿ ಮೊಬೈಲ್ ಕಸಿದುಕೊಂಡು ಓದಿಕೊಳ್ಳುವಂತೆ ತಂದೆ ಮನೋಹರ್ ಬುದ್ದಿವಾದ ಹೇಳಿದ್ದರು.

ಇದರಿಂದ ಮನನೊಂದು ಓಂ ಕದಂ ಮನೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ತಕ್ಷಣ ಹಳಿಯಾಳದ ಸರ್ಕಾರಿ ಆಸ್ಪತ್ರೆಗೆ ಕರೆದೊಯ್ದರೂ ಆತ ಬದುಕುಳಿಯಲಿಲ್ಲ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!