KNOW WHY | ವಿಮಾನದಲ್ಯಾಕೆ ತೆಂಗಿನಕಾಯಿ ತೆಗೆದುಕೊಂಡು ಹೋಗುವಂತಿಲ್ಲ?

ವಿಮಾನದಲ್ಲಿ ಕೆಲವು ವಸ್ತುಗಳಿಗೆ ನಿರ್ಬಂಧ ಇದೆ. ಇದರಲ್ಲಿ ತೆಂಗಿನಕಾಯಿ, ಒಣಕೊಬ್ಬರಿ ಕೂಡ ಒಂದು. ನಾಗರಿಕ ವಿಮಾನಯಾನ ಸಚಿವಾಲಯವು ವಿಮಾನದಲ್ಲಿ ಪ್ರಯಾಣಿಸುವಾಗ ಪ್ರಯಾಣಿಕರು ತಮ್ಮೊಂದಿಗೆ ಕೊಂಡೊಯ್ಯಬಾರದ ವಸ್ತುಗಳ ಹೊಸ ಪಟ್ಟಿಯನ್ನು ಬಿಡುಗಡೆ ಮಾಡಿದೆ. ಈ ಪಟ್ಟಿಯಲ್ಲಿ ಕತ್ತರಿ, ನೈಟ್​ ಸ್ಟಿಕ್​ (ಟಾರ್ಚ್​), ಹಗ್ಗ, ಸೆಲ್ಲೊ ಟೇಪ್, ಒಣಕೊಬ್ಬರಿ, ಬ್ಲೇಡ್, ಛತ್ರಿ, ಬೆಂಕಿಕಡ್ಡಿ, ಸ್ಫೋಟಕಗಳು ಸೇರಿದಂತೆ ಇನ್ನಿತರ ವಸ್ತುಗಳು ಸೇರಿವೆ.

ಇದರ ಜೊತೆಗೆ ವಿಮಾನ ಪ್ರಯಾಣದ ಸಮಯದಲ್ಲಿ ಚಾಕುಗಳು, ಮೊಬೈಲ್ ಬ್ಯಾಟರಿಗಳು ಮತ್ತು ಲೈಟರ್‌ಗಳಂತಹ ಸುಡುವ ವಸ್ತುಗಳಂತಹ ಚೂಪಾದ ವಸ್ತುಗಳನ್ನು ಸಾಗಿಸುವುದನ್ನು ನಿಷೇಧಿಸಲಾಗಿದೆ ಎಂದು ನಮಗೆಲ್ಲರಿಗೂ ತಿಳಿದಿದೆ. ಆದರೆ, ಈ ವಸ್ತುಗಳ ಜೊತೆಗೆ ಒಣಕೊಬ್ಬರಿಯನ್ನು ಏಕೆ ಒಯ್ಯುವುದನ್ನು ನಿಷೇಧಿಸಲಾಗಿದೆ ಎಂದು ಹಲವು ಜನರಿಗೆ ತಿಳಿದಿಲ್ಲ. ಆದ್ರೆ, ಒಣ ಕೊಬ್ಬರಿ ಒಯ್ಯುವುದನ್ನು ಏಕೆ ನಿಷೇಧಿಸಲಾಗಿದೆ ಎಂಬುದನ್ನು ಇದೀಗ ನೋಡೋಣ.

ವಿಮಾನ ನಿಲ್ದಾಣದಲ್ಲಿ ದ್ರವ ಪದಾರ್ಥಗಳನ್ನು ಸಾಗಿಸಲು ಕಠಿಣ ನಿಯಮಗಳನ್ನು ಮಾಡಲಾಗಿದೆ. ಮತ್ತು ತೆಂಗಿನಕಾಯಿ ದ್ರವವನ್ನು ಹೊಂದಿರುತ್ತದೆ. ಆದ್ದರಿಂದ ಅದನ್ನು ನಿಮ್ಮೊಂದಿಗೆ ಕೊಂಡೊಯ್ಯುವುದನ್ನು ನಿಷೇಧಿಸಲಾಗಿದೆ. ತೆಂಗಿನಕಾಯಿ ಒಳಗಿನಿಂದ ತೇವವಾಗಿರುತ್ತದೆ ಮತ್ತು ಹೊರಗಿನಿಂದ ಗಟ್ಟಿಯಾಗಿರುತ್ತದೆ.

ಹಾರಾಟದ ಸಮಯದಲ್ಲಿ ಎತ್ತರದಲ್ಲಿ ಗಾಳಿಯ ಒತ್ತಡದಲ್ಲಿ ಬದಲಾವಣೆ ಉಂಟಾಗುತ್ತದೆ. ಇದರಿಂದಾಗಿ ತೆಂಗಿನಕಾಯಿ ಸ್ಫೋಟವಾಗುವ ಸಾಧ್ಯತೆ ಇರುತ್ತದೆ. ಇದರೊಂದಿಗೆ ತೆಂಗಿನಕಾಯಿಗೆ ಬೆಂಕಿ ಹೊತ್ತಿಕೊಳ್ಳಬಹುದು. ಏಕೆಂದರೆ ಇದರಲ್ಲಿ ಬಹಳಷ್ಟು ಎಣ್ಣೆ ಅಂಶವಿರುತ್ತದೆ. ಆದ್ದರಿಂದ, ಭದ್ರತಾ ಕಾರಣಗಳಿಗಾಗಿ ತೆಂಗಿನಕಾಯಿಯನ್ನು ವಿಮಾನದಲ್ಲಿ ಸಾಗಿಸಲು ಅನುಮತಿಸಲಾಗುವುದಿಲ್ಲ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!