ಟೊಮ್ಯಾಟೊ ರೇಟ್ ದಿನದಿಂದ ದಿನಕ್ಕೆ ಗಗನಕ್ಕೇರುತ್ತಲೇ ಇದೆ. ಈ ರೀತಿ ಇರೋವಾಗ ಮನೆಯಲ್ಲೇ ಯಾಕೆ ಟೊಮ್ಯಾಟೊ ಬೆಳೆಯಬಾರದು? ಇದು ಅಷ್ಟ ಕಷ್ಟವೂ ಅಲ್ಲ. ಹೇಗೆ ಬೆಳೆಯೋದು ನೋಡಿ..
ಟೊಮ್ಯಾಟೊ ಅರ್ಧ ಭಾಗಕ್ಕೆ ಕತ್ತರಿಸಿ ಮಣ್ಣಿನಲ್ಲಿ ಮೂರರಿಂದ ನಾಲ್ಕು ಇಂಚು ಒಳಕ್ಕೆ ಹಾಕಿ ಅಥವಾ ಟೊಮ್ಯಾಟೊ ಬೀಜಗಳನ್ನು ಕಾಲು ಇಂಚು ಅಡಿಯಲ್ಲಿ ಫಲವತ್ತಾದ ಮಣ್ಣಿನಲ್ಲಿ ಹಾಕಿ, ನೀರು ಸ್ಪ್ರೇ ಮಾಡಿ.
ಟೊಮ್ಯಾಟೊ ಬೆಳೆ ಕೊಂಚ ನಿಧಾನ, ಎರಡು ತಿಂಗಳಿನಿಂದ ಮೂರು ತಿಂಗಳಿನಲ್ಲಿ ಟೊಮ್ಯಾಟೊ ಬೆಳೆ ನಿಮ್ಮ ಕೈಸೇರುತ್ತದೆ. ಟೊಮ್ಯಾಟೊ ಬೆಳಗೆ ತರಕಾರಿ ಮೊಟ್ಟೆ ಸಿಪ್ಪೆಯನ್ನು ಹಾಕಬಹುದು. ಬಿಸಿಲು ಹಾಗೂ ನೀರು ಸರಿಯಾದ ರೀತಿಯಲ್ಲಿ ಗಿಡಕ್ಕೆ ಬೀಳುವ ಹಾಗೆ ನೋಡಿಕೊಳ್ಳಿ.
ಮೇ ತಿಂಗಳು ಟೊಮ್ಯಾಟೊ ಬೆಳೆ ಬೆಳೆಯಲು ಸೂಕ್ತ ಸಮಯವಾಗಿದೆ.