CINE | ಸಲ್ಮಾನ್, ಶಾರುಖ್ ಜೊತೆ ಸಿನಿಮಾ ಮಾಡೋಕಾಗಲ್ಲ, ನಿರ್ದೇಶಕ ಕಶ್ಯಪ್ ಹೀಗಂದಿದ್ಯಾಕೆ?

ಹೊಸದಿಗಂತ ಡಿಜಿಟಲ್ ಡೆಸ್ಕ್:

ನಟ ಶಾರುಖ್ ಹಾಗೂ ಸಲ್ಮಾನ್ ಖಾನ್ ಜೊತೆ ಸಿನಿಮಾ ಮಾಡೋಕಾಗೋದಿಲ್ಲ ಎಂದು ಖ್ಯಾತ ನಿರ್ದೇಶಕ ಅನುರಾಗ್ ಕಶ್ಯಪ್ ಹೇಳಿದ್ದಾರೆ.

ಈ ಬಗ್ಗೆ ಕಾರಣವನ್ನು ಕೂಡ ನೀಡಿದ್ದು, ನನ್ನ ಸಿನಿಮಾಗಳಲ್ಲಿ ಬಹುತೇಕ ಹೊಸಬರನ್ನೇ ಆಯ್ಕೆ ಮಾಡ್ತೇನೆ, ನನ್ನ ಸಿನಿಮಾಗಳು ಎಲ್ಲ ವರ್ಗದವರಿಗೂ ಇಷ್ಟ ಆಗೋದಿಲ್ಲ. ವಿಭಿನ್ನ ಸಬ್ಜೆಕ್ಟ್ ಇರುತ್ತದೆ.

ನಿಮ್ಮ ನೆಚ್ಚಿನ ಹೀರೋಗಳನ್ನು ಈ ರೀತಿ ವಿಭಿನ್ನ ಪಾತ್ರದಲ್ಲಿ ನೀವು ಒಪ್ಪದೇ ಹೋದರೆ? ಈ ಕಾರಣದಿಂದ ಸೂಪರ್ ಸ್ಟಾರ್‌ಗಳ ಜೊತೆ ಕೆಲಸ ಮಾಡೋದಿಲ್ಲ ಎಂದು ಕಶ್ಯಪ್ ಹೇಳಿದ್ದಾರೆ.

ಗ್ಯಾಂಗ್ಸ್ ಆಫ್ ವಸೇಪುರ್ ಸಿನಿಮಾದಿಂದ ಬಾಲಿವುಡ್‌ಗೆ ಕಾಲಿಟ್ಟ ಕಶ್ಯಪ್ ನಟನಾಗಿಯೂ ಗುರುತಿಸಿಕೊಂಡಿದ್ದಾರೆ. ಲಂಚ್ ಬಾಕ್ಸ್, ಮಸಾನ್, ಉಡ್ತಾ ಪಂಜಾಬ್, ಲಸ್ಟ್ ಸ್ಟೋರೀಸ್, ಡೇವಿಡ್, ಬ್ಲಾಕ್ ಫ್ರೈಡೇ ಕಶ್ಯಪ್ ಹಿಟ್ ಸಿನಿಮಾಗಳಾಗಿವೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!