ಹೊಸದಿಗಂತ ಡಿಜಿಟಲ್ ಡೆಸ್ಕ್:
ಯಾವುದೇ ಕಾರ್ಯಕ್ರಮ, ಪೂಜೆ ಪುನಸ್ಕಾರ ನಡೆದರೂ ಹಣೆಗೆ ಕುಂಕುಮ ಇಡದ ಸಿಎಂ ಸಿದ್ದರಾಮಯ್ಯ ನಿನ್ನೆ ಸುದ್ದಿಗೋಷ್ಠಿಯಲ್ಲಿ ಕುಂಕುಮ ಇಟ್ಟುಕೊಂಡು ಬಂದಿದ್ದಾರೆ.
ಇದು ಎಲ್ಲರ ಗಮನವನ್ನು ಸೆಳೆದಿತ್ತು. ಇತ್ತ ಭಾರತದಿಂದ ಆಪರೇಷನ್ ಸಿಂಧೂರ್ ಆರಂಭವಾದ ನಂತರ ಸಿದ್ದರಾಮಯ್ಯ ಹಣೆಗೆ ಸಿಂಧೂರ ಇಟ್ಟುಕೊಂಡು ಬಂದಿದ್ದಾರೆ ಎಂದು ಹೇಳಲಾಗಿತ್ತು.
ಇದಕ್ಕೆ ಸಿಎಂ ಸಿದ್ದರಾಮಯ್ಯ ಕ್ಲಾರಿಟಿ ನೀಡಿದ್ದಾರೆ. ದೇವಸ್ಥಾನಕ್ಕೆ ಹೋಗಿದ್ದೆ. ಇಲ್ಲೇ ಪಟ್ಟಾಲಮ್ಮ ದೇವಸ್ಥಾನ ಇದೆ. ಅಲ್ಲಿ ಊರ ಜಾತ್ರೆ ಮಾಡ್ತಿದ್ರು. ಕೆಎಂ ನಾಗರಾಜ್ ಒತ್ತಾಯ ಮಾಡಿ ನನ್ನ ಕರೆಸಿಕೊಂಡಿದ್ರು. ಹೀಗಾಗಿ ಅಲ್ಲಿ ಹೋಗಿ ದೇವಸ್ಥಾನದಲ್ಲಿ ದರುಶನ ಮಾಡಿಕೊಂಡು ಬಂದೆ. ಅದೇ ಕಾರಣಕ್ಕೆ ಹಣೆಯಲ್ಲಿ ಕುಂಕುಮ ಇದೆ ಎಂದು ಹೇಳಿದ್ದಾರೆ.