ಹೊಸದಿಗಂತ ಡಿಜಿಟಲ್ ಡೆಸ್ಕ್:
ಸ್ಯಾಂಡಲ್ವುಡ್ ರಾಕಿಂಗ್ ಸ್ಟಾರ್ ಯಶ್ ಹಾಗು ತೆಲುಗು ಆಕ್ಟರ್ ಮಾಸ್ ಮಹಾರಾಜ ರವಿತೇಜಾ ಫ್ಯಾನ್ಸ್‌ಗಳ ನಡುವಿನ ವಾರ್ ಶುರುವಾಗಿದೆ.
ಇದಕ್ಕೆ ಕಾರಣ ಟೈಗರ್ ನಾಗೇಶ್ವರ್ ರಾವ್ ಸಿನಿಮಾ ಪ್ರಮೋಷನ್ ಗಾಗಿ ರವಿತೇಜಾ ಯಶ್ ಹೆಸರು ಬಳಸಿಕೊಂಡಿದ್ದಾರೆ. ಅದಲ್ಲದೆ. ರಾಕಿಭಾಯ್ ಬಗ್ಗೆ ಹಗುರವಾಗಿ ತೆಲುಗು ನಟ ಮಾತನಾಡಿದ್ದಾರೆ ಎನ್ನುವ ವಾದ ಕೇಳಿ ಬಂದಿದೆ. ರವಿತೇಜ ವಿರುದ್ಧ ಯಶ್ ಫ್ಯಾನ್ಸ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ವಿಷಯವೇನೆಂದರೆ , ಯಶ್ ನನಗೆ ಗೊತ್ತೇ ಇರಲಿಲ್ಲ, ಕೆಜಿಎಫ್‌ನಂಥ ಚಿತ್ರ ಸಿಗೋಕೆ ಯಶ್ ಬಹಳ ಲಕ್ಕಿ ಎನ್ನುವ ಅರ್ಥದಲ್ಲಿ ರವಿ ತೇಜಾ ಮಾತನಾಡಿದ್ದರು. ಇದರ ಬೆನ್ನಲ್ಲಿಯೇ ಯಶ್ ಅವರ ಅಭಿಮಾನಿಗಳು ಕೆಜಿಎಫ್ ಮಾಡೋಕು ಮುನ್ನವೇ ಯಶ್ ದೊಡ್ಡ ಸ್ಟಾರ್ ಆಗಿದ್ದರು. ಅವರಬಗ್ಗೆ ಇಷ್ಟ ಹಗುರವಾಗಿ ಮಾತನಾಡೋದು ಸರಿಯಲ್ಲ ಎಂದಿದ್ದಾರೆ.
ಇನ್ನೂ ಕೆಲವರು ಈ ವಿಚಾರವಾಗಿ ರವಿತೇಜ, ಯಶ್ ಅವರಲ್ಲಿ ಕ್ಷಮೆ ಕೇಳಬೇಕು ಎಂದು ಆಗ್ರಹಿಸಿದ್ದಾರೆ.
ಟಿವಿಯ ಕಾರ್ಯಕ್ರಮದಲ್ಲಿ ನಿರೂಪಕಿ ಕೇಳುವ ಕೆಲವು ಪ್ರಶ್ನೆಗಳಿಗೆ ಅವರು ಉತ್ತರ ನೀಡುತ್ತಾ ರವಿತೇಜ, ಕೆಲವೊಂದು ನಾಯಕರಿಂದ ಏನನ್ನು ಕದಿಯಲು ಇಷ್ಟಪಡುತ್ತೀರಿ ಎನ್ನುವ ಪ್ರಶ್ನೆಗಳನ್ನು ಕೇಳುತ್ತಾ, ರಾಮ್‌ಚರಣ್, ದಳಪತಿ ವಿಜಯ್, ರಾಜಮೌಳಿ ಬಗ್ಗೆ ಕೇಳುತ್ತಾರೆ. ಅವುಗಳಿಗೆ ಹೆಮ್ಮೆಯಿಂದಲೇ ರವಿತೇಜಾ ಉತ್ತರ ನೀಡುತ್ತಾರೆ. ಕೆಲವರಿಂದ ಡಾನ್ಸ್, ವಿಶನ್ ಕದಿಯಬೇಕು ಎನ್ನುತ್ತಾರೆ. ಇದೇ ಹಂತದಲ್ಲಿ ನಿರೂಪಕಿ ಯಶ್ ಬಗ್ಗೆ ಕೇಳಿದಾಗ, ‘ಯಶ್..’ ಎಂದು ಒಮ್ಮೆಲೆ ದೊಡ್ಡದಾಗಿ ಹೇಳುವ ರವಿತೇಜಾ, ‘ಯಶ್ ಬಗ್ಗೆ ನಾನು ನೋಡಿದ್ದೇ..ಆ ಕೆಲವು ಚಿತ್ರಗಳಿಂದ. ಅದು ಕೆಜಿಎಫ್..ಕೆಜಿಎಫ್‌ನಂಥ ಚಿತ್ರ ಸಿಗೋಕೆ ಅವರು ಲಕ್ಕಿ ಆಗಿದ್ದರು’ ಎಂದು ಹೇಳಿದ್ದಾರೆ. ರವಿತೇಜಾ ಹೇಳಿರುವ ಈ ಮಾತೇ ಈಗ ವಿವಾದಕ್ಕೆ ಕಾರಣವಾಗಿದೆ.
ಇನ್ನು ರವಿತೇಜ ಫ್ಯಾನ್ಸ್‌ಗಳು ಟೀಕೆಗಳ ಬಗ್ಗೆ ಪ್ರತಿಕ್ರಿಯೆ ನೀಡಿದ್ದು, ಎಲ್ಲಾ ಯಶ್ ಫ್ಯಾನ್ಸ್‌ಗೆ ಹೇಳೋದಿಷ್ಟೇ. ರವಿತೇಜ ಅವರ ಉದ್ದೇಶ ಯಶ್ ಅವರಿಗೆ ಅವಮಾನ ಮಾಡುವುದಾಗಿರಲಿಲ್ಲ.ಅವರು ಕೇವಲ ತಮ್ಮ ಅಭಿಪ್ರಾಯ ಹೇಳಿದ್ದಾರೆ.ಅದಲ್ಲದೆ, ನಟರ ಹಾರ್ಡ್‌ವರ್ಕ್ ಹಾಗೂ ಬದ್ಧತೆಯ ಬಗ್ಗೆ ರವಿತೇಜಾ ಅವರಿಗೆ ತಿಳಿದಿದೆ’ ಎಂದು ಬರೆದಿದ್ದಾರೆ.