ನೀವು ಏಕೆ ನಿವೃತ್ತಿ ತೆಗೆದುಕೊಂಡಿದ್ದೀರಿ?: ಕೊಹ್ಲಿಗೆ ಬಂತು ಅಭಿಮಾನಿಯ ಪತ್ರ!

ಹೊಸದಿಗಂತ ಡಿಜಿಟಲ್ ಡೆಸ್ಕ್: 

ಟೆಸ್ಟ್ ಕ್ರಿಕೆಟ್‌ನಿಂದ ನಿವೃತ್ತಿ ಹೊಂದುವ ಮೂಲಕ ವಿರಾಟ್ ಕೊಹ್ಲಿ ಬಹುತೇಕ ಎಲ್ಲರನ್ನು ದಿಗ್ಭ್ರಮೆಗೊಳಿಸಿದೆ. ಉತ್ತಮ ಫಾರ್ಮ್‌ನಲ್ಲಿದ್ದರೂ ನಿವೃತ್ತಿ ಎಲ್ಲರಿಗೆ ಅಚ್ಚರಿ ಮತ್ತು ಬೇಸರ ಮೂಡಿಸಿತ್ತು.

ಕೊಹ್ಲಿ ಅವರ ನಿವೃತ್ತಿ ಘೋಷಣೆಯು ಅವರ ಅಭಿಮಾನಿಗಳಿಗೆ ಮಾತ್ರವಲ್ಲದೆ ತಂಡದ ಮಾಜಿ ಆಟಗಾರರಿಗೂ ಅಚ್ಚರಿ ಮೂಡಿಸಿದೆ. ಕೊಹ್ಲಿ ನಿವೃತ್ತಿಗೆ ತಮ್ಮ ಮಗಳು ಹಿನಾಯಾ ಹೇಗೆ ಭಾವನಾತ್ಮಕವಾಗಿ ಪ್ರತಿಕ್ರಿಯಿಸಿದಳು ಎಂಬುದನ್ನು ಭಾರತದ ಮಾಜಿ ಕ್ರಿಕೆಟಿಗ ಹರ್ಭಜನ್ ಸಿಂಗ್ ಇತ್ತೀಚಿನ ಸಂದರ್ಶನವೊಂದರಲ್ಲಿ ಹಂಚಿಂಕೊಂಡಿದ್ದಾರೆ.

‘ಅವಳು ನನಗೆ, ‘ಅಪ್ಪಾ, ವಿರಾಟ್ ಕೊಹ್ಲಿ ನಿವೃತ್ತಿ ಏಕೆ ತೆಗೆದುಕೊಂಡರು? ನಾನು ಅವರಿಗೆ ಸಂದೇಶ ಕಳುಹಿಸಲು ಬಯಸುತ್ತೇನೆ’ ಎಂದು ಕೇಳಿದಳು’. ಬಳಿಕ ತಾನೇ ವಿರಾಟ್ ಕೊಹ್ಲಿಗೆ ಪತ್ರವನ್ನು ಕೂಡ ಬರೆದಳು: ‘ನಾನು ಹಿನಾಯಾ. ನೀವು ಏಕೆ ನಿವೃತ್ತಿ ತೆಗೆದುಕೊಂಡಿದ್ದೀರಿ?’ ಎಂದು ಕೇಳಿದ್ದಳು. ಆ ಪತ್ರಕ್ಕೆ ಕೊಹ್ಲಿ ಕೂಡ ಪ್ರೀತಿಯಿಂದ ಉತ್ತರಿಸುತ್ತಾ, ‘ಬೇಟಾ, ಈಗ ಸಮಯ ಬಂದಿದೆ’ ಎಂದು ಪ್ರತಿಕ್ರಿಯಿಸಿದರು ಎಂದು ಹರ್ಭಜನ್ ಸಿಂಗ್ ತಿಳಿಸಿದ್ದಾರೆ.

ವಿರಾಟ್ ಕೊಹ್ಲಿ 123 ಟೆಸ್ಟ್‌ಗಳಲ್ಲಿ 9,230 ರನ್‌ಗಳನ್ನು ಗಳಿಸಿದ್ದಾರೆ ಮತ್ತು 68 ಪಂದ್ಯಗಳಿಗೆ ನಾಯಕತ್ವ ವಹಿಸಿಕೊಂಡಿದ್ದು, 40ರಲ್ಲಿ ಗೆಲುವು ಸಾಧಿಸಿದ ದಾಖಲೆ ಹೊಂದಿದ್ದಾರೆ. 2024-25ರ ಆಸ್ಟ್ರೇಲಿಯಾ ವಿರುದ್ಧದ ಬಾರ್ಡರ್-ಗವಾಸ್ಕರ್ ಟ್ರೋಫಿಯಲ್ಲಿ ವಿರಾಟ್ ಕೊನೆಯ ಬಾರಿ ಆಡಿದ್ದರು. ಪರ್ತ್‌ನಲ್ಲಿ ಏಕೈಕ ಶತಕ ಕೂಡ ಬಾರಿಸಿದ್ದರು. ಆದರೆ, ಅಷ್ಟೇನು ಉತ್ತಮ ಫಾರ್ಮ್‌ನಲ್ಲಿ ಇಲ್ಲದ ಕಾರಣ ಟೀಕೆಗಳು ಕೇಳಿಬಂದಿದ್ದವು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!