ಹುಟ್ಟಿದ ಕೆಲವೇ ದಿನಗಳಿಂದ ಮಕ್ಕಳಿಗೆ ಎಣ್ಣೆ ಸ್ನಾನ ಮಾಡಿಸಲಾಗುತ್ತದೆ, ಮಕ್ಕಳಿಗೆ ಸ್ನಾನ ಮಾಡಿಸೋದಕ್ಕೂ ತರಬೇತಿ ಪಡೆಯುವಂತಾಗಿದೆ, ಇದಕ್ಕೆಂದೇ ಸಾಕಷ್ಟು ಅನುಭವ ಇರುವ ಅಜ್ಜಿಯರನ್ನು ಕರೆಸಲಾಗುತ್ತದೆ. ಅವರು ತಮ್ಮ ಅನುಭವದ ಮೇರೆಗೆ ಮಕ್ಕಳಿಗೆ ಎಣ್ಣೆ ಹಚ್ಚಿ, ಮಾಲಿಷ್ ಮಾಡಿ ಬಿಸಿ ನೀರು ಹಾಕಿ ಸ್ನಾನ ಮಾಡಿಸುತ್ತಾರೆ. ಬಿಸಿ ನೀರ ಸ್ನಾನಕ್ಕೆ ಮಕ್ಕಳು ಎರಡು ಗಂಟೆಯಾದ್ರೂ ನಿದ್ದೆ ಮಾಡಲೇಬೇಕು… ಎಣ್ಣೆ ಹಚ್ಚಿ ಸ್ನಾನ ಮಾಡಿಸೋದ್ರಿಂದ ಏನು ಲಾಭ?
- ಮಕ್ಕಳ ಚರ್ಮ ಹೈಡ್ರೇಟ್ ಆಗಿರಲು ಸಹಾಯ ಮಾಡುತ್ತದೆ.
- ಮಕ್ಕಳ ಮೃದುವಾದ ಚರ್ಮವನ್ನು ರಕ್ಷಿಸುತ್ತದೆ.
- ಮಸಲ್‌ಗಳನ್ನು ರಿಲ್ಯಾಕ್ಸ್ ಮಾಡಿ, ಮೈ ಕೈ ನೋವು ಹೋಗಿಸುತ್ತದೆ.
- ಕೆಲವು ಎಣ್ಣೆಗಳ ಮಾಲಿಷ್‌ನಿಂದ ಉತ್ತಮ ನ್ಯೂಟ್ರಿಯಂಟ್ಸ್ ಚರ್ಮಕ್ಕೆ ಹೋಗುತ್ತದೆ.
- ಹಾಗೇ ಸ್ನಾನ ಮಾಡಿಸಿದರೆ ಮಕ್ಕಳ ಚರ್ಮ ಒಣಗಿಹೋಗುತ್ತದೆ.
- ಸೂರ್ಯಕಾಂತಿ ಎಣ್ಣೆಯಿಂದ ಮಾಲಿಷ್ ಮಾಡಿದರೆ ಮಕ್ಕಳ ಚರ್ಮ, ಮೂಳೆ ಆರೋಗ್ಯಕರವಾಗಿ ಇರುತ್ತದೆ. ಇನ್ನು ರೋಗ ನಿರೋಧಕ ಶಕ್ತಿಯೂ ಹೆಚ್ಚುತ್ತದೆ.
- ಅರಿಶಿಣದ ಎಣ್ಣೆಯಿಂದ ಮಾಲಿಷ್ ಮಾಡಿದರೆ ಚರ್ಮ ಸಂಬಂಧಿತ ಸಮಸ್ಯೆಗಳು ಕಾಡುವುದಿಲ್ಲ.
- ಮಾಲಿಷ್‌ನಿಂದ ಮೂಳೆಗಳು ಗಟ್ಟಿಯಾಗುತ್ತವೆ.
- ಉತ್ತಮ ಮಾಲೀಷ್‌ನಿಂದ ಮಕ್ಕಳು ಚೆನ್ನಾಗಿ ಮಲಗುತ್ತಾರೆ.
- ಇನ್ಫೆಕ್ಷನ್ ಅಥವಾ ಇನ್ಯಾವುದೇ ಚರ್ಮ ಸಮಸ್ಯೆಯಿಂದ ಮಕ್ಕಳನ್ನು ದೂರ ಇರಿಸಲು ಮಾಲಿಷ್ ಬೇಕೆ ಬೇಕು