Wednesday, November 5, 2025

Yawning | ಎಷ್ಟೇ ಒಳ್ಳೆಯ ನಿದ್ದೆ ಮಾಡಿದ್ರು ಪದೇ ಪದೇ ಆಕಳಿಕೆ ಬರೋದು ಯಾಕೆ?

ನಾವು ಕೆಲವೊಮ್ಮೆ ಎಷ್ಟೇ ಚೆನ್ನಾಗಿ ನಿದ್ದೆ ಮಾಡಿದ್ರೂ, ದಿನದ ಮಧ್ಯದಲ್ಲೋ ಅಥವಾ ಬೆಳಗ್ಗೆ ಎದ್ದ ತಕ್ಷಣವೇ ಆಕಳಿಕೆ ಬರುತ್ತದೆ. “ನಾನು ನಿದ್ದೆ ಚೆನ್ನಾಗಿ ಮಾಡಿದ್ದೇನಲ್ಲಾ, ಆದ್ರೂ ಏಕೆ ಆಕಳಿಕೆ ಬರುತ್ತಿದೆ?” ಎಂಬ ಪ್ರಶ್ನೆ ಅನೇಕರಿಗೆ ಕಾಡುತ್ತದೆ. ಆದರೆ ಇದು ಕೇವಲ ನಿದ್ದೆ ಕೊರತೆಯ ಸೂಚನೆ ಅಲ್ಲ. ದೇಹದ ಒಳಗಿನ ಹಲವು ಜೀವವೈಜ್ಞಾನಿಕ ಪ್ರಕ್ರಿಯೆಗಳ ಪರಿಣಾಮವಾಗಿದೆ.

  • ಮಸ್ತಿಷ್ಕದ ತಂಪುಗೊಳಿಸುವ ಕ್ರಿಯೆ: ಆಕಳಿಕೆ ಅಂದರೆ ಕೇವಲ ಆಯಾಸದ ಸೂಚನೆ ಅಲ್ಲ. ನಾವೊಮ್ಮೆ ಆಕಳಿಸಿದಾಗ, ಮಸ್ತಿಷ್ಕದ ಉಷ್ಣತೆ ಸ್ವಲ್ಪ ಮಟ್ಟಿಗೆ ಕಡಿಮೆಯಾಗುತ್ತದೆ. ಇದು ಮಸ್ತಿಷ್ಕವನ್ನು ತಂಪಾಗಿಸಲು ಮತ್ತು ಎಚ್ಚರವಾಗಿಡಲು ಸಹಾಯ ಮಾಡುತ್ತದೆ.
  • ಆಮ್ಲಜನಕದ ಕೊರತೆಯ ಪ್ರತಿಕ್ರಿಯೆ: ಕೆಲವೊಮ್ಮೆ ದೇಹದಲ್ಲಿ ಆಮ್ಲಜನಕದ ಪ್ರಮಾಣ ಕಡಿಮೆಯಾದಾಗ ಆಕಳಿಕೆ ಬರುತ್ತದೆ. ಆಕಳಿಸುವಾಗ ಆಳವಾದ ಉಸಿರಾಟವಾಗುವುದರಿಂದ ಹೆಚ್ಚು ಆಮ್ಲಜನಕ ಒಳಗೆಳೆಯಲಾಗುತ್ತದೆ ಮತ್ತು ದೇಹಕ್ಕೆ ಚೈತನ್ಯ ಸಿಗುತ್ತದೆ.
  • ಹಾರ್ಮೋನ್ ಬದಲಾವಣೆಗಳು: ನಿದ್ದೆಯಿಂದ ಎದ್ದುಬಂದ ನಂತರ ಅಥವಾ ಒತ್ತಡದ ಸಮಯದಲ್ಲಿ ಹಾರ್ಮೋನ್ ಮಟ್ಟ ಬದಲಾಗುತ್ತದೆ. ಈ ಬದಲಾವಣೆಗಳು ದೇಹದಲ್ಲಿ ಆಕಳಿಕೆಯ ಪ್ರಮಾಣವನ್ನು ಹೆಚ್ಚಿಸಬಹುದು.
  • ಸೋಮಾರಿ ಜೀವನಶೈಲಿ ಮತ್ತು ಆಹಾರ:
  • ದೇಹ ಚುರುಕಾಗಿರದಿದ್ದಾಗ ಅಥವಾ ಪೋಷಕಾಂಶ ಕಡಿಮೆ ಆಹಾರ ಸೇವನೆಯಾಗಿದಾಗ ದೇಹದ ಶಕ್ತಿ ಮಟ್ಟ ಕುಸಿಯುತ್ತದೆ. ಪರಿಣಾಮವಾಗಿ ದೇಹ ಆಕಳಿಕೆಯ ಮೂಲಕ ವಿಶ್ರಾಂತಿಯನ್ನು ಹುಡುಕಲು ಯತ್ನಿಸುತ್ತದೆ.
  • ಆರೋಗ್ಯ ಸಮಸ್ಯೆ: ಸುಮ್ಮನೆ ಆಕಳಿಕೆ ಬರುತ್ತಿದ್ದರೇ ಅದನ್ನು ಮೆದುಳಿನ ಗೆಡ್ಡೆ, ಪಾರ್ಶ್ವವಾಯುನಂತ ಕಾಯಿಲೆಗಳ ಲಕ್ಷಣವಾಗಿರುವ ಸಾಧ್ಯತೆಗಳಿವೆ. ಇಂತಹ ವೇಳೆ ಸೂಕ್ತ ವೈದ್ಯರನ್ನು ಸಂಪರ್ಕಿಸಿ ಸಲಹೆ ಪಡೆಯಬೇಕು.(Disclaimer: ಈ ಲೇಖನವು ಅಂತರ್ಜಾಲ ಮೂಲಗಳಿಂದ ಸಂಗ್ರಹಿಸಿದ ಮಾಹಿತಿಯಾಧಾರಿತವಾಗಿದೆ. ಇದು ವೈದ್ಯಕೀಯ ಸಲಹೆಯಲ್ಲ. ಹೆಚ್ಚಿನ ಮಾಹಿತಿಗಾಗಿ ತಜ್ಞರನ್ನು ಸಂಪರ್ಕಿಸಿ.)
error: Content is protected !!