ಇತ್ತೀಚೆಗೆ ಭಾರತದಲ್ಲಿ ಕೊರಿಯನ್ ಡ್ರಾಮಾ (K-drama) ನೋಡುವವರ ಸಂಖ್ಯೆ ಹೆಚ್ಚಾಗಿದೆ. ಕೊರಿಯಾಗೆ ಹೋಗೋದು, ಕೊರಿಯನ್ ಫುಡ್ ಕ್ರೇಝ್, ಅವರ ಬಟ್ಟೆ ಎಲ್ಲದಕ್ಕೂ ಇಂಡಿಯನ್ ಟೀನ್ಸ್ ಮಾರುಹೋಗಿದ್ದಾರೆ. ಕೊರಿಯನ್ ಡ್ರಾಮಾದಲ್ಲಿ ಅಂಥ ಸ್ಪೆಷಲ್ ಏನಿದೆ?
ಕೊರಿಯನ್ ಡ್ರಾಮಾಗಳಲ್ಲಿ ಫ್ಯಾಮಿಲಿ ವ್ಯಾಲ್ಯೂ ಹೆಚ್ಚು. ಇದು ನಮ್ಮಲ್ಲಿಯೂ ಇರುವ ಕಾರಣ ಕಂಟೆಂಟ್‌ಗೆ ಆಡಿಯನ್ಸ್ ರಿಲೇಟ್ ಆಗುತ್ತಾರೆ. ನಮ್ಮ ಚೈಲ್ಡ್‌ವುಡ್ ಅವರ ಚೈಲ್ಡ್‌ವುಡ್‌ನಲ್ಲಿ, ಆಟಗಳಲ್ಲಿ ಅಷ್ಟೇನೂ ವ್ಯತ್ಯಾಸ ಇಲ್ಲದ ಕಾರಣ ತಕ್ಷಣ ಸೀರೀಸ್ ಇಷ್ಟವಾಗುತ್ತದೆ.
ಕೊರಿಯನ್ ಡ್ರಾಮಾಗಳಲ್ಲಿನ ಕ್ಯಾರೆಕ್ಟರ್‌ಗಳು ಸ್ಫುರದ್ರೂಪಿಗಳಾಗಿರುತ್ತಾರೆ. ಮೊದಮೊದಲು ಎಲ್ಲರೂ ಒಂದೇ ಥರ ಕಂಡರೂ ಸೀರೀಸ್ ನೋಡುತ್ತಾ ನೋಡುತ್ತಾ ಅವರು ಇಷ್ಟವಾಗ್ತಾರೆ. ಸೀರೀಸ್‌ಗಳಲ್ಲಿ ಮೇಲ್ ಕ್ಯಾರೆಕ್ಟರ್ಸ್ ಹೆಣ್ಣುಮಕ್ಕಳನ್ನು ನೋಡಿಕೊಳ್ಳುವ ರೀತಿ, ಜೆಂಟಲ್‌ಮನ್‌ನೆಸ್ ಇಷ್ಟಪಡ್ತಾರೆ.
ಕೆ ಡ್ರಾಮಾಗಳ ಸ್ಟೋರಿಲೈನ್ ವಿಭಿನ್ನವಾಗಿರುತ್ತದೆ. ಅಲ್ಲಿನ ಸೀನ್ಸ್ ಅದನ್ನು ಇನ್ನಷ್ಟು ಸುಂದರವಾಗಿಸುತ್ತದೆ. ಥ್ರಿಲ್ಲರ್, ಹಾರರ್, ಲವ್‌ಸ್ಟೋರಿ, ಸರ್‌ರಿಯಲ್ ಕಥೆಗಳು ಜನರ ಮನಸ್ಸನ್ನು ಸೆಳೆಯುತ್ತಿವೆ.
ಕೆಡ್ರಾಮಾಗಳನ್ನು ನೋಡೋದಕ್ಕೆ ಸ್ಪೆಷಲ್ ಸಬ್ಸ್‌ಕ್ರಿಪ್ಷನ್ ಬೇಕಿಲ್ಲ. ಈಗಾಗಲೇ ಇರುವ ನೆಟ್‌ಫ್ಲಿಕ್ಸ್, ಅಮೇಝಾನ್ ಪ್ರೈಮ್‌ನಲ್ಲಿ ಸೀರೀಸ್‌ಗಳು ಸುಲಭವಾಗಿ ಸಿಗುತ್ತವೆ. ಸೋಶಿಯಲ್ ಮೀಡಿಯಾದಲ್ಲಿಯೂ ಕೆ-ಕೆಡ್ರಾಮಾ ತನ್ನ ಛಾಪು ಮೂಡಿಸಿದೆ.
ಕೆ-ಡ್ರಾಮಾಗಳಲ್ಲಿನ ಹಾಡುಗಳನ್ನು ಜನ ಇಷ್ಟಪಡ್ತಾರೆ. ತಮ್ಮದೇ ಸ್ಪೆಷಲ್ ಹಾಡುಗಳ ಮೂಲಕ ಕೆ ಇಂಡಸ್ಟ್ರಿ ಜಗತ್ತಿನೆಲ್ಲೆಡೆ ವಿಸ್ತರಿಸುತ್ತದೆ. ಸ್ನೇಹಿತರ ಗುಂಪಿನಲ್ಲಿ ಒಬ್ಬರು ಕೆ-ಡ್ರಾಮಾ ನೋಡೋರಿದ್ದರೆ ಅವರು ನಾಲ್ಕು ಜನಕ್ಕೆ ತೋರಿಸ್ತಿದ್ದಾರೆ. ಕಂಟೆಂಟ್ ಹೀಗೆ ಎಲ್ಲ ಕಡೆ ಹಬ್ಬಿದೆ.