ಶ್ರಾವಣ ಮಾಸ (Sawan Month) ಸಮೀಪಿಸುತ್ತಿದ್ದಂತೆ ದೇಶಾದ್ಯಂತ ಹಿಂದೂ ಭಕ್ತರಲ್ಲಿ ಧಾರ್ಮಿಕತೆ, ಭಕ್ತಿ ಹಾಗೂ ಸಂಪ್ರದಾಯಗಳ ಪಾಲನೆಯ ಉತ್ಸಾಹ ಹೆಚ್ಚಾಗುತ್ತದೆ. ಈ ಪವಿತ್ರ ಸಮಯದಲ್ಲಿ ಶಿವ ಮತ್ತು ಪಾರ್ವತಿ ದೇವಿಯ ಆರಾಧನೆಗೆ ವಿಶೇಷ ಮಹತ್ವ ನೀಡಲಾಗುತ್ತದೆ. ಉಪವಾಸ, ಪೂಜೆ, ಜಪ, ಧ್ಯಾನ ಸೇರಿದಂತೆ ವಿವಿಧ ಆಚರಣೆಗಳು ಹಾಗೂ ದೇಶದಾದ್ಯಂತ ನಡೆಯುತ್ತವೆ. ಇವುಗಳಲ್ಲಿ ಒಂದು ಈ ಶ್ರಾವಣ ಮಾಸದಲ್ಲಿ ವಿಶೇಷವಾಗಿ ವಿವಾಹಿತ ಮಹಿಳೆಯರು ಧರಿಸುವ ಹಸಿರು ಬಳೆಗಳ ಸಂಪ್ರದಾಯ.
ಇವು ಕೇವಲ ಅಲಂಕಾರಿಕವಷ್ಟೇ ಅಲ್ಲ, ಅದಕ್ಕೆ ಆಳವಾದ ಧಾರ್ಮಿಕ, ಜ್ಯೋತಿಷ್ಯ ಹಾಗೂ ಸಾಂಸ್ಕೃತಿಕ ಹಿನ್ನೆಲೆ ಇದೆ. ಶ್ರಾವಣವು ಪ್ರಕೃತಿಯ ಶುದ್ಧತೆ, ಹಸಿರುತನ ಮತ್ತು ಸಮೃದ್ಧಿಯ ಪ್ರತಿರೂಪವಾಗಿದ್ದು, ಶಿವನಿಗೆ ಅತ್ಯಂತ ಪ್ರಿಯವಾದ ಕಾಲವೆಂದು ಭಕ್ತರು ನಂಬಿದ್ದಾರೆ. ಈ ಸಂದರ್ಭದಲ್ಲಿ ಹಸಿರು ಬಣ್ಣವು ವಿಶೇಷ ಪುಣ್ಯ ಹಾಗೂ ಶಕ್ತಿ ಇದೆ ಎಂದು ನಂಬಲಾಗಿದೆ.
ಶಿವನಿಗೆ ಹಸಿರು ಬಣ್ಣದ ಬಿಲ್ವಪತ್ರ, ಭಾಂಗ್ ನೈವೇದ್ಯವಾಗಿ ಅರ್ಪಿಸಲಾಗುವುದು. ಪಾರ್ವತಿ ದೇವಿಗೂ ಹಸಿರು ಅತ್ಯಂತ ಪ್ರಿಯವಾದ ಬಣ್ಣ. ಪಾರ್ವತಿ ದೇವಿಗೂ ಹಸಿರು ಬಣ್ಣ ಇಷ್ಟ. ಸಾಂಪ್ರದಾಯಿಕ “ಸೋಲಾ ಶೃಂಗಾರ್” (ಹದಿನಾರು ಅಲಂಕಾರಗಳು) ನಿಂದ ಪೂಜಿಸಲಾಗುತ್ತದೆ. ಅಲ್ಲಿ ಹಸಿರು ಬಳೆಗಳು ಪ್ರಮುಖ ಸ್ಥಾನವನ್ನು ಹೊಂದಿವೆ. ಅವುಗಳನ್ನು ಧರಿಸುವುದರಿಂದ ಪತಿಗೆ ದೀರ್ಘಾಯುಷ್ಯ, ಸಂಸಾರದಲ್ಲಿ ಶಾಂತಿ ಮತ್ತು ಸುಖದ ಸಂಕೇತವಾಗಿ ಮಹಿಳೆಯರು ಈ ಬಳೆಗಳನ್ನು ಧರಿಸುತ್ತಾರೆ.
ಜ್ಯೋತಿಷ್ಯ ದೃಷ್ಟಿಯಿಂದ ಹಸಿರು ಬಣ್ಣವು ಬುಧ ಗ್ರಹವನ್ನು ಪ್ರತಿನಿಧಿಸುತ್ತದೆ. ಇದು ಬುದ್ಧಿಮತ್ತೆ, ಸಮೃದ್ಧಿ ಹಾಗೂ ಉತ್ತಮ ಸಂವಹನಕ್ಕೆ ಕಾರಣವಾಗುತ್ತೆ. ಶ್ರಾವಣದ ಸಮಯದಲ್ಲಿ ಹಸಿರು ಬಳೆ ಧರಿಸುವುದರಿಂದ ಈ ಗ್ರಹದ ಶಕ್ತಿಯನ್ನು ಶಕ್ತಿಯುತಗೊಳಿಸಿ, ವ್ಯಕ್ತಿಯ ಜೀವನದಲ್ಲಿ ಸುಧಾರಣೆ ತರಬಲ್ಲದು.
ಇದಲ್ಲದೆ, ಹರಿಯಾಲಿ ತೀಜ್ ಹಬ್ಬದ ವೇಳೆ ಮಹಿಳೆಯರು ಹಸಿರು ಉಡುಪು, ಚೂಡಾ ಧರಿಸಿ ಪಾರ್ವತಿ ದೇವಿಯ ಆರಾಧನೆ ಮಾಡುವುದು, ಅವರ ಕುಟುಂಬದಲ್ಲಿ ಪ್ರೀತಿ, ಭಾವನಾತ್ಮಕ ಬಾಂಧವ್ಯ ಮತ್ತು ಸಾಮರಸ್ಯವನ್ನು ಹೆಚ್ಚಿಸಲಿದೆ ಎನ್ನುವುದು ಭಕ್ತಿ ಭಾವನೆಯ ನಂಬಿಕೆ.
ಒಟ್ಟಿನಲ್ಲಿ, ಶ್ರಾವಣ ಮಾಸದಲ್ಲಿ ಹಸಿರು ಬಳೆ ಧರಿಸುವುದು ಕೇವಲ ಆಚರಣೆಯ ಭಾಗವಲ್ಲ. ಇದು ಶಿವಪಾರ್ವತಿಯರ ಆಶೀರ್ವಾದ ಪಡೆಯಲು, ವೈವಾಹಿಕ ಜೀವನದಲ್ಲಿ ಸಮೃದ್ಧಿ ಹಾಗೂ ಆಧ್ಯಾತ್ಮಿಕ ಭಾವನೆಗಳನ್ನು ವ್ಯಕ್ತಪಡಿಸಲು ಪುಣ್ಯಕರ ಮಾರ್ಗವಾಗಿದೆ.