ರಾತ್ರಿ ಗಾಢ ನಿದ್ರೆಯಲ್ಲಿದ್ದಾಗಲೇ ಏಕಾಏಕಿ ಕಾಲಿನ ಸ್ನಾಯುಗಳು ಬಿಗಿದುಕೊಂಡಂತೆ ಆಗಿ ಎಚ್ಚರವಾಗುತ್ತಾ? ಕೆಲ ಸೆಕೆಂಡ್‌ಗಳ ಈ ನೋವು ದೊಡ್ಡ ಭಯ ಹುಟ್ಟಿಸುತ್ತದೆ. ಆದರೆ ಇದಕ್ಕೆ ಸರಳ ಕಾರಣಗಳೇ ಇವೆ.
ದೇಹಕ್ಕೆ ನೀರಿನ ಕೊರತೆ ಇದ್ದಾಗ ಸ್ನಾಯುಗಳು ಸರಿಯಾಗಿ ಕೆಲಸ ಮಾಡಲ್ಲ. ದಿನಪೂರ್ತಿ ನೀರು ಕಡಿಮೆ ಕುಡಿದಿದ್ದರೆ, ಅದರ ಪರಿಣಾಮ ರಾತ್ರಿ ಕಾಣಿಸಿಕೊಳ್ಳುತ್ತದೆ. ಅದೇ ರೀತಿ ಕ್ಯಾಲ್ಸಿಯಂ, ಮ್ಯಾಗ್ನೀಷಿಯಂ ಅಥವಾ ಪೊಟ್ಯಾಷಿಯಂ ಕೊರತೆಯಾದರೂ ಸ್ನಾಯುಗಳು ಸಡನ್ ಆಗಿ ಕುಗ್ಗಬಹುದು. ದಿನವಿಡೀ ಹೆಚ್ಚು ನಿಂತು ಕೆಲಸ ಮಾಡುವುದು, ಹೆಚ್ಚು ನಡೆಯುವುದು ಅಥವಾ ವ್ಯಾಯಾಮದ ನಂತರ ಸರಿಯಾಗಿ ವಿಶ್ರಾಂತಿ ಪಡೆಯದಿರುವುದೂ ಕಾರಣವಾಗಬಹುದು.
ಕೆಲವೊಮ್ಮೆ ನಿದ್ರೆಯಲ್ಲಿನ ತಪ್ಪು ಸ್ಥಿತಿ, ಕಾಲುಗಳನ್ನು ಹೆಚ್ಚು ಮಡಚಿಕೊಂಡು ಮಲಗುವುದರಿಂದಲೂ ಈ ಸಮಸ್ಯೆ ಉಂಟಾಗುತ್ತದೆ. ವಯಸ್ಸು ಹೆಚ್ಚಾದಂತೆ ರಕ್ತಸಂಚಾರ ನಿಧಾನವಾಗುವುದೂ ಒಂದು ಕಾರಣ.
ಇದು ದೇಹ ಕೊಡುವ ಸಣ್ಣ ಸಿಗ್ನಲ್. ನೀರು, ಪೋಷಕಾಂಶ, ವಿಶ್ರಾಂತಿ ಇವನ್ನೆಲ್ಲ ಗಮನಿಸಿದರೆ ಈ ಮಧ್ಯರಾತ್ರಿ ನೋವು ಕಡಿಮೆಯಾಗಬಹುದು. ಸಮಸ್ಯೆ ಮರುಕಳಿಸುತ್ತಿದ್ದರೆ ವೈದ್ಯರ ಸಲಹೆ ಅಗತ್ಯ.(Disclaimer: ಈ ಲೇಖನವು ಅಂತರ್ಜಾಲ ಮೂಲಗಳಿಂದ ಸಂಗ್ರಹಿಸಿದ ಮಾಹಿತಿಯಾಧಾರಿತವಾಗಿದೆ)



