Saturday, November 22, 2025

Peanuts | ಕಡಲೆಕಾಯಿ ಹೆಚ್ಚು ತಿಂದ್ರೆ ತಲೆ ಸುತ್ತು ಬರುತ್ತೆ ಯಾಕೆ? ಕಾರಣ ತಿಳ್ಕೊಳಿ

ಸಾಮಾನ್ಯವಾಗಿ ಕಡಲೆಕಾಯಿಯನ್ನು “ಬಡವರ ಬಾದಾಮಿ” ಅಂತ ಕರೀತಾರೆ. ರುಚಿ, ಸೌಖ್ಯ, ಪೋಷಕಾಂಶಎಲ್ಲವನ್ನೂ ಒಟ್ಟಿಗೆ ಕೊಡೋ ಈ ಕಡಲೆ, ಜಾಸ್ತಿ ಪ್ರಮಾಣದಲ್ಲಿ ತಿಂದಾಗ ಕೆಲವರಿಗೆ ತಲೆ ಸುತ್ತು, ವಾಂತಿ ಅಥವಾ ಹೊಟ್ಟೆಯಲ್ಲಿ ಸಂಕಟವಾಗುವಂತಹ ಅನುಭವ ಉಂಟಾಗಬಹುದು ಇದಕ್ಕೂ ಕಾರಣವಿದೆ.

  • ಹೆಚ್ಚು ಕೊಬ್ಬು ಮತ್ತು ಕ್ಯಾಲೊರಿಗಳು: ಕಡಲೆಕಾಯಿಯಲ್ಲಿ ನೈಸರ್ಗಿಕ ಕೊಬ್ಬು ಹೆಚ್ಚು. ಇದನ್ನು ಅತಿಯಾಗಿ ತಿಂದಾಗ ಜೀರ್ಣಕ್ರಿಯೆಗೆ ಒತ್ತಡ ಹೆಚ್ಚಾಗಿ ದೇಹಕ್ಕೆ ಭಾರವಾಗುತ್ತದೆ. ಇದರಿಂದ ತಲೆ ಸುತ್ತುವಂತೆ ತೋರುತ್ತದೆ.
  • ಅಲರ್ಜಿ ಪ್ರತಿಕ್ರಿಯೆ: ಕೆಲವರಿಗೆ ಕಡಲೆಕಾಯಿಗೆ ಸಣ್ಣ ಪ್ರಮಾಣದ ಅಲರ್ಜಿ ಇರಬಹುದು. ಅದನ್ನು ತಿಳಿಯದೇ ಹೆಚ್ಚು ತಿಂದರೆ ತಲೆ ಸುತ್ತು, ಮುಖ ಕೆಂಪಾಗುವುದು, ಉಸಿರಾಟ ಜಾಸ್ತಿ ಆಗುವುದು ಕಂಡುಬರುತ್ತದೆ.
  • ಉಪ್ಪಿನ ಪ್ರಮಾಣ ಹೆಚ್ಚಾದರೆ: ಬೇಯಿಸಿದ ಕಡಲೆಕಾಯಿಗಳಲ್ಲಿ ಉಪ್ಪು ಜಾಸ್ತಿ ಇರುತ್ತದೆ. ಇದು ದೇಹದ ಸೋಡಿಯಂ ಮಟ್ಟ ಹೆಚ್ಚಿಸಿ ರಕ್ತದ ಒತ್ತಡ ತಾತ್ಕಾಲಿಕವಾಗಿ ಏರಿ ತಲೆ ಸುತ್ತುವಿಕೆ ತರಬಹುದು.
  • ರಕ್ತದಲ್ಲಿನ ಸಕ್ಕರೆ ಮಟ್ಟದಲ್ಲಿ ಬದಲಾವಣೆ: ಕಡಲೆಕಾಯಿಯ ಕೊಬ್ಬು ಮತ್ತು ಪ್ರೋಟೀನ್ ಜೀರ್ಣಗೊಳ್ಳಲು ನಿಧಾನವಾಗುತ್ತದೆ. ಇದರಿಂದ ಕೆಲವರಿಗೆ ಸಕ್ಕರೆ ಮಟ್ಟ ತಾತ್ಕಾಲಿಕವಾಗಿ ಕುಸಿತ-ಏರಿಕೆ ಕಾಣಬಹುದು. ಇದರಿಂದ ತಲೆ ಸುತ್ತು ಉಂಟಾಗಬಹುದು.

ತಲೆಸುತ್ತು ಬಂದಾಗ ಏನು ಮಾಡಬೇಕು?
ಕಡಲೆಕಾಯಿ ರುಚಿಯಾದರೂ ನಿಯಂತ್ರಣದಲ್ಲಿ ತಿನ್ನುವುದು ಉತ್ತಮ. ತಲೆ ಸುತ್ತು ಕಾಣಿಸಿದರೆ ಸ್ವಲ್ಪ ನೀರು ಕುಡಿದು, ವಿಶ್ರಾಂತಿ ಮಾಡಿ. ಸಮಸ್ಯೆ ಮುಂದುವರಿದರೆ ವೈದ್ಯರ ಸಲಹೆ ಪಡೆಯುವುದು ಸೂಕ್ತ.

error: Content is protected !!