ಪೈಲಟ್‌ಗಳಿಲ್ಲದ ವಿಮಾನಕ್ಕೆ ನೀವು ಏಕೆ ಪ್ರಯಾಣಿಕರನ್ನು ಹತ್ತಿಸುತ್ತೀರಿ?: ಏರ್‌ ಇಂಡಿಯಾ ವಿರುದ್ಧ ಕ್ರಿಕೆಟರ್‌ ವಾರ್ನರ್‌ ಗರಂ!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಆಸ್ಟ್ರೇಲಿಯಾ ಮಾಜಿ ಸ್ಟಾರ್‌ ಕ್ರಿಕೆಟರ್‌ ಡೇವಿಡ್‌ ವಾರ್ನರ್‌ ಏರ್‌ ಇಂಡಿಯಾ ವಿಮಾನ ವಿಳಂಬವಾಗಿದ್ದಕ್ಕೆ ಅಸಮಾಧಾನ ಹೊರಹಾಕಿದ್ದಾರೆ.

ಈ ಕುರಿತು ತಮ್ಮ ಎಕ್ಸ್‌ ಖಾತೆಯಲ್ಲಿ ಬರೆದುಕೊಂಡ ಅವರು, ‘ನಾವು ಪೈಲಟ್‌ಗಳಿಲ್ಲದ ಏರ್‌ ಇಂಡಿಯಾ ವಿಮಾನ ಹತ್ತಿದ್ದೇವೆ. ಗಂಟೆಗಟ್ಟಲೆ ವಿಮಾನದಲ್ಲಿ ಕಾಯುತ್ತಿದ್ದೇವೆ. ಪೈಲಟ್‌ಗಳಿಲ್ಲದ ವಿಮಾನಕ್ಕೆ ನೀವು ಏಕೆ ಪ್ರಯಾಣಿಕರನ್ನು ಹತ್ತಿಸುತ್ತೀರಿ?ʼ ಅಂತ ಪ್ರಶ್ನೆ ಮಾಡಿದ್ದಾರೆ.

ಇದಕ್ಕೆ ಪ್ರತಿಕ್ರಿಯಿಸಿರುವ ಏರ್‌ ಇಂಡಿಯಾ ವಿಮಾನಯಾನ ಸಂಸ್ಥೆ, ಬೆಂಗಳೂರು ಏರ್‌ಪೋರ್ಟ್‌ನಿಂದ ಹವಾಮಾನ ಸಂಬಂಧಿತ ಅಡಚಣೆಗಳಿಂದಾಗಿ ಎಲ್ಲಾ ವಿಮಾನಯಾನ ಸಂಸ್ಥೆಗಳ ಮಾರ್ಗ ಬದಲಾವಣೆ ಮತ್ತು ಕೆಲ ವಿಮಾನಗಳ ಹಾರಾಟದಲ್ಲಿ ವ್ಯತ್ಯವಾಗಿದೆ. ಹೀಗಾಗಿ ನಿಮ್ಮ ವಿಮಾನ ನಿರ್ವಹಿಸುವ ಸಿಬ್ಬಂದಿಯನ್ನ ತಡೆಯಹಿಡಿಯಲಾಗಿದ್ದು, ವಿಳಂಬಕ್ಕೆ ಕಾರಣವಾಗಿದೆ.. ನಿಮ್ಮ ತಾಳ್ಮೆಯನ್ನು ಪ್ರಸಂಶಿಸುತ್ತೇವೆ, ನಮ್ಮ ವಿಮಾನ ಆಯ್ಕೆ ಮಾಡಿಕೊಂಡಿದ್ದಕ್ಕೆ ಧನ್ಯವಾದಗಳು ಎಂದು ಹೇಳಿದೆ.

ಡೇವಿಡ್‌ ವಾರ್ನರ್‌ ಅವರು ಟ್ರಾವೆಲ್‌ ಏಜೆಂಟ್‌ ಮೂಲಕ ಟಿಕೆಟ್‌ ಬುಕ್‌ ಮಾಡಿದ್ದರು. ಮರುಪಾವತಿ ಲಭ್ಯವಿಲ್ಲದ ಟಿಕೆಟ್‌ ಬುಕ್‌ ಮಾಡಿದ ಕಾರಣ ಟ್ರಾವೆಲ್‌ ಏಜೆಂಟ್‌ ಟಿಕೆಟ್‌ ಹಣ ವಾಪಸ್‌ ನೀಡಲು ನಿರಾಕರಿಸಿದ್ದಾರೆ ಎಂದು ಸಹ ವರದಿಗಳು ತಿಳಿಸಿವೆ.

 

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!