March 14, 2026
Saturday, March 14, 2026
spot_img

PARENTING | ದೊಡ್ಡವರು ನೋಡೋ ಶೋಗಳನ್ನು ಮಕ್ಕಳಿಗ್ಯಾಕೆ ತೋರಿಸ್ತೀರಿ? ಅವರಿಗಾಗಿ ಈ ಟಾಪ್‌ 5 ಪ್ರೋಗ್ರಾಮ್ಸ್‌

ಮನೆಯಲ್ಲಿ ಟಿವಿ ಯಾವಾಗ್ಲೂ ಓಡ್ತಾನೇ ಇರುತ್ತದೆ. ಧಾರಾವಾಹಿ, ಸಿನಿಮಾ, ಬಿಗ್‌ಬಾಸ್‌ ಇನ್ನಿತರ ಕಾರ್ಯಕ್ರಮಗಳನ್ನು ನಿರಂತರವಾಗಿ ಓಡುತ್ತಲೇ ಇರುತ್ತದೆ. ನಮ್ಮ ಮಕ್ಕಳು ಟಿವಿ ನೋಡಲ್ಲ ಅವರ ಪಾಡಿಗೆ ಅವರೇನೋ ಕೆಲಸ ಮಾಡ್ಕೋತಾ ಇರ್ತಾರೆ ಅಂದ್ಕೋಬೇಡಿ. ಅವರು ಏನೇ ಕೆಲಸ ಮಾಡಿದ್ರೂ ಗಮನ ಟಿವಿ ಮೇಲೆ ಇರುತ್ತದೆ. ಸಬ್‌ಕಾನ್ಶಿಯಸ್ಲಿ ಅವರು ಎಲ್ಲವನ್ನು ಕೇಳಿಸಿಕೊಳ್ತಾರೆ, ತಿಳಿದುಕೊಳ್ತಾರೆ, ಅರ್ಥನೂ ಮಾಡ್ಕೋತಾರೆ.

ಮಕ್ಕಳಿಗೆ ಸ್ಕ್ರೀನ್‌ ಟೈಮ್‌ ಕಡಿಮೆ ಮಾಡಿ, ಹಠ ಮಾಡಿದ್ರೆ ಮಕ್ಕಳು ನೋಡಬಹುದಾದಂತಹ ಕಥೆಗಳನ್ನು ತೋರಿಸಿ, ಕಾರ್ಟೂನ್‌ ತೋರಿಸಿದ್ರೂ ಅದರಲ್ಲೂ ಗಮನ ಇರಲಿ.

ಮಕ್ಕಳಿಗಾಗಿ ಭಾರತದ ಈ ಐದು ಶೋಗಳು..

ಚೋಟಾ ಭೀಮ್‌

ಮಕ್ಕಳಿಗೆ ಇದು ತುಂಬಾನೇ ಇಷ್ಟ. ಬುದ್ಧಿವಂತ ಭೀಮ ಊರಿನಲ್ಲಿ ಬರುವ ಕಷ್ಟಗಳನ್ನು ಹೇಗೆ ನಿಭಾಯಿಸ್ತಾನೆ ಅನ್ನೋ ಕಾರ್ಟೂನ್‌ ಕಥೆಯಿದು.

ಮಾಲ್ಗುಡಿ ಡೇಸ್‌

ಆರ್‌.ಕೆ. ನಾರಾಯಣ್‌ ಅವರ ಸ್ವಾಮಿಯ ಕಥೆಯಿದು. ಸಣ್ಣ ಮಾಲ್ಗುಡಿ ಎಂಬ ಊರಲ್ಲಿ ಚೈಲ್ಡ್‌ವುಡ್‌ ಕಥೆಗಳನ್ನು ತೋರಿಸಲಾಗುತ್ತದೆ.

ರಾಮಾಯಣ

ಆನ್‌ಲೈನ್‌ನಲ್ಲಿ ಇದು ನೋಡಸಿಗುತ್ತದೆ. ಮಕ್ಕಳು ತಿಳಿದುಕೊಳ್ಳಬೇಕಾದ ಜೀವನ ಪಾಠಗಳು, ಇತಿಹಾಸ ಇದರಲ್ಲಿದೆ.

ದಿ ಜಂಗಲ್‌ ಬುಕ್‌

ಸ್ನೇಹ, ಧೈರ್ಯ ಹಾಗೂ ನಿಸರ್ಗವನ್ನು ಪೂಜಿಸಬೇಕು, ಗೌರವಿಸಬೇಕು ಎನ್ನುವ ಪಾಠ ಇದರಲ್ಲಿ ಸಿಗಲಿದೆ.

ಅಪ್ಪು-ದಿ ಯೋಗಿಕ್‌ ಎಲಿಫೆಂಟ್‌

ಇದು ಝಿ 5ನಲ್ಲಿ ಲಭ್ಯವಿದೆ. ಅನಿಮೇಟೆಡ್‌ ಕಥೆಯಾಗಿದೆ. ಆನೆಯ ಸುತ್ತ ಕಥೆ ಹೆಣೆದಿದ್ದು, ಮಕ್ಕಳಿಗೆ ಇದು ಇಷ್ಟವಾಗುತ್ತದೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !