ಮಳೆಗಾಲದಲ್ಲಿ ಅಸ್ತಮಾ ರೋಗಿಗಳಿಗೆ ಆರೋಗ್ಯ ಸಮಸ್ಯೆಗಳು ಹೆಚ್ಚಾಗುತ್ತವೆ. ಗಾಳಿಯಲ್ಲಿ ತೇವಾಂಶ, ಧೂಳು, ಜೀವಾಣುಗಳು ಹೆಚ್ಚಾಗುವುದರಿಂದ ಶ್ವಾಸಕೋಶದ ಮೇಲೆ ಹೆಚ್ಚು ಒತ್ತಡ ಬೀರುತ್ತದೆ. ಇದರಿಂದಾಗಿ “ಮಾನ್ಸೂನ್ ಅಸ್ತಮಾ” ಎಂಬ ಹೆಸರಿನಿಂದ ಪರಿಚಿತವಾಗಿರುವ ಸಮಸ್ಯೆ ತೀವ್ರವಾಗುತ್ತದೆ. ಆದರೆ ಸರಿಯಾದ ಮುನ್ನೆಚ್ಚರಿಕೆಯಿಂದ ಈ ದೌರ್ಬಲ್ಯವನ್ನು ನಿಯಂತ್ರಿಸಿ, ಆರಾಮದಾಯಕ ಜೀವನ ನಡೆಸಬಹುದು.
ಗಾಳಿಯಲ್ಲಿ ತೇವಾಂಶದಿಂದ ಉಸಿರಾಟದ ತೊಂದರೆ
ಮಳೆಗಾಲದಲ್ಲಿ ಗಾಳಿಯಲ್ಲಿ ತೇವಾಂಶದ ಪ್ರಮಾಣ ಹೆಚ್ಚಾಗುತ್ತದೆ. ಇದು ಧೂಳು ಮತ್ತು ಫಾರ್ಮಾಲ್ಡಿಹೈಡ್‌ನಂತಹ ಮಾಲಿನ್ಯಕಾರಕಗಳ ಪ್ರಭಾವವನ್ನು ಹೆಚ್ಚಿಸುತ್ತವೆ. ಇವು ಶ್ವಾಸಕೋಶದಲ್ಲಿ ಊತ ಉಂಟುಮಾಡಿ ಅಸ್ತಮಾ ದಾಳಿಗೆ ಕಾರಣವಾಗುತ್ತವೆ.
ಮನೆಯಲ್ಲಿ ಆರ್ದ್ರತೆ ಹೆಚ್ಚಾದಾಗ ಗೋಡೆಗಳಲ್ಲಿ ಅಚ್ಚು ಬೆಳೆಯುತ್ತದೆ. ಹಾಸಿಗೆ, ಪರದೆಗಳಲ್ಲಿ ಧೂಳಿನ ಹುಳುಗಳು ನೆಲೆಸುತ್ತವೆ. ಇವುಗಳಿಂದ ಉಸಿರಾಡಿದಾಗ ಶ್ವಾಸಕೋಶದ ಮೇಲೆ ತೀವ್ರವಾದ ಪರಿಣಾಮ ಬೀರುತ್ತದೆ, ವಿಶೇಷವಾಗಿ ಮಕ್ಕಳಿಗೆ ಮತ್ತು ವೃದ್ಧರಿಗೆ ಅಪಾಯಕಾರಿಯಾಗಿ ಪರಿಣಮಿಸಬಹುದು.
ಮಳೆನೀರಿನ ಮಾಲಿನ್ಯವೂ ಹಾನಿಕಾರಕ
ನಗರಗಳಲ್ಲಿನ ಮಾಲಿನ್ಯ ಮಳೆ ನೀರಿನಲ್ಲಿ ಸೇರಿ ವಿಷಕಾರಿ ರಾಸಾಯನಿಕಗಳನ್ನು ರೂಪಿಸುತ್ತವೆ. ಇದರಿಂದ ಉಸಿರಾಟದ ತೊಂದರೆ ಉಂಟಾಗುತ್ತದೆ. ಜೊತೆಗೆ ಜ್ವರ, ಶೀತ ಹಾಗೂ ವೈರಲ್ ಸೋಂಕುಗಳು ಸುಲಭವಾಗಿ ಹರಡಬಹುದು.
ಮುನ್ನೆಚ್ಚರಿಕೆ ಕ್ರಮಗಳು ಎನು?
ಮನೆಯಲ್ಲಿ 40-60% ಆರ್ದ್ರತೆಯನ್ನು ಕಾಪಾಡಿ
ಅಡುಗೆ ಮತ್ತು ಸ್ನಾನಗೃಹಗಳಲ್ಲಿ ಎಕ್ಸಾಸ್ಟ್ ಫ್ಯಾನ್ ಬಳಸಿ
ಅಗತ್ಯವಿದ್ದರೆ ಡಿಹ್ಯೂಮಿಡಿಫೈಯರ್ ಉಪಯೋಗಿಸಿ
ಬೆಡ್‌ಶೀಟ್, ಹಾಸಿಗೆಗಳನ್ನ ವಾರಕ್ಕೊಮ್ಮೆ ಬಿಸಿ ನೀರಿನಲ್ಲಿ ತೊಳೆಯಿರಿ
HEPA ಫಿಲ್ಟರ್ ಅಳವಡಿಸಿದ ವ್ಯಾಕ್ಯೂಮ್ ಕ್ಲೀನರ್ ಉಪಯೋಗಿಸಿ
ಗೋಚರಿಸಬಹುದಾದ ಅಚ್ಚನ್ನು ತಕ್ಷಣ ಶುದ್ಧೀಕರಿಸಿ
ಮಲಗುವ ಕೋಣೆಯಲ್ಲಿ ಗಿಡಗಳನ್ನು ಇಡಬೇಡಿ
ಗಾಳಿಯ ಗುಣಮಟ್ಟವನ್ನು ಪ್ರತಿದಿನ ಪರಿಶೀಲಿಸಿ
ಪರಾಗ ಮಟ್ಟ ಹೆಚ್ಚಿದರೆ ಕಿಟಕಿ ಬಾಗಿಲು ಮುಚ್ಚಿರಿ
ಆಹಾರ ಮತ್ತು ಆರೋಗ್ಯದ ಕಡೆ ಗಮನ
ಮಳೆಗಾಲದಲ್ಲಿ ತಂಪು ಪಾನೀಯ, ಐಸ್ ಕ್ರೀಂ, ಹಾಗೂ ಕರಿದ ಆಹಾರಗಳನ್ನು ತಪ್ಪಿಸಿ. ಬಿಸಿ ಬಿಸಿ ಸೂಪ್, ತುಳಸಿ, ಶುಂಠಿ, ಲೆಮನ್ ಟೀ, ವಿಟಮಿನ್ ಸಿ ಹೆಚ್ಚಿರುವ ಹಣ್ಣುಗಳನ್ನು ಸೇವನೆ ಮಾಡಿ. ರೋಗ ನಿರೋಧಕ ಶಕ್ತಿ ಹೆಚ್ಚಿಸಿಕೊಳ್ಳಿ.
ಪ್ರಾಣಾಯಾಮದಿಂದ ಶ್ವಾಸಕೋಶ ಬಲ
ಪ್ರತಿ ದಿನ ಉಸಿರಾಟದ ವ್ಯಾಯಾಮಗಳು, ವಿಶೇಷವಾಗಿ ಪ್ರಾಣಾಯಾಮ ಅಭ್ಯಾಸದಿಂದ ಶ್ವಾಸಕೋಶ ಬಲವಾಗುತ್ತದೆ. ಇದು ಅಸ್ತಮಾ ತೀವ್ರತೆಯನ್ನು ಕಡಿಮೆ ಮಾಡುತ್ತದೆ.
ವೈದ್ಯರ ಸಲಹೆ ಹಾಗೂ ಔಷಧಗಳ ಮಹತ್ವ
ವೈದ್ಯರು ಸೂಚಿಸಿರುವ ಔಷಧಿಗಳನ್ನು ನಿರಂತರವಾಗಿ ಸೇವಿಸಿ. ತೀವ್ರ ಅಸ್ತಮಾ ಉಂಟಾದಾಗ ತಕ್ಷಣ ಇನ್ಹೇಲರ್ ಉಪಯೋಗಿಸಿ. ಸ್ಥಿತಿ ಹದಗೆಡುತ್ತಿದರೆ ತಕ್ಷಣ ವೈದ್ಯರ ಸಲಹೆ ಪಡೆಯುವುದು ಅತ್ಯಗತ್ಯ. (Disclaimer: ಈ ಲೇಖನವು ಸಾರ್ವಜನಿಕ ಮೂಲಗಳಿಂದ ಸಂಗ್ರಹಿಸಿದ ಮಾಹಿತಿಯಾಧಾರಿತವಾಗಿದೆ. ಇದು ವೈದ್ಯಕೀಯ ಸಲಹೆಯಲ್ಲ. ಹೆಚ್ಚಿನ ಸಮಸ್ಯೆಗಾಗಿ ತಜ್ಞರನ್ನು ಸಂಪರ್ಕಿಸಿ.)