ಸಿದ್ದರಾಮಯ್ಯ ಮಸೀದಿಗೆ ಯಾಕೆ ಹೋಗ್ತಾರೆ? : ಅಯೋಧ್ಯೆಗೆ ಯಾಕೆ ಹೋಗ್ಬೇಕು ಎಂದ ಸಿಎಂಗೆ ಆರ್ ಅಶೋಕ್ ತಿರುಗೇಟು!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಸಿದ್ದರಾಮಯ್ಯ ನಮಾಜ್ ಮಾಡೋಕೆ ಮಸೀದಿಗೆ ಯಾಕೆ ಹೋಗ್ತಾರೆ? ಟೋಪಿ ಹಾಕೊಂಡು ಮನೆಯಲ್ಲೇ ನಮಾಜ್ ಮಾಡಬಹುದಲ್ಲ? ಬಿರಿಯಾನಿ ತಿನ್ನೋಕೆ ಅಲ್ಲಿಗೆ ಯಾಕೆ ಹೋಗಬೇಕುಹಲಾಲ್ ಕಟ್ ತಿನ್ನೋಕೆ ಹೋಗ್ತಾರಾ? ಬಿರಿಯಾನಿ ಮನೆಯಲ್ಲೇ ಮಾಡ್ಕೊಂಡು ತಿನ್ನಬಹುದಪ್ಪ ಎಂದು ಮುಖ್ಯಮಂತ್ರಿಗೆ ವಿಪಕ್ಷ ನಾಯಕ ಆರ್ ಅಶೋಕ್ ತಿರುಗೇಟು ನೀಡಿದರು.

‘ಅಯೋಧ್ಯಾಗೆ ಯಾಕೆ ಹೋಗಬೇಕು’ ಎಂದು ಕೇಳಿದ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ವಾಗ್ದಾಳಿ ನಡೆಸಿದ ಅವರು, ಜನವರಿ 22ರಂದು ಜನರು ರಾಮನನ್ನು ಕಣ್ತುಂಬಿಕೊಳ್ಳಲು ಕಾಯ್ತಿದ್ದಾರೆ. ಆದರೆ ಕಾಮಾಲೆ ಕಣ್ಣಿನವರಿಗೆ ರಾಮ ಮಂದಿರ ಕಾಣಲ್ಲ. 22ಕ್ಕೆ ಕಾಂಗ್ರೆಸ್ ನಾಯಕರು ಕಣ್ಮುಚ್ಚಿಕೊಂಡು ಕೂರಬೇಕು ಎಂದು ಟಾಂಗ್ ನೀಡಿದರು.

ಕಾಂಗ್ರೆಸ್ ಕಾರ್ಯಕರ್ತರನ್ನ ತೃಪ್ತಿ ಪಡಿಸಲು, ಕಾಂಗ್ರೆಸ್ ನಾಯಕರಿಗೆ ಅಧಿಕಾರ ಕೊಡಲು ಸರ್ಕಾರದ ಹಣ ಕೊಡಲು ಮುಂದಾಗಿರುವುದು ಖಂಡನೀಯ. ಲೋಕಸಭಾ ಚುನಾವಣೆ ಹತ್ತಿರ ಬರ್ತಿದೆ ಹೀಗಾಗಿ ಕಾರ್ಯಕರ್ತರನ್ನು ದುಡಿಸಿಕೊಳ್ಳಲು ಈ ಕೆಲಸ ಕಾಂಗ್ರೆಸ್ ಮಾಡ್ತಿದೆ. ಮಂತ್ರಿಗಳ ಅಕ್ಕ ಪಕ್ಕದಲ್ಲಿ ಸಾಕಷ್ಟು ಸಿಬ್ಬಂದಿ ಕೆಲಸ ಮಾಡ್ತಿದ್ದಾರೆ. ಹಾಗಾದ್ರೆ ಮಂತ್ರಿಗಳೆಲ್ಲಾ ನಾಲಾಯಕ್ ಹಾಗಾದರೆ? ಎಂದು ಪ್ರಶ್ನಿಸಿದರು.

ಕಾಂಗ್ರೆಸ್ ಕಾರ್ಯಕರ್ತರಿಗೆ ಗೂಟದ ಕಾರಿಗೆ ಕೊಡಬೇಕು, ಚುನಾವಣೆಗೆ ದುಡಿಸಿಕೊಳ್ಳಬೇಕು. 160 ಕೋಟಿ ರೂಪಾಯಿ ಹಣವನ್ನು ಈ ಸರ್ಕಾರ 3 ಸಾವಿರ ಕಾರ್ಯಕರ್ತರಿಗೆ ಕೊಡ್ತಿದೆ. ಕಾಂಗ್ರೆಸ್ ಕಾರ್ಯಕರ್ತರಿಗೆ ದುಡ್ಡು ಕೊಡಲು ಇವರಿಗೆ ಅಧಿಕಾರ ಕೊಟ್ಟಿದ್ದು ಯಾರು? ರಾಜ್ಯದ ತೆರಿಗೆ ಹಣ ಪಕ್ಷದ ಕಾರ್ಯಕರ್ತರಿಗೆ ಕೊಡಲು ಏನು ಅಧಿಕಾರವಿದೆ. ಬರಗಾಲ ಬಂದು ಬೆಳೆ ನಷ್ಟವಾಗಿ ರೈತರು ಆತ್ಮಹತ್ಯೆ ಮಾಡಿಕೊಂಡರೂ ಬಿಡಿಗಾಸು ಕೊಡದ ಸರ್ಕಾರ. ಕಾರ್ಯಕರ್ತರಿಗೆ 160 ಕೋಟಿ ರೂ ಖರ್ಚು ಮಾಡುತ್ತಿದೆ. ಮುಂಬರುವ ಚುನಾವಣೆಯಲ್ಲಿ ಜನರೇ ತಕ್ಕ ಪಾಠ ಕಲಿಸುತ್ತಾರೆ ಎಂದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!