ದೇವಾಲಯದ ಮೆಟ್ಟಿಲೇರಿದ ಕ್ಷಣದಿಂದಲೇ ನಮ್ಮ ನಡೆ, ಮಾತು ಎಲ್ಲವೂ ಬದಲಾಗುತ್ತೆ. ಅಲ್ಲಿ ಹೋಗೋದು ಕೇವಲ ದೇಹವಲ್ಲ, ಹೋಗುವ ಮನಸ್ಸೂ ಶುದ್ಧವಾಗಿರಲಿ ಅನ್ನೋ ಭಾವನೆ. ಅಂಥ ಸಂದರ್ಭದಲ್ಲಿ “ಕಪ್ಪು ಬಟ್ಟೆ ಧರಿಸಬಾರದು” ಅನ್ನೋ ಮಾತು ಕೇಳಿಸುತ್ತೆ. ಇದು ಕಡ್ಡಾಯ ನಿಯಮಕ್ಕಿಂತ, ಒಂದು ಹಳೆಯ ನಂಬಿಕೆ ಎಂದರೂ ತಪ್ಪಾಗಲ್ಲ.
ಸಾಂಪ್ರದಾಯಿಕವಾಗಿ ಕಪ್ಪು ಬಣ್ಣವನ್ನು ಅಂಧಕಾರ, ದುಃಖ, ಶೋಕದ ಸಂಕೇತವಾಗಿ ನೋಡಲಾಗಿದೆ. ದೇವಾಲಯ ಅನ್ನೋದು ಬೆಳಕು, ಶಾಂತಿ, ಸಾತ್ವಿಕತೆ ಪ್ರತಿನಿಧಿಸುವ ಜಾಗ. ಹಾಗಾಗಿ ಅಲ್ಲಿ ಹಗುರ ಬಣ್ಣಗಳು ಬಿಳಿ, ಹಳದಿ, ಕೇಸರಿ ಇವು ಮನಸ್ಸಿಗೆ ಶಾಂತಿ ಕೊಡ್ತವೆ ಅನ್ನೋ ನಂಬಿಕೆ ಇದೆ.
ಇದನ್ನೂ ಓದಿ:
ಇನ್ನೊಂದು ಅರ್ಥವೂ ಇದೆ. ಕಪ್ಪು ಬಣ್ಣ ಬೆಳಕನ್ನು ಹೀರಿಕೊಳ್ಳುತ್ತೆ. ಪುರಾತನ ಕಾಲದಲ್ಲಿ ದೇವಾಲಯಗಳನ್ನು ಶಕ್ತಿಕೇಂದ್ರಗಳೆಂದು ಭಾವಿಸಲಾಗುತ್ತಿತ್ತು. ಅಲ್ಲಿ ಸಕಾರಾತ್ಮಕ ಶಕ್ತಿ ಹರಿಯುತ್ತದೆ. ಈ ಸಕಾರಾತ್ಮಕ ಶಕ್ತಿಯನ್ನು ನಮ್ಮ ದೇಹ ತಡೆದುಕೊಳ್ಳೋದು ಕಷ್ಟ ಅನ್ನೋ ನಂಬಿಕೆಯ ಕಾರಣಕ್ಕೆ, ಆ ಶಕ್ತಿಯನ್ನು ಹೀರಿಕೊಳ್ಳುವ ಬಣ್ಣ ತಪ್ಪಿಸುವುದು ಒಳಿತೆಂದು ಹೇಳಲಾಗಿದೆ.
ದೇವರ ಮುಂದೆ ಮುಖ್ಯವಾದದ್ದು ಬಟ್ಟೆಯ ಬಣ್ಣಕ್ಕಿಂತ ಭಕ್ತಿ. ಸ್ವಚ್ಛತೆ, ವಿನಯ, ಶ್ರದ್ಧೆ ಇವೇ ನಿಜವಾದ ಪೂಜೆ. ಕಪ್ಪು ಬಟ್ಟೆ ಧರಿಸಿದ್ರೆ ದೇವರು ದೂರವಾಗಲ್ಲ. ಆದರೆ ಸಂಪ್ರದಾಯವನ್ನು ಗೌರವಿಸುವ ಮನಸ್ಸು ಇದ್ದರೆ, ದೇವಾಲಯದ ಶಾಂತ ವಾತಾವರಣಕ್ಕೆ ತಕ್ಕಂತೆ ನಾವು ನಮ್ಮನ್ನೇ ಹೊಂದಿಸಿಕೊಳ್ಳುತ್ತೇವೆ.(Disclaimer: ಈ ಲೇಖನವು ಅಂತರ್ಜಾಲ ಮೂಲಗಳಿಂದ ಸಂಗ್ರಹಿಸಿದ ಮಾಹಿತಿಯಾಧಾರಿತವಾಗಿದೆ)



