ಹೊಸದಿಗಂತ ಡಿಜಿಟಲ್ ಡೆಸ್ಕ್:
ದೈಹಿಕ ಆರೋಗ್ಯ ಜೊತೆಗೆ ಬಾಹ್ಯ ಸೌಂದರ್ಯವನ್ನು ಕಾಪಾಡಿಕೊಳ್ಳಲು ಉತ್ತಮ ಹಲ್ಲುಗಳನ್ನು ಹೊಂದಿರುವುದು ಅವಶ್ಯಕ. ಆದರೆ ಇತ್ತೀಚಿನ ದಿನಗಳಲ್ಲಿ ಅನೇಕರು ಹಲ್ಲಿನ ನಡುವೆ ಅಂತರ ಉಂಟಾಗುತ್ತಿರುವ ಸಮಸ್ಯೆಯನ್ನು ಎದುರಿಸುತ್ತಿದ್ದಾರೆ. ಇದರಿಂದ ಯಾವುದೇ ತೊಂದರೆ ಇಲ್ಲದಿದ್ದರೂ ಕೂಡ ಕೆಲವರು ಅದನ್ನು ಸಮಸ್ಯೆಯೆಂದು ಭಾವಿಸುತ್ತಿದ್ದಾರೆ. ಆದರೆ ಇದರಿಂದ ಯಾವುದೇ ರೀತಿಯ ಸಮಸ್ಯೆ ಎದುರಾಗುವುದಿಲ್ಲ.
ಹಲ್ಲುಗಳ ನಡುವಿನ ಅಂತರವು ಸಾಮಾನ್ಯವಾಗಿ ಮುಂದಿನ ಹಲ್ಲುಗಳಿಗೆ ಮಾತ್ರ ಸೀಮಿತವಾಗಿರುತ್ತದೆ ಅಥವಾ ಕೆಲವೊಮ್ಮೆ ಪೂರ್ತಿ ದವಡೆಯ ಹಲ್ಲುಗಳಲ್ಲಿ ಕಾಣಬಹುದು. ಆದರೆ ಈ ರೀತಿಯ ಅಂತರ ಏಕೆ ಉಂಟಾಗುತ್ತದೆ ಇಲ್ಲಿ ತಿಳಿಯೋಣ.
ವಯಸ್ಸಾಗುತ್ತಿದ್ದಂತೆ ವಸಡಿನ ಬಲ ಕಡಿಮೆಯಾಗುವುದು. ಎಲ್ಲರಲ್ಲಿ ಈ ರೀತಿಯಾಗುವುದಿಲ್ಲ, ಆದರೆ ಕೆಲವರಲ್ಲಿ ಹಲ್ಲುಗಳ ನಡುವೆ ಅಂತರ ಉಂಟಾಗುವುದು.
ನೀವು ಹಲ್ಲಿನ ಸಮಸ್ಯೆ ಈ ಮುಂಚೆ ಹೊಂದಿದ್ದರೆ ಅಥವಾ ಕ್ಲಿಪ್ ಹಾಕಿಸಿ ಹಲ್ಲು ಸಡಿಲ ಮಾಡಿದ್ದರೆ ಕೆಲವರಿಗೆ ವಯಸ್ಸಾಗುತ್ತಿದ್ದಂತೆ ಮತ್ತೆ ಹಲ್ಲುಗಳ ನಡುವೆ ಗ್ಯಾಪ್ ಉಂಟಾಗುವುದು.
ಕೆಲವರು ನಿದ್ದೆಯಲ್ಲಿ ಹಲ್ಲು ಕಚ್ಚುತ್ತಾರೆ. ಇದರಿಂದ ಹಲ್ಲುಗಳ ಮೇಲೆ ಅಧಿಕ ಒತ್ತಡ ಬೀಳುವುದು, ಈ ರೀತಿಯ ಅಭ್ಯಾಸ ಇರುವವರಿಗೆ ಸ್ವಲ್ಪ ಸಮಯದ ಬಳಿಕ ಹಲ್ಲುಗಳಲ್ಲಿ ಬಿರುಕು ಕಂಡು ಬರುವುದು.
ನಾಲಗೆಯಿಂದ ಹಲ್ಲಿಗೆ ತಾಗಿಸುತ್ತಿದ್ದರೆ ಹಲ್ಲಿನ ನಡುವೆ ಗ್ಯಾಪ್ ಉಂಟಾಗುವುದು. ಆದ್ದರಿಂದ ಈ ರೀತಿಯ ಅಭ್ಯಾಸವಿದ್ದರೆ ಅದನ್ನು ಬಿಡಿ.
ಹಲ್ಲುಗಳ ನಡುವಿನ ಅಂತರಕ್ಕೆ ವಸಡಿನ ಕಾಯಿಲೆ ಕಾರಣವಾಗಿದ್ದರೆ ಉತ್ತಮ ಉಚಿತ ನೈರ್ಮಲ್ಯತೆಯನ್ನು ಅಭ್ಯಾಸ ಮಾಡುವುದರಿಂದ ಅದು ವ್ಯಾಪಿಸದಂತೆ ತಡೆಗಟ್ಟಬಹುದು. ಪ್ರತಿದಿನ ಎರಡು ಬಾರಿ ಹಲ್ಲುಗಳನ್ನು ಶುಚಿಗೊಳಿಸುವುದರ ಜೊತೆಗೆ ಫ್ಲಾಸಿಂಗ್ ಮತ್ತು ವಸಡಿನ ಮಸಾಜ್ ಮಾಡುವುದು ಸೂಕ್ತ. ಇದನ್ನು ಹೊರತುಪಡಿಸಿ ಆರ್ಥಾಡೊಂಟಿಕ್ ಚಿಕಿತ್ಸೆ, ಕ್ರೌನ್ಸ್, ವೆನೀಯರ್ಸ್, ಇಂಪ್ಲಾಂಟ್ಸ್ (orthodontic treatment, crowns, veneers, Implants) ನಂತಹ ಚಿಕಿತ್ಸ್ಸೆ ಲಭ್ಯವಿದ್ದು ವೈದ್ಯರ ಸೂಚನೆ ಮೇರೆಗೆ ಚಿಕಿತ್ಸೆ ಪಡೆಯಬಹುದು.