ನಾನು ಚುನಾವಣೆಗೆ ಸ್ಫರ್ಧಿಸುವುದಿಲ್ಲ ಯಾಕೆಂದರೆ…ಸೋನಿಯಾ ಗಾಂಧಿ ಹೇಳಿದ್ರು ಕಾರಣ!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಲೋಕಸಭೆ ಚುನಾವಣೆಗೆ ಈಗಾಗಲೇ ರಾಜಕೀಯ ಪಕ್ಷಗಳು ಸಿದ್ದತೆ ಆರಂಭಿಸಿದ್ದು, ಹೊಸಬರಿಗೆ ಅವಕಾಶ ನೀಡುವ ನಿಟ್ಟಿನಲ್ಲಿ ಹಿರಿಯರು ಕಣದಿಂದ ಹಿಂದೆ ಸರಿಯುತ್ತಿದ್ದಾರೆ.

ಇದಕ್ಕೆ ಪೂರಕವೆಂಬಂತೆ ಕಾಂಗ್ರೆಸ್​ ಅಧಿನಾಯಕಿ ಸೋನಿಯಾ ಗಾಂಧಿ ತಮ್ಮ ಪುತ್ರಿ ಪ್ರಿಯಾಂಕಾಗೆ ದಾರಿ ಮಾಡಿಕೊಡುವ ನಿಟ್ಟಿನಲ್ಲಿ ಈ ಬಾರಿಯ ಲೋಕಸಭೆ ಚುನಾವಣೆಯಲ್ಲಿ ಸ್ಫರ್ಧಿಸದಿರಲು ನಿರ್ಧರಿಸಿದ್ದಾರೆ.

ರಾಜಸ್ಥಾನದಿಂದ ರಾಜ್ಯಸಭೆಗೆ ನಾಮಪತ್ರ ಸಲ್ಲಿಸಿರುವ ಸೋನಿಯಾ ಈ ಒಂದು ಕಾರಣದಿಂದಾಗಿ ಈ ಬಾರಿಯ ಲೋಕಸಭೆ ಚುನಾವಣೆಯಲ್ಲಿ ಸ್ಫರ್ಧಿಸದಿರಲು ನಿರ್ಧರಿಸಿರುವುದಾಗಿ ತಿಳಿಸಿದ್ದಾರೆ.

ಈ ಕುರಿತು ರಾಯ್​ಬರೇಲಿ ಕ್ಷೇತ್ರದ ಮತದಾರರನ್ನು ಉದ್ಧೇಶಿಸಿ ಭಾವನಾತ್ಮಕ ಪತ್ರ ಬರೆದ ಅವರು, ನಮ್ಮ ಸಂಬಂಧವು ತೀರಾ ಹಳೆಯದಾಗಿದೆ. ನನ್ನ ಅತ್ತೆಯಿಂದ ನಾನು ಇದನ್ನು ಅದೃಷ್ಟವಾಗಿ ಪಡೆದಿದ್ದೇನೆ. ರಾಯ್​​ಬರೇಲಿಯೊಂದಿಗೆ ನಮ್ಮ ಕುಟುಂಬದ ಸಂಬಂಧಗಳು ತುಂಬಾ ಆಳವಾಗಿವೆ. ಸ್ವಾತಂತ್ರ್ಯ ನಂತರ ನಡೆದ ಮೊದಲ ಲೋಕಸಭೆ ಚುನಾವಣೆಯಲ್ಲಿ ನನ್ನ ಮಾವ ಫಿರೋಜ್ ಗಾಂಧಿ ಅವರನ್ನು ಇಲ್ಲಿಂದ ಗೆಲ್ಲಿಸಿ ದೆಹಲಿಗೆ ಕಳುಹಿಸಿದ್ದೀರಿ. ಅವರ ನಂತರ ನೀವು ನನ್ನ ಅತ್ತೆ ಇಂದಿರಾಗಾಂಧಿ ಅವರನ್ನು ಗೆಲ್ಲಿಸಿದ್ದೀರಿ. ಅಲ್ಲಿಂದ ಇಲ್ಲಿಯವರೆಗೂ ಬದುಕಿನ ಏರಿಳಿತ, ಕಷ್ಟದ ಹಾದಿಗಳಲ್ಲಿ ಪ್ರೀತಿ, ಉತ್ಸಾಹದಿಂದ ಈ ಸರಣಿ ಮುಂದುವರಿದಿದ್ದು, ನಮ್ಮ ನಂಬಿಕೆ ಗಟ್ಟಿಯಾಗಿದೆ.

ನನ್ನ ಅತ್ತೆಯನ್ನು ಮತ್ತು ನನ್ನ ಜೀವನ ಸಂಗಾತಿಯನ್ನು ಶಾಶ್ವತವಾಗಿ ಕಳೆದುಕೊಂಡ ನಂತರ, ನಾನು ನಿಮ್ಮ ಬಳಿಗೆ ಬಂದೆ ಮತ್ತು ನೀವು ನನಗೆ ನಿಮ್ಮ ತೋಳುಗಳಲ್ಲಿ ನನ್ನನ್ನು ಭದ್ರ ಮಾಡಿದ್ದೀರಿ. ಕಳೆದೆರಡು ಚುನಾವಣೆಗಳಲ್ಲಿ ಕಷ್ಟದ ಸಂದರ್ಭದಲ್ಲೂ ನನ್ನ ಬೆಂಬಲಕ್ಕೆ ನಿಂತಿದ್ದೀರಿ, ಇದನ್ನು ಮರೆಯಲು ಸಾಧ್ಯವೇ ಇಲ್ಲ. ನಾನು ಇಂದು ಏನಾಗಿದ್ದರೂ ನಿಮ್ಮಿಂದಾಗಿ ಎಂದು ಹೇಳಲು ನಾನು ಹೆಮ್ಮೆಪಡುತ್ತೇನೆ ಮತ್ತು ನಾನು ಯಾವಾಗಲೂ ಈ ನಂಬಿಕೆಯನ್ನು ಉಳಿಸಿಕೊಳ್ಳಲು ಪ್ರಯತ್ನಿಸುತ್ತೇನೆ.

ಈಗ ವಯಸ್ಸು ಕಳೆಯುತ್ತಿದ್ದಂತೆ ಆರೋಗ್ಯ ಸಮಸ್ಯೆ ಹೆಚ್ಚುತ್ತಿದೆ, ನಾನು ಮುಂದಿನ ಲೋಕಸಭೆ ಚುನಾವಣೆಯಲ್ಲಿ ಸ್ಪರ್ಧಿಸುವುದಿಲ್ಲ. ಈ ನಿರ್ಧಾರದ ನಂತರ ನನಗೆ ನೇರವಾಗಿ ನಿಮ್ಮ ಸೇವೆ ಮಾಡುವ ಅವಕಾಶ ಸಿಗುವುದಿಲ್ಲ, ಆದರೆ ನನ್ನ ಹೃದಯ ಮತ್ತು ಆತ್ಮ ಯಾವಾಗಲೂ ನಿಮ್ಮೊಂದಿಗೆ ಇರುತ್ತದೆ. ಇಲ್ಲಿಯವರೆಗೆ ನೀವು ನನ್ನನ್ನು ನೋಡಿಕೊಂಡಂತೆ ನನ್ನ ಕುಟುಂಬವನ್ನು ಪ್ರತಿಯೊಂದು ಕಷ್ಟದಲ್ಲಿಯೂ ನೋಡಿಕೊಳ್ಳುವಿರಿ ಎಂದು ಭಾವನಾತ್ಮಕ ಪತ್ರ ಬರೆದಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!