ಹೊಸದಿಗಂತ ಡಿಜಿಟಲ್ ಡೆಸ್ಕ್:
ನನ್ನ ವಿರುದ್ಧ ಏಕೆ ಕ್ರಮ ಕೈಗೊಂಡಿದ್ದೀರಿ ಮತ್ತು ಇತರರ ವಿರುದ್ಧ ಏಕೆ ಕ್ರಮ ಕೈಗೊಂಡಿಲ್ಲ ಎಂದು ಡ್ರೋನ್ ಪ್ರತಾಪ್ ಪ್ರಶ್ನಿಸಿದ್ದಾರೆ.
ನ್ಯಾಯಾಲಯದಿಂದ ಜಾಮೀನು ಪಡೆದು ಬಿಡುಗಡೆಯಾದ ಬಳಿಕ ಮಾಧ್ಯಮದವರ ಪ್ರಶ್ನೆಗೆ ಉತ್ತರಿಸಿದ ಅವರು, ಕೇವಲ 500 ಗ್ರಾಂ ಸ್ಫೋಡಿಯಂ ಸ್ಫೋಟಗೊಂಡಿದೆ.
ಆದರೆ ದೇಶದ ಅನೇಕ ಯೂಟ್ಯೂಬರ್‌ಗಳು 1 ಕೆಜಿಗಿಂತ ಹೆಚ್ಚು ಸೋಡಿಯಂ ಅನ್ನು ಸ್ಪೋಟಿಸಿದ್ದಾರೆ. ನೀವು ಯೂಟ್ಯೂಬ್ ಅನ್ನು ನೋಡಿದರೆ, ಪ್ರಪಂಚದಾದ್ಯಂತ ಬಹಳಷ್ಟು ಜನರು ಬ್ಲ್ಯಾಸ್ಟ್ ಮಾಡಿದ್ದಾರೆ. ಅವರ ಮೇಲೆ ಆಗದ ಕ್ರಮ ನನ್ನ ಮೇಲೆ ಮಾತ್ರ ಯಾಕೆ ಎಂದು ಪ್ರಶ್ನಿಸಿದ್ದಾರೆ.