ಕೊಹ್ಲಿ ಬಂಧನಕ್ಕೆ ಪ್ರಧಾನಿ ಮೋದಿ ಬಳಿ ಮನವಿಯಿಟ್ಟ ರೋಹಿತ್‌ ಫ್ಯಾನ್ಸ್‌: ಟ್ವಿಟರ್‌ನಲ್ಲಿ ಟ್ರೆಂಡ್‌ ಆದ #ArrestKohli

ಹೊಸದಿಗಂತ ಡಿಜಿಟಲ್‌ ಡೆಸ್ಕ್‌
ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು (ಆರ್ಸಿಬಿ) ಹಾಗೂ ವಿರಾಟ್‌ ಕೊಹ್ಲಿ ಬಗ್ಗೆ ಕೆಟ್ಟದಾಗಿ ಮಾತನಾಡಿದ ಎಂದು ಸಿಟ್ಟಿಗೆದ್ದ ಆರ್‌ಸಿಬಿ ಅಭಿಮಾನಿಯೊಬ್ಬ ರೋಹಿತ್‌ ಶರ್ಮಾ ಅಭಿಮಾನಿಯನ್ನು ಹತ್ಯೆ ಮಾಡಿದ ಘಟನೆ ತಮಿಳುನಾಡಿನಲ್ಲಿ ನಡೆದಿದ್ದು, ದೊಡ್ಡ ಮಟ್ಟದಲ್ಲಿ ಸುದ್ದಿಯಾಯಾಗುತ್ತಿದೆ.
ಈ ನಡುವೆ ಅಭಿಮಾನಿಯ ಹತ್ಯೆಯಿಂದ ರೊಚ್ಚಿಗೆದ್ದಿರುವ ರೋಹಿತ್‌ ಶರ್ಮಾ ಫ್ಯಾನ್ಸ್ ಟ್ವಿಟರ್‌ ನಲ್ಲಿ #ArrestKohli ಎಂಬ ಹ್ಯಾಶ್‌ ಟ್ಯಾಗ್‌ ನಲ್ಲಿ ಅಭಿಯಾನ ಆರಂಭಿಸಿದ್ದು,‌ ʼತನ್ನ ಅಭಿಮಾನಿಯ ದುಷ್ಕೃತ್ಯಕ್ಕೆ ವಿರಾಟ್ ಕೊಹ್ಲಿಯೇ ನೇರಹೊಣೆ. ಅವರನ್ನು ಈ ಕೂಡಲೇ ಬಂಧಿಸಬೇಕು. ಆ ಮೂಲಕ ರೋಹಿತ್‌ ಅಭಿಮಾನಿಗಳಿಗೆ ನ್ಯಾಯ ದೊರಕಿಸಿಕೊಡಬೇಕುʼ ಎಂದು ಪ್ರಧಾನಿ ಮೋದಿಯವರ ಬಳಿ ಮನವಿಯಿಟ್ಟಿದ್ದಾರೆ.
ಈ ವಿಚಾರ ಈಗ ಕೊಹ್ಲಿ- ರೋಹಿತ್‌ ಅಭಿಮಾನಿಗಳ ನಡುವೆ ದೊಡ್ಡ ಜಟಾಪಟಿಗೆ ಕಾರಣವಾಗಿದೆ. ರೋಹಿತ್‌ ಅಭಿಮಾನಿಗಳಿಗೆ ತಿರುಗೇಟು ನೀಡಿರುವ ಕೊಹ್ಲಿ ಅಭಿಮಾನಿಗಳು, ʼಇದು ಕೊಹ್ಲಿ ಮಾಡಿದ ತಪ್ಪು ಹೇಗೆ ಆಗುತ್ತದೆ?. ರೋಹಿತ್‌ ಅಭಿಮಾನಿಗಳು ಅಸಂಬದ್ಧ ವಿಚಾರವನ್ನಿಟ್ಟುಕೊಂಡು ಕೊಹ್ಲಿಯನ್ನು ಟೀಕಿಸುತ್ತಿದ್ದಾರೆ. #ArrestKohli ಟ್ರೆಂಡ್‌ ಮಾಡುತ್ತಿರುವವರು ನಾಚಿಕೆಗೆಟ್ಟವರುʼ ಎಂದು ಟೀಕಾಪ್ರಹಾರ ನಡೆಸುತ್ತಿದ್ದಾರೆ. ಈ ಕುರಿತು ಪ್ರತಿಕ್ರಿಯಿಸಿರುವ ರೋಹಿತ್‌ ಅಭಿಮಾನಿಗಳು, ʼಈ ಅಮಾನವೀಯ ಘಟನೆಯನ್ನು ಸಮರ್ಥಿಸಿಕೊಳ್ಳುತ್ತಿರುವ ಅಭಿಮಾನಿಗಳೂ ಕೊಹ್ಲಿಯೊಂದಿಗೆ ಜೈಲಿಗೆ ಹೋಗಲು ಅರ್ಹರುʼ ಎಂದು ಕಿಡಿಕಾರಿದ್ದಾರೆ.

ಏನಿದು ಪ್ರಕರಣ?
ತಮಿಳುನಾಡಿನ ಮಲ್ಲೂರು ಸಮೀಪದ ಸಿಡ್ಕೋ ಇಂಡಸ್ಟ್ರಿಯಲ್ ಎಸ್ಟೇಟ್ ಬಳಿಯ ಬಯಲು ಪ್ರದೇಶದಲ್ಲಿ ಮದ್ಯ ಸೇವಿಸುತ್ತ ಕ್ರಿಕೆಟ್ ಕುರಿತು ಚರ್ಚೆ ನಡೆಸುತ್ತಿದ್ದ ಆರ್ಸಿಬಿ ಅಭಿಮಾನಿ ಎಸ್. ಧರ್ಮರಾಜ್ ಹಾಗೂ ಪಿ. ವಿಘ್ನೇಶ್ ಎಂಬ ಯುವಕರು, ವಿರಾಟ್ ಕೊಹ್ಲಿ ಮತ್ತು ರೋಹಿತ್ ಶರ್ಮಾ ನಡುವೆ ಉತ್ತಮ ಕ್ರಿಕೆಟಿಗ ಯಾರು ಎಂಬ ಬಗ್ಗೆ ಅವರು ತೀವ್ರ ವಾಗ್ವಾದ ನಡೆದಿದೆ.
(ಆರ್‌ಸಿಬಿ) ಅಭಿಮಾನಿಯಾಗಿರುವ ಧರ್ಮರಾಜ್ ವಿರಾಟ್ ಕೊಹ್ಲಿಯನ್ನು ಬೆಂಬಲಿಸುತ್ತಿದ್ದರೆ, ಮುಂಬೈ ಇಂಡಿಯಾದ ಅಭಿಮಾನಿ ವಿಘ್ನೇಶ್ ರೋಹಿತ್ ಶರ್ಮಾ ಅವರನ್ನು ಹೊಗಳಿದ್ದರು.
ವಾಗ್ವಾದದ ವೇಳೆ ವಿಘ್ನೇಶ್, ಆರ್ಸಿಬಿ ಹಾಗೂ ಕೊಹ್ಲಿಯ ಬಗ್ಗೆ ಕೆಟ್ಟದಾಗಿ ಮಾತನಾಡಿದ್ದಾನೆ. ಈ ಹೇಳಿಕೆಯಿಂದ ಕೋಪಗೊಂಡ ಧರ್ಮರಾಜ್, ವಿಘ್ನೇಶ್ ಮೇಲೆ ಬಾಟಲಿ ಹಾಗೂ ಕ್ರಿಕೆಟ್ ಬ್ಯಾಟ್ ನಿಂದ ಹಲ್ಲೆ ನಡೆಸಿ ಹತ್ಯೆ ಮಾಡಿ ಪರಾರಿಯಾಗಿದ್ದಾನೆ. ತನಿಖೆಯ ಆಧಾರದ ಮೇಲೆ ಪೊಲೀಸರು ಧರ್ಮರಾಜ್‌ನನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ. ಪ್ರಸ್ತುತ ಭಾರತ ತಂಡದ ಶ್ರೇಷ್ಠಕ್ರಿಕೆಟಿಗರಾದ ಕೊಹ್ಲಿ- ರೋಹಿತ್‌ ಇಬ್ಬರಲ್ಲಿ ಯಾರು ಉತ್ತಮರು ಎಂದು ಇಬ್ಬರೂ ಕ್ರಿಕೆಟಿಗರ ಅಭಿಮಾನಿಗಳು ಚರ್ಚೆ ನಡೆಸುತ್ತಿರುತ್ತಾರೆ. ಆದರೆ ಈ ಬಾರಿ ಅದು ವಿಪರೀತಕ್ಕೆ ಹೋಗಿದ್ದು ಕೊಲೆಯಲ್ಲಿ ಪರ್ಯಾವಸನ ಗೊಂಡಿದೆ.
ಈ ಹಿಂದೆಯೂ ಅಭಿಮಾನಿಗಳು ರಾಹುಲ್ ದ್ರಾವಿಡ್ ಮತ್ತು ಸೌರವ್ ಗಂಗೂಲಿ ಅವರನ್ನು ಹೋಲಿಸುತ್ತಿದ್ದರು. ಆದರೆ ಕ್ರಿಕೆಟಿಗನ ಮೇಲಿನ ಪ್ರೀತಿಯನ್ನು ಸಾಬೀತುಪಡಿಸಲು ಅಪರಾಧಗಳನ್ನು ಎಸಗಿರಲಿಲ್ಲ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!