ಹೊಸದಿಗಂತ ಡಿಜಿಟಲ್ ಡೆಸ್ಕ್:
ಕೇಂದ್ರ ಸರ್ಕಾರ ಇಂಡಿಯಾ ಬದಲು ಭಾರತ್ ಎಂಬ ಹೆಸರನ್ನು ಮರುನಾಮಕರಣ ಮಾಡಲು ಮುಂದಾಗುತ್ತಿರುವ ವಿಷಯ ಎಲ್ಲೆಡೆ ಚರ್ಚೆಗೆ ಕಾರಣವಾಗಿದೆ.
ಭಾರತ್ ಎನ್ನುವ ಹೊಸ ಹೆಸರು ಅನಾವಶ್ಯಕ, ಈಗ ಇದ್ದಕ್ಕಿದ್ದಂತೆಯೇ ಹೆಸರು ಯಾಕೆ ಬದಲಾಯಿಸಬೇಕು? ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ.
ಇಂಡಿಯಾ ಎನ್ನುವ ಪದವನ್ನು ನಮ್ಮ ದೇಶ ಒಪ್ಪಿಕೊಂಡಾಗಿದೆ. ಈಗ ಹೊಸ ಹೆಸರು ಬೇಕಿಲ್ಲ. ರಿಪಬ್ಲಿಕ್ ಆಫ್ ಇಂಡಿಯಾ ಎಂದು ನಮ್ಮ ಸಂವಿಧಾನ ಹೇಳಿದೆ. ಅದನ್ನು ಒಪ್ಪಾಗಿದೆ, ಈಗ ಹೊಸ ಹೆಸರು ಅನಾವಶ್ಯಕ ಎಂದಿದ್ದಾರೆ.