ಯುಕೆ ಲೇಖಕಿ ನಿತಾಶಾ ಕೌಲ್‌ಗೆ ಭಾರತ ನಿರ್ಬಂಧ ಯಾಕೆ? ಕಾರಣ ತಿಳಿಸಿದ ಕೇಂದ್ರ ಸರಕಾರ!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಯುಕೆ ಲೇಖಕಿ ನಿತಾಶಾ ಕೌಲ್ (Nitasha Kaul) ಅವರ ಭಾರತ ನಿರ್ಬಂಧ ಕುರಿತು ವಿದೇಶಾಂಗ ವ್ಯವಹಾರಗಳ ಸಚಿವಾಲಯದ (MEA) ವಕ್ತಾರ ರಣಧೀರ್ ಜೈಸ್ವಾಲ್ (Randhir Jaiswal) ಗುರುವಾರ ಮಾತನಾಡಿದ್ದಾರೆ.

ಯುಕೆ ಲೇಖಕಿ ನಿತಾಶಾ ಕೌಲ್ (Nitasha Kaul) ಅವರಿಗೆ ದೇಶಕ್ಕೆ ಏಕೆ ಪ್ರವೇಶ ನಿರಾಕರಿಸಲಾಗಿದೆ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ವಿದೇಶಿ ಪ್ರಜೆಯೊಬ್ಬರಿಗೆ ದೇಶಕ್ಕೆ ಪ್ರವೇಶ ನೀಡುವುದು ಸಾರ್ವಭೌಮ ನಿರ್ಧಾರ ಎಂದು ಹೇಳಿದ್ದಾರೆ.

ಯುಕೆಯಲ್ಲಿರುವ ಕಾಶ್ಮೀರಿ ಮೂಲದ ಲೇಖಕಿ ಭಾರತಕ್ಕ ಬಂದಾಗ ಬೆಂಗಳೂರಿನ ವಿಮಾನ ನಿಲ್ದಾಣದಲ್ಲಿ ತನಗಾದ ಕಷ್ಟವನ್ನು ಸಾಮಾಜಿಕ ಮಾಧ್ಯಮ ಎಕ್ಸ್ ನಲ್ಲಿ ವಿವರಿಸಿದ್ದಾರೆ. ಕರ್ನಾಟಕ ಸರ್ಕಾರವು ಸೆಮಿನಾರ್‌ಗೆ ಆಹ್ವಾನಿಸಿದ್ದರೂ ಪ್ರವೇಶ ನಿರಾಕರಿಸಲಾಯಿತು. ಈ ಆದೇಶವು ದೆಹಲಿಯಿಂದ ಬಂದಿದೆ ಮತ್ತು ಆರ್‌ಎಸ್‌ಎಸ್ ವಿರುದ್ಧದ ತನ್ನ ಹಿಂದಿನ ಲೇಖನಗಳನ್ನು ಆಧರಿಸಿದೆ ಎಂದು ಕೌಲ್ ಹೇಳಿದ್ದರು.

ಪ್ರಜಾಸತ್ತಾತ್ಮಕ ಮತ್ತು ಸಾಂವಿಧಾನಿಕ ಮೌಲ್ಯಗಳ ಬಗ್ಗೆ ಮಾತನಾಡಿದ್ದಕ್ಕಾಗಿ ಭಾರತಕ್ಕೆ ಪ್ರವೇಶವನ್ನು ನಿರಾಕರಿಸಲಾಗಿದೆ. ಕರ್ನಾಟಕ ಸರ್ಕಾರ (ಕಾಂಗ್ರೆಸ್ ಆಡಳಿತದ ರಾಜ್ಯ) ಗೌರವಾನ್ವಿತ ಪ್ರತಿನಿಧಿಯಾಗಿ ನನ್ನನ್ನು ಸಮ್ಮೇಳನಕ್ಕೆ ಆಹ್ವಾನಿಸಲಾಯಿತು ಆದರೆ ಕೇಂದ್ರ ಸರ್ಕಾರ ನನಗೆ ಪ್ರವೇಶವನ್ನು ನಿರಾಕರಿಸಿತು. ನನ್ನ ಎಲ್ಲಾ ದಾಖಲೆಗಳು ಯುಕೆ ಪಾಸ್‌ಪೋರ್ಟ್ ಮತ್ತು ಒಸಿಐ ಮಾನ್ಯ ಮತ್ತು ಇತ್ತೀಚಿನದ್ದು ಎಂದು ನಿತಾಶಾ ಎಕ್ಸ್‌ನಲ್ಲಿ ಬರೆದಿದ್ದಾರೆ.

ಈ ನಿರ್ದಿಷ್ಟ ಯುಕೆ ಪ್ರಜೆ (ನಿತಾಶಾ ಕೌಲ್) ಫೆಬ್ರವರಿ 22 ರಂದು ಭಾರತಕ್ಕೆ ಬಂದಿದ್ದಾರೆ. ನಿಮಗೆ ತಿಳಿದಿರುವಂತೆ, ನಮ್ಮ ದೇಶಕ್ಕೆ ವಿದೇಶಿ ಪ್ರಜೆಗಳ ಪ್ರವೇಶವು ಸಾರ್ವಭೌಮ ನಿರ್ಧಾರವಾಗಿದೆ ಎಂದು ವಿದೇಶಾಂಗ ವ್ಯವಹಾರ ಸಚಿವಾಲಯದ ವಕ್ತಾರರು ಹೇಳಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!