BIG BOSS | ಬಿಗ್‌ಬಾಸ್ ಮನೆಯಲ್ಯಾಕೆ ನಂದಿನಿ ಹಾಲು ಬಳಸೋದಿಲ್ಲ? ವಿಡಿಯೋ ವೈರಲ್

ಹೊಸದಿಗಂತ ಡಿಜಿಟಲ್ ಡೆಸ್ಕ್:

ಬಿಗ್‌ಬಾಸ್ ಮನೆಯಲ್ಲಿ ನಡೆದ ಒಂದಿಲ್ಲೊಂದು ವಿಷಯ ಹೊರಗೆ ವೈರಲ್ ಆಗುತ್ತದೆ. ಈ ಬಾರಿ ಬಿಗ್‌ಬಾಸ್ ಮನೆಯಲ್ಲಿ ನಂದಿನಿ ಹಾಲನ್ನೇಕೆ ಬಳಸ್ತಾ ಇಲ್ಲ ಅನ್ನೋ ವಿಷಯ ಮುನ್ನೆಲೆಗೆ ಬಂದಿದೆ.

ಸಾಮಾಜಿಕ ಜಾಲತಾಣದಲ್ಲಿ ಫೋಟೊ, ವಿಡಿಯೋ ವೈರಲ್ ಆಗಿದೆ. ವಿನಯ್ ಫ್ರಿಡ್ಜ್ ಬಾಗಿಲು ತೆಗೆದು ಕಾರ್ತಿಕ್ ಹಾಲಿನ ಪ್ಯಾಕೆಟ್ ಮೇಲೆ ಕೆ ಎಂದು ಬರೆದುಕೊಂಡಿದ್ದಾರೆ ಎಂದು ಆಡಿಕೊಳ್ಳುತ್ತಿರುತ್ತಾರೆ. ಈ ವೇಳೆ ಅಮುಲ್ ಹಾಲಿನ ಪ್ಯಾಕೆಟ್ಸ್ ವಿಡಿಯೋ ತೋರಿಸಲಾಗಿದೆ.

ನೆಟ್ಟಿಗರು ನಮ್ಮ ರಾಜ್ಯದ್ದೇ ಆದ ನಂದಿನಿ ಹಾಲನ್ನು ಕೊಡುವ ಬದಲು ಇವರಿಗ್ಯಾಕೆ ಅಮುಲ್ ನೀಡುತ್ತಿದ್ದಾರೆ ಎಂದು ನೆಟ್ಟಿಗರು ಗರಂ ಆಗಿದ್ದಾರೆ. ನಮ್ಮ ರೈತರು ಚೆನ್ನಾಗಿರಬೇಕು ಅಂದ್ರೆ ಅಮುಲ್ ಬದಲು ನಂದಿನಿ ಬರಬೇಕು ಎಂದು ನೆಟ್ಟಿಗರು ಕಮೆಂಟ್ ಮಾಡ್ತಿದ್ದಾರೆ.

 

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!