Tuesday, September 23, 2025

ಕ್ರಿಶ್ಚಿಯನ್‌ ರಾಷ್ಟ್ರದಲ್ಲಿ ಹಿಂದೂ ಪ್ರತಿಮೆ ಯಾಕೆ? ಟ್ರಂಪ್‌ ಬೆಂಬಲಿಗನ ಪೋಸ್ಟ್‌

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ರಿಪಬ್ಲಿಕನ್‌ ಪಕ್ಷದ ನಾಯಕ ಹನುಮಂತನ ಮೂರ್ತಿಯ ಬಗ್ಗೆ ಪೋಸ್ಟ್‌ ಮಾಡಿದ್ದು ಈಗ ವಿವಾದಕ್ಕೆ ಕಾರಣವಾಗಿದೆ.

ಟೆಕ್ಸಾಸ್‌ನಲ್ಲಿ ತಲೆ ಎತ್ತಿರುವ 90 ಅಡಿ ಎತ್ತರದ ಹನುಮಂತನ ಪ್ರತಿಮೆಯ ಬಗ್ಗೆ ಟೆಕ್ಸಾಸ್‌ನ ರಿಪಬ್ಲಿಕನ್ ಪಕ್ಷದ ಸಂಸದ ಅಲೆಕ್ಸಾಂಡರ್ ಡಂಕನ್ ಪೋಸ್ಟ್‌ ಹಾಕಿ ಟೀಕಿಸಿದ್ದಾರೆ.

ಟೆಕ್ಸಾಸ್‌ನಲ್ಲಿ ನಕಲಿ ಹಿಂದೂಗಳ ನಕಲಿ ದೇವರ ಪ್ರತಿಮೆಯನ್ನು ನಾವು ಏಕೆ ಅನುಮತಿಸುತ್ತಿದ್ದೇವೆ? ನಮ್ಮದು ಕ್ರಿಶ್ಚಿಯನ್ ರಾಷ್ಟ್ರ ಎಂದು ಎಕ್ಸ್‌ನಲ್ಲಿ ಪೋಸ್ಟ್‌ ಮಾಡಿದ್ದಾರೆ.

ಇನ್ನೊಂದು ಪೋಸ್ಟ್‌ನಲ್ಲಿ ನಾವು ದೇವರ ಅಡಿಯಲ್ಲಿ ಒಂದೇ ರಾಷ್ಟ್ರ ಎಂಬುದನ್ನು ಮರೆಯಬಾರದು ಮತ್ತು ದೇವರು ಒಬ್ಬನೇ ಅದು ಯೇಸು ಕ್ರಿಸ್ತನು. ಆತ ರಾಜಾಧಿರಾಜ ಮತ್ತು ಪ್ರಭುಗಳ ಪ್ರಭು ಎಂಬುದನ್ನು ಎಂದಿಗೂ ಮರೆಯಬಾರದು ಎಂದು ಮತ್ತೊಂದು ಪೋಸ್ಟ್‌ ಹಾಕಿ ತಮ್ಮ ಹೇಳಿಕೆಯನ್ನು ಸಮರ್ಥಿಸಿಕೊಂಡಿದ್ದಾರೆ.

ಇದನ್ನೂ ಓದಿ