ಊಟ ಮಾಡಿ ಅರ್ಧಗಂಟೆ ಬಿಟ್ಟು ಸ್ನಾನ ಮಾಡಿ, ತಕ್ಷಣ ಮಾಡಬೇಡಿ ಎಂದು ದೊಡ್ಡವರು ಹೇಳೋದನ್ನು ಕೇಳಿರ‍್ತೀರಿ..
ಇದಕ್ಕೆ ಕಾರಣ ಏನು?
ಊಟದ ತಕ್ಷಣ ಸ್ನಾನ ಮಾಡಿದರೆ ಇದು ಜೀರ್ಣಾಂಗ ವ್ಯವಸ್ಥೆ ಮೇಲೆ ಪರಿಣಾಮ ಬೀರುತ್ತದೆ. ನೈಸರ್ಗಿಕವಾಗಿ ಜೀರ್ಣವಾಗುವ ಪ್ರಕ್ರಿಯೆಗೆ ಬ್ರೇಕ್ ಬೀಳುತ್ತದೆ. ಊಟ ಜೀರ್ಣ ಆಗೋದಕ್ಕೆ ದೇಹಕ್ಕೆ ತುಂಬಾ ಎನರ್ಜಿ ಬೇಕು, ಇದರಿಂದಾಗಿ ಹೆಚ್ಚು ರಕ್ತ ಸಂಚಲನ ಹೊಟ್ಟೆ ಭಾಗಕ್ಕೆ ಆಗುತ್ತದೆ. ಊಟದ ನಂತರ ಸ್ನಾನ ಒಳ್ಳೆಯದಲ್ಲ. ದೇಹಕ್ಕೆ ಹೆಚ್ಚು ಸ್ಟ್ರೆಸ್ ಆಗುತ್ತದೆ.