ಪತಿಯಿಲ್ಲದ ಜೀವನ ನನಗ್ಯಾಕೆ? ಮಗನ ಜೊತೆ ಕೆರೆಗೆ ಹಾರಿದ ಪತ್ನಿ!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಪ್ರಾಣಕ್ಕಿಂತ ಹೆಚ್ಚಾಗಿ ಪ್ರೀತಿಸುತ್ತಿದ್ದ ಪತಿಯ ಸಾವಿನಿಂದ ಖಿನ್ನತೆಗೆ ಒಳಗಾಗಿದ್ದ ಪತ್ನಿ ಮಗನ ಜೊತೆ ಕೆರೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಆಂಧ್ರ ಮೂಲದ ಬನ್ನೇರುಘಟ್ಟದ ಸಿಕೆಪಾಳ್ಯ ನಿವಾಸಿ ವಿಜಯಲಕ್ಷ್ಮಿ ತಮ್ಮ ಮಗ ಹರಿಹರನ್ ಜೊತೆ ಕೆರೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಎರಡು ವರ್ಷದ ಹಿಂದೆ ಪತಿ ಗಣೇಶ್ ಅಪಘಾತದಲ್ಲಿ ಮೃತಪಟ್ಟಿದ್ದರು. ಅದಾದ ನಂತರದಿಂದ ಮಾನಸಿಕ ಖಿನ್ನತೆಗೆ ಲಕ್ಷ್ಮಿ ಒಳಗಾಗಿದ್ದು, ಮಗನನ್ನು ಬಿಗಿಯಾಗಿ ಸೊಂಟಕ್ಕೆ ಕಟ್ಟಿಕೊಂಡು ನದಿಗೆ ಹಾರಿದ್ದಾರೆ. ಬನ್ನೇರುಘಟ್ಟ ಠಾಣೆಯಲ್ಲಿ ದೂರು ದಾಖಲಾಗಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!