ಮನ್ಸಿಗೆ ಸಮಾಧಾನ ಇಲ್ಲ, ಮಕ್ಕಳು ಓದ್ತಿಲ್ಲ, ಮದುವೆಗೆ ಹೆಣ್ಣು ಸಿಗ್ತಿಲ್ಲ, ವಿದ್ಯಾಭ್ಯಾಸ ತಲೆಗೆ ಹತ್ತಿಲ್ಲ, ಪ್ರಮೋಷನ್ ಮಾತೇ ಇಲ್ಲ, ಕೆಲಸದ ಗ್ಯಾರಂಟಿ ಇಲ್ಲ, ಮಕ್ಕಳಾಗ್ತಿಲ್ಲ, ಆದ ಮಕ್ಕಳು ಮಾತು ಕೇಳ್ತಿಲ್ಲ, ಊಟ ಚೆನ್ನಾಗಿಲ್ಲ, ಟಿವಿ ಬರ್ತಿಲ್ಲ, ಬ್ಯುಸ್‌ನೆಸ್ ಹಾಳಾಗ್ತಿದೆ, ಕೆಲಸದವರು ಸರಿ ಇಲ್ಲ, ಅತ್ತೆ ಕಾಟ ಕೊಡ್ತಾರೆ, ಹೆಂಡತಿ ನಕರಾ ಮಾಡ್ತಾಳೆ….
ನಮ್ಮ ಜೀವನದಲ್ಲಿ ಈ ರೀತಿಯದ್ದು ಸಾವಿರ ಕಂಪ್ಲೆಂಟ್ ಇದ್ದೇ ಇರುತ್ತದೆ. ಬೆಳಗ್ಗೆದ್ದು ಕುಡಿಯೋಕೆ ಬಿಸಿನೀರು ಸಿಗ್ತಿಲ್ಲ ಎನ್ನುವುದರಿಂದ ಶುರುವಾಗುವ ಕಂಪ್ಲೆಂಟ್ಸ್, ರಾತ್ರಿ ಸೊಳ್ಳೆ ಪರದೆ ಸರಿಯಾಗಿ ಸೇರಿಸಿಲ್ಲ ಎಂದು ಪಕ್ಕದವರ ಮೇಲೆ ಕೂಗಾಡುವುದರ ಜೊತೆ ಕೊನೆಯಾಗುತ್ತದೆ. ಎಂದಾದರೂ ನಿಮ್ಮ ಲೈಫ್ ಎಷ್ಟು ಸೂಪರ್ ಆಗಿದೆ ಅಂತ ಯೋಚನೆ ಮಾಡಿದ್ದೀರಾ?
ನಿಮ್ಮ ಹತ್ತಿರ ಕುಡಿಯೋಕೆ ಶುದ್ಧ ನೀರಿದೆ ಸ್ವಾಮಿ, ಎಷ್ಟೋ ಜನಕ್ಕೆ ಅದು ಕೂಡ ಇಲ್ಲ. ಇನ್ನು ಸೊಳ್ಳೆಪರದೆ ವಿಚಾರಕ್ಕೆ ಕಂಪ್ಲೆಂಟ್ ಮಾಡೋ ಮುನ್ನ ಮಲಗೋಕೆ ಮಂಚ ಇದೆ ಅಂತ ಯೋಚನೆ ಮಾಡಿದ್ದೀರಾ? ಇದಕ್ಕೆಲ್ಲಾ ಥ್ಯಾಂಕ್ಸ್ ಹೇಳಿದ್ದೀರಾ? ತಿನ್ನೋ ಅನ್ನಕ್ಕೆ, ಕುಡಿಯುವ ನೀರಿಗೆ, ಹಾಕುವ ಬಟ್ಟೆಗೆ, ಇರುವ ಕೆಲಸಕ್ಕೆ, ತಲೆ ಮೇಲಿನ ಸೂರಿಗೆ, ದಿನವೂ ಹೊತ್ತೊಯ್ವ ಗಾಡಿಗೆ, ಬಾಸ್ ಉಗಿದಾಗ ಸಮಾಧಾನ ಮಾಡೋ ಕಲೀಗ್‌ಗೆ, ಸುಸ್ತಾಗಿ ಬಂದಾಗ ಟೇಸ್ಟಿ ಊಟ ಕೊಡೋ ಪತ್ನಿಗೆ ಒಂದು ದಿನವಾದ್ರೂ ಧನ್ಯವಾದ ಹೇಳಿದ್ದೀರಾ? ಬಾಯಿಬಿಟ್ಟು ಹೇಳೋದು ಬಿಡಿ, ಮನಸಿನಲ್ಲಾದರೂ ನಾನು ಲಕ್ಕಿ ಅಂದುಕೊಂಡಿದ್ದೀರಾ?
ನಿಮಗಿಂತ ಹಣದಲ್ಲಿ ಹೆಚ್ಚಿರುವವರು ಲಕ್ಕಿ ಎಂದು ಭಾವಿಸಬೇಡಿ, ಹಣಕ್ಕೆ ತಕ್ಕಂತೆ ಮರ್ಯಾದಿ ಕೂಡ ಕೊಡಬೇಡಿ. ಆತನ ಬಳಿ ಹಣ ಇರಬಹುದು, ನೆಮ್ಮದಿ ಇಲ್ಲದೇ ಇರಬಹುದು, ಅಥವಾ ಇದ್ರೂ ಇರಬಹುದು ಅದನ್ನು ಕಟ್ಕೊಂಡು ನೀವೇನು ಮಾಡ್ತೀರಿ? ನಿಮಗೆ ಅದ್ರಿಂದ ಹೊಟ್ಟೆ ಉರಿ ಆಗಬಹುದು ಆದರೆ ನಿಮ್ಮ ಲೈಫ್‌ನಲ್ಲಿ ಏನೆಲ್ಲಾ ಬದಲಾವಣೆ ಮಾಡೋಕೆ ಸಾಧ್ಯವೋ ಮಾಡಿ, ಬಟ್ ನಿಮ್ಮನ್ನು ನೀವು ಕಳ್ಕೋಬೇಡಿ..
ಈ ವಿಷಯ, ವಸ್ತು, ಜೀವಗಳು ನಿಮ್ಮ ಬಳಿ ಇದ್ರೆ ಅದಕ್ಕೆ ನಿತ್ಯವೂ ಥ್ಯಾಂಕ್ಸ್ ಹೇಳಿ, ನಿಮ್ಮ ಲೈಫ್‌ಗೆ ಗ್ರೇಟ್‌ಫುಲ್ ಆಗಿರಿ…
ನಿಮ್ಮ ಬಳಿ ಸುಖ-ದುಃಖ ಹಂಚಿಕೊಳ್ಳೋಕೆ ಫ್ರೆಂಡ್ಸ್ ಇದ್ದಾರಾ? ಇದು ಬೆಸ್ಟ್ ಅಲ್ವಾ?
ನಿಮ್ಮ ಆರೋಗ್ಯ ಹೇಗಿದೆ? ಆರೋಗ್ಯವಾಗಿದ್ದಾಗ ಖುಷಿ ಪಡಿ, ಒಂದು ಪುಟ್ಟ ನೆಗಡಿ ಆದರೂ ಲೈಫ್ ಅಲ್ಲೋಲ ಕಲ್ಲೋಲ ತಾನೆ?
ನೀವು ಎಷ್ಟಾದ್ರೂ ಓದಿರಿ. ನಿಮಗಿಂತ ಕಡಿಮೆ ಓದಿರೋರು, ನಿಮಗಿಂತ ಹೆಚ್ಚು ಓದಿರೋರು ಇದ್ದೇ ಇರ್ತಾರೆ. ಇರುವುದನ್ನು ಅಕ್ಸೆಪ್ಟ್ ಮಾಡಿ
ಎಷ್ಟೋ ಮಂದಿ ದಿನಕ್ಕೆ ಐದು ಬಾರಿ ಕೂಡ ನಗುವುದಿಲ್ಲ. ನೀವು ಅದಕ್ಕಿಂತ ಹೆಚ್ಚು ನಗ್ತಿದ್ದೀರಿ ಎಂದರೆ ಖುಷಿ ಅಲ್ವಾ?
ಅಪ್ಪ-ಅಮ್ಮನನ್ನು ಬೈಕೊಂಡು ಓಡಾಡ್ತೀರಿ, ಬಟ್ ಅವರ ಒಂದು ಮಾತು ಕೇಳ್ಬೇಕು ಅಂತ ಎಷ್ಟೋ ಮಂದಿ ಒದ್ದಾಡ್ತಾರೆ, ದಿನವೂ ಕಣ್ಣೀರಿಡ್ತಾರೆ.
ಜೀವನದಲ್ಲಿ ಯಾವುದನ್ನೂ ಗ್ರಾಂಟೆಂಡ್ ಆಗಿ ತಗೋಬೇಡಿ. ಅದು ನಿಮ್ಮ ಫ್ಯಾಮಿಲಿ, ಫ್ರೆಂಡ್ಸ್ ಏನೇ ಆಗಿರಲಿ. ಇಲ್ಲಿ ಯಾವುದೂ ಪರ್ಮನೆಂಟ್ ಅಲ್ಲ. ಇರುವವರೆಗೂ ಖುಷಿ ಪಡಿ, ಆಕ್ಷಣವನ್ನು ಅದರಂತೆ ಎಂಜಾಯ್ ಮಾಡಿ..