ಮಹಿಳೆಯರು ಕಾಡಿಗೆ, ಐಲೈನರ್ ಹಚ್ಚುವಾಗ ಹೆಚ್ಚಾಗಿ ತಮ್ಮ ಬಾಯಿಯನ್ನು ಅರ್ಧದಷ್ಟು ಓಪನ್ ಮಾಡಿರುತ್ತಾರೆ. ಇದರ ಹಿಂದೆ ಶಾರೀರಿಕ ಪ್ರಕ್ರಿಯೆಯೇ ಅಥವಾ ಇದಕ್ಕೆ ಬೇರೆ ಏನಾದರೂ ಕಾರಣವಿದೆಯೇ ಎನ್ನುವ ಇಂಟ್ರೆಸ್ಟಿಂಗ್ ಮಾಹಿತಿ ಇಲ್ಲಿದೆ.
ಕೆಲವು ಬಾರಿ ನಮಗೇ ಅರಿವಿಲ್ಲದಂತೆ ಕೆಲವು ವಿಚಾರಗಳಲ್ಲಿ ನಮ್ಮ ದೇಹವು ಪ್ರತಿಕ್ರಿಯಿಸುತ್ತದೆ. ಅಂತಹ ಪ್ರಕ್ರಿಯೆಯಲ್ಲಿ ಐಲೈನರ್, ಕಾಡಿಗೆ, ಮಸ್ಕರಾ ಹಚ್ಚುವಾಗ ಬಾಯಿ ಅರ್ಧ ತೆರೆಯುವುದು ಕೂಡ ಒಂದು. ಕಣ್ಣುಗಳ ಸಮೀಪ ಯಾವುದೇ ಚಲನೆ ಮಾಡಿದಾಗ ಮುಖದ ಸ್ನಾಯುಗಳು ರಿಲ್ಯಾಕ್ಸ್ ಮೂಡ್‌ಗೆ ತೆರಳುತ್ತವೆ. ಇದರಿಂದ ದವಡೆ ಸಡಿಲವಾಗುತ್ತದೆ. ಇದರಿಂದ ಬಾಯಿ ತಾನಾಗಿಯೇ ತೆರೆದುಕೊಳ್ಳುತ್ತದೆ.
ಐಲೈನರ್ ಅಥವಾ ಮಸ್ಕರಾವನ್ನು ಹಚ್ಚುವಾಗ ಬಾಯಿ ತೆರೆಯುವುದು ಒಂದು ನಿರ್ದಿಷ್ಟ ನೈಸರ್ಗಿಕ ಪ್ರಕ್ರಿಯೆಯೇ. ನಾವು ಕಣ್ಣುಗಳಂತಹ ಸೂಕ್ಷ್ಮ ಪ್ರದೇಶಗಳಿಗೆ ಸೌಂದರ್ಯವರ್ಧಕಗಳನ್ನು ಹಚ್ಚಿದಾಗ ಕಣ್ಣುಗಳನ್ನು ನಿಯಂತ್ರಿಸುವ ಆರ್ಬಿಕ್ಯುಲಾರಿಸ್ ಮತ್ತು ಇತರ ಮುಖದ ಸ್ನಾಯುಗಳು ಸಕ್ರಿಯಗೊಳ್ಳುತ್ತವೆ. ನಮ್ಮ ಕೈಗಳನ್ನು ಸ್ಥಿರಗೊಳಿಸಲು ಅಥವಾ ಈ ಸ್ನಾಯುಗಳ ಮೇಲಿನ ಒತ್ತಡವನ್ನು ಸರಾಗಗೊಳಿಸಲು ನಮ್ಮ ದವಡೆಗಳು ಸ್ವಯಂಚಾಲಿತವಾಗಿ ತೆರೆದುಕೊಳ್ಳುತ್ತವೆ, ಇದು ಸುತ್ತಮುತ್ತಲಿನ ಮುಖದ ಸ್ನಾಯುಗಳನ್ನು ಸಡಿಲಗೊಳಿಸುತ್ತದೆ.