ಈ ಕೆಲವು ಹಣ್ಣುಗಳನ್ನು ತಪ್ಪಿಯೂ ಫ್ರಿಡ್ಜ್‌ನಲ್ಲಿ ಇಡಲು ಹೋಗಬೇಡಿ”
ಬಾಳೆಹಣ್ಣು
ಬಾಳೆಹಣ್ಣುಗಳನ್ನು ಎಂದಿಗೂ ಫ್ರಿಡ್ಜ್‌ನಲ್ಲಿ ಇಡಬಾರದು. ರೆಫ್ರಿಜರೇಟರ್‌ನಲ್ಲಿ ಇಟ್ಟಾಗ, ಬಾಳೆಹಣ್ಣಿನ ಸಿಪ್ಪೆ ಶೀಘ್ರವೇ ಕಪ್ಪು ಬಣ್ಣಕ್ಕೆ ತಿರುಗಲು ಪ್ರಾರಂಭಿಸುತ್ತವೆ ಮತ್ತು ಅವುಗಳ ರುಚಿ ಕೂಡಾ ಬದಲಾಗಲು ಪ್ರಾರಂಭಿಸುತ್ತದೆ.
ಕಲ್ಲಂಗಡಿ
ಕಲ್ಲಂಗಡಿಯಲ್ಲಿ ನೀರಿನ ಅಂಶ ಹೇರಳವಾಗಿರುವುದರಿಂದ, ಈ ಹಣ್ಣನ್ನು ಹೆಚ್ಚಿನವರು ತಂಪಾಗಿಸಲು ಫ್ರಿಜ್‌ನಲ್ಲಿ ಇಡುತ್ತಾರೆ. ಹೀಗೆ ಈ ಹಣ್ಣನ್ನು ರೆಫ್ರಿಜರೇಟರ್‌ನಲ್ಲಿ ಇಡುವುದರಿಂದ ಕಲ್ಲಂಗಡಿಯಲ್ಲಿರುವ ಉತ್ಕರ್ಷಣ ನಿರೋಧಕಗಳು ಕಡಿಮೆಯಾಗುತ್ತವೆ.
ಮಾವು
ಮಾವನ್ನು ರೆಫ್ರಿಜರೇಟರ್‌ನಲ್ಲಿ ಇಡುವ ತಪ್ಪು ಮಾಡಬೇಡಿ, ಏಕೆಂದರೆ ಶೀತ ತಾಪಮಾನವು ಮಾವಿನ ಹಣ್ಣಿನ ರುಚಿ ಮತ್ತು ವಿನ್ಯಾಸದ ಮೇಲೆ ಪರಿಣಾಮ ಬೀರುತ್ತದೆ.
ಅನಾನಸ್
ಅನಾನಸ್ ಹಣ್ಣನ್ನು ಕೂಡಾ ರೆಫ್ರಿಜರೇಟರ್‌ನಲ್ಲಿ ಇಡಬಾರದು. ಫ್ರಿಡ್ಜ್‌ನಲ್ಲಿ ಇಡುವುದರಿಂದ ಈ ಹಣ್ಣಿನ ರುಚಿ ಕೆಡುತ್ತದೆ ಮತ್ತು ಶೀಘ್ರವೇ ಹಣ್ಣು ಮೃದುವಾಗುತ್ತದೆ. ಜೊತೆಗೆ ಅದರ ನೈಸರ್ಗಿಕ ಪರಿಮಳ ಸಹ ಹೋಗುತ್ತದೆ.