ವೈದ್ಯರು ನಿಜಕ್ಕೂ ಅದ್ಭುತ ಸೇವೆ ಸಲ್ಲಿಸುತ್ತಾರೆ. ಕೇವಲ ರೋಗಿಯ ಕೈ ಹಿಡಿದರೆ ಸಾಕು, ಅವರಿಗೆ ಎಂಥ ಕಾಯಿಲೆ ಇದೆಯೆಂದು ಹೇಳಬಲ್ಲರು. ಔಷಧಿಯ ಪ್ರಮಾಣದಿಂದ ಪ್ರಯೋಗದವರೆಗೆ ನಿಖರವಾಗಿ ತಿಳಿಸುತ್ತಾರೆ. ಆದರೆ, ಈ ತಜ್ಞರ ಬಗ್ಗೆ ಕೇಳಿಬರೋ ಒಂದು ಸಾಮಾನ್ಯ ಟೀಕೆ ಅಂದ್ರೆ ಅದು ಅವರ ಹ್ಯಾಂಡ್ ರೈಟಿಂಗ್ ತುಂಬಾ ಅಸ್ಪಷ್ಟವಾಗಿರುತ್ತದೆ ಅಂತ! ಈ ಟೀಕೆಗೆ ನಿಜಕ್ಕೂ ಕಾರಣವಿದೆ.
ಹೌದು, ವೈದ್ಯರ ಹ್ಯಾಂಡ್ ರೈಟಿಂಗ್ ಅಸ್ಪಷ್ಟವಾಗಲು ಹಲವಾರು ಕಾರಣಗಳಿವೆ. ಮೆಡಿಕಲ್ ವಿದ್ಯಾರ್ಥಿಗಳ ತರಬೇತಿ ಸಮಯದಲ್ಲೇ ಅತಿಯಾದ ಓದು, ಪಠ್ಯ ಭಾರ, ಹಾಗೂ ದಿನಕ್ಕೇ ನೂರಾರು ಪುಟ ನೋಟ್ಸ್ ಬರೆಯುವ ಅಗತ್ಯವಿರುತ್ತದೆ. ಈ ಸಮಯದಲ್ಲಿ ಸ್ಪಷ್ಟ ಬರವಣಿಗೆಯ ಬದಲು ವೇಗವಾಗಿ ಬರೆಯೋಕೆ ಅವರು ಅಭ್ಯಾಸ ಮಾಡಿಕೊಳ್ಳುತ್ತಾರೆ. ಈ ಅಭ್ಯಾಸವೇ ಮುಂದಿನ ವೃತ್ತಿಜೀವನದಲ್ಲೂ ಮುಂದುವರಿಯುತ್ತದೆ.
ವೈದ್ಯರು ಪ್ರತಿದಿನ ನೂರಾರು ರೋಗಿಗಳನ್ನು ಭೇಟಿ ಮಾಡಬೇಕಾಗುತ್ತದೆ. ಪ್ರತಿಯೊಬ್ಬರ ಮಾಹಿತಿ ದಾಖಲಿಸಿ, ಸಮಸ್ಯೆ ವಿಶ್ಲೇಷಿಸಿ, ಔಷಧಿ ಸೂಚಿಸಲು ಸಮಯ ಕಡಿಮೆ ಇರುತ್ತದೆ. ಇಂತಹ ಒತ್ತಡದ ಪರಿಸ್ಥಿತಿಯಲ್ಲಿ ವೇಗದ ಬರವಣಿಗೆಯೇ ಸೂಕ್ತ ಎನಿಸುತ್ತದೆ. ಆದರೆ ಈ ವೇಗವೇ ಅವರ ಕೈಬರಹವನ್ನು ಅಸ್ಪಷ್ಟಗೊಳಿಸುತ್ತದೆ.
ಮೆಡಿಕಲ್ ಟರ್ಮಿನಾಲಜಿಗಳ ಸಂಕ್ಷಿಪ್ತ ರೂಪ ಅಥವಾ ಡೋಸೇಜ್ ಬದಲಾದರೆ ಉಂಟಾಗುವ ಭಾರಿ ಪರಿಣಾಮಗಳುಇವೆಲ್ಲವೂ ಹೆಚ್ಚುವರಿ ಜವಾಬ್ದಾರಿಯನ್ನು ತರುತ್ತವೆ. ಈ ಕಾರಣಕ್ಕಾಗಿ ಈಗ ಬಹುತೇಕ ಆಸ್ಪತ್ರೆಗಳು ಡಿಜಿಟಲ್ ಅಥವಾ ಮುದ್ರಿತ ಪ್ರಿಸ್ಕ್ರಿಪ್ಷನ್ ಬಳಕೆಯತ್ತ ಮುಖ ಮಾಡಿವೆ. ಆದ್ದರಿಂದ, ವೈದ್ಯರ ಅಸ್ಪಷ್ಟ ಕೈಬರಹವನ್ನು ಟೀಕಿಸುವ ಮೊದಲು, ಅವರ ಕೆಲಸದ ಒತ್ತಡ, ಗಂಭೀರತೆ ಹಾಗೂ ಸೇವೆಯ ಮಹತ್ವವನ್ನು ಅರಿಯಬೇಕಾಗುತ್ತದೆ.