WHY SO | ಸ್ವಿಚ್ ಆಫ್ ಮಾಡಿದ ನಂತರವೂ LED ಬಲ್ಬ್​ಗಳು ಹೊಳೆಯುತ್ತವೆ ಯಾಕೆ?

ಚಿಮಿಣಿ ದೀಪದಿಂದ ಎಲ್‌ಇಡಿ ಬಲ್ಬ್​​ಗಳ ಜಗತ್ತಿಗೆ ನಾವು ಕಾಲಿಟ್ಟಿದ್ದೇವೆ. ಈ ಬಲ್ಬ್​ಗಳು ಕಡಿಮೆ ವಿದ್ಯುತ್​​ ಅನ್ನು ಬಳಸುತ್ತವೆಯೋ ಅಥವಾ ಅಗ್ಗದಲ್ಲಿ ಸಿಗುತ್ತವೆಯೋ ಏನೋ ಎಂದು ಎಲ್ಲರೂ ಇದನ್ನೇ ಬಳಸುತ್ತಾರೆ. ಆದರೆ ಈ ಬಲ್ಬ್​ಗಳು ರಾತ್ರಿ ವೇಳೆ ಆಫ್ ಮಾಡಿದರೂ ಹೊಳೆಯುತ್ತಲೇ ಇರುತ್ತದೆ. ಯಾಕೆ ಗೊತ್ತಾ ಇಲ್ಲಿದೆ ಉತ್ತರ.

ಎಲ್ಇಡಿ ಬಲ್ಬ್​ ಸ್ವಿಚ್ ಆಫ್ ಆಗಿದ್ದರೂ ಸಹ ಹೊಳೆಯುತ್ತಲೇ ಇರುವುದಕ್ಕೆ ಎರಡು ಕಾರಣಗಳಿರಬಹುದು. ಮೊದಲನೆಯದಾಗಿ ಅದರ ಕಳಪೆ ಗುಣಮಟ್ಟ. ಎಲ್ಇಡಿ ಬಲ್ಬ್​ಗಳು ಅನೇಕ ಗುಣಗಳಲ್ಲಿ ಬರುತ್ತವೆ. ಕಡಿಮೆ-ಗುಣಮಟ್ಟದ ಎಲ್ಇಡಿ ಬಲ್ಬ್ ಆಫ್ ಆಗಿರುವಾಗಲೂ ಹೊಳೆಯಬಹುದು ಎಂದು ಹೇಳುತ್ತಾರೆ.

ಎರಡನೆಯ ಕಾರಣವೆಂದರೆ ವಿದ್ಯುತ್ ಸರ್ಕ್ಯೂಟ್ ಆಗಿರಬಹುದು. ಕೆಲವೊಮ್ಮೆ ಸಮಸ್ಯೆ ಬಲ್ಬ್​​ನಿಂದ ಅಲ್ಲ ಆದರೆ ವಿದ್ಯುತ್ ಸರ್ಕ್ಯೂಟ್​​ನಿಂದಾಗಬಹುದು ಎಂದು ತಜ್ಞರು ಹೇಳುತ್ತಾರೆ.

ಇನ್ನೂ ಕೆಲವೊಮ್ಮೆ ನೀವು ಸ್ವಿಚ್ ಆಫ್ ಮಾಡಿದಾಗ, ಬೆಳಕು ಇನ್ನೂ ಉಳಿದಿರುವ ವಿದ್ಯುತ್ ಅನ್ನು ಸ್ವಿಚ್ ಮೂಲಕ ಪ್ರವೇಶಿಸಲು ಅನುಮತಿಸುತ್ತದೆ. ತಟಸ್ಥ ತಂತಿಯು ಭೂಮಿಗೆ ಸರಿಯಾಗಿ ಸಂಪರ್ಕ ಹೊಂದಿಲ್ಲದಿರುವುದು ಸಹ ಇದು ಸಂಭವಿಸುವ ಕಾರಣವಾಗಿರಬಹುದು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!