ಇತ್ತೀಚಿನ ದಿನಗಳಲ್ಲಿ ನೃತ್ಯ ಮಾಡುವಾಗ ಹೃದಯಾಘಾತದಿಂದ ಕುಸಿದು ಬಿದ್ದು ಸಾವನ್ನಪ್ಪುವವರ ಸಂಖ್ಯೆ ಹೆಚ್ಚಾಗುತ್ತಿದೆ. ಇದರಿಂದ ನೃತ್ಯ ಮತ್ತು ಹೃದಯ ವೈಫಲ್ಯದ ನಡುವಿನ ಸಂಬಂಧವೇನು ಎಂದು ಜನ ಗೊಂದಲಕ್ಕೆ ಒಳಗಾಗಿದ್ದಾರೆ.
ಕೇವಲ ನೃತ್ಯ ಮಾತ್ರವಲ್ಲ, ವರ್ಕ್ ಔಟ್ ಮಾಡುವಾಗಲೂ, ವಾಕಿಂಗ್ ಮಾಡುವಾಗ ಹೀಗೆ ಹಲವಾರು ಸಂದರ್ಭಗಳಲ್ಲಿ ಹೃದಯಾಘಾತ ಉಂಟಾಗುತ್ತದೆ. ಈ ರೀತಿಯಾಗಿ ಹೃದಯ ವೈಫಲ್ಯದಿಂದ ಜನ ಸಾಯೋದು ಯಾಕೆ ಎನ್ನುವ ಪ್ರಶ್ನೆಗೆ ಉತ್ತರ ಇಲ್ಲಿದೆ.
ದೈಹಿಕ ಚಟುವಟಿಕೆ: ಕೆಲವರಿಗೆ ಹೃದಯ ಸಮಸ್ಯೆಗಳಿರುತ್ತವೆ. ಆದರೆ ತಮಗೆ ಇವು ಇದೆ ಎಂಬುವುದರ ಬಗ್ಗೆ ತಿಳಿದಿರುವುದಿಲ್ಲ. ಇವರು ನೃತ್ಯ ಮಾಡುವಾಗ ದೈಹಿಕ ಚಟುವಟಿಕೆ ಹೆಚ್ಚಾಗುತ್ತದೆ. ದೈಹಿಕ ಚಟುವಟಿಕೆ ಹೆಚ್ಚಾದಂತೆ ವೇಗವಾಗಿ ಉಸಿರನ್ನು ಒಳಗೆಳೆದುಕೊಂಡು ಬಿಡುತ್ತಾರೆ. ಇದು ರಕ್ತದ ಹರಿವಿನ ಪ್ರಮಾಣದಲ್ಲಿ ಹೆಚ್ಚಳಕ್ಕೆ ಕಾರಣವಾಗುತ್ತದೆ. ಇದರ ಪರಿಣಾಮದಿಂದಾಗಿ ಹೃದಯವು ರಕ್ತವನ್ನು ಪಂಪ್ ಮಾಡಲು ಕಷ್ಟವಾಗುತ್ತದೆ ಮತ್ತು ನಿರಂತರವಾಗಿ ಕಾರ್ಯನಿರ್ವಹಿಸಲು ಸಾಧ್ಯವಾಗುವುದಿಲ್ಲ.
ಅತಿಯಾದ ಕೆಲಸ: ನಮ್ಮ ಸಾಮರ್ಥ್ಯವನ್ನು ಮೀರಿ ಭಾರವನ್ನು ಎತ್ತಲು ಬಯಸಿದರೆ, ಅದು ನಮ್ಮ ಕೈಯಲ್ಲಿರುವುದಿಲ್ಲ. ಅದೇ ರೀತಿ ಹೃದಯವೂ ನಿರ್ದಿಷ್ಟ ಪ್ರಮಾಣದ ರಕ್ತವನ್ನು ಮಾತ್ರ ಪಂಪ್ ಮಾಡಲು ಸಾಧ್ಯವಾಗುತ್ತದೆ. ಹೃದಯವು ಸಾಮಾನ್ಯವಾಗಿ ಪಂಪ್ ಮಾಡಲು ಸಾಧ್ಯವಾಗದಷ್ಟು ಹೆಚ್ಚು ರಕ್ತವನ್ನು ಹರಿಸಿದರೆ, ಹೃದಯಕ್ಕೆ ಅದನ್ನು ಪಂಪ್ ಮಾಡುವುದು ಹೆಚ್ಚು ಕಷ್ಟಕರವಾಗುತ್ತದೆ.
ನಿರ್ಜಲೀಕರಣ ಮತ್ತು ಅಧಿಕ ಬಿಸಿಯಾಗುವುದು: ಜನದಟ್ಟಣೆ ಇರುವ ಸ್ಥಳಗಳಲ್ಲಿ ದೀರ್ಘಕಾಲ ನೃತ್ಯ ಮಾಡುವುದರಿಂದ ದೇಹದಲ್ಲಿ ನಿರ್ಜಲೀಕರಣ ಉಂಟಾಗುತ್ತದೆ. ನಿಮ್ಮ ದೇಹದಲ್ಲಿರುವ ನೀರು ಗಾಳಿಯೊಂದಿಗೆ ಬೆರೆತು ನಿಮ್ಮ ಜಲಸಂಚಯನ ಮಟ್ಟ ಕಡಿಮೆಯಾಗುತ್ತದೆ. ನೀರು ಕುಡಿಯದಿದ್ದರೆ ರಕ್ತದ ಹರಿವಿನಲ್ಲಿ ವ್ಯತ್ಯಾಸವಾಗುತ್ತದೆ. ಇದು ಹೃದಯದ ಸಮಸ್ಯೆಗಳಿಗೂ ಕಾರಣವಾಗಬಹುದು.
ಮದ್ಯಪಾನ: ಕೆಲ ಮಂದಿ ಕೊಕೇನ್, ಎಕ್ಸ್ಟಸಿ ಮತ್ತು ಮೆಥ್ ನಂತಹ ಮಾದಕ ದ್ರವ್ಯಗಳನ್ನು ತೆಗೆದುಕೊಳ್ಳುತ್ತಾರೆ. ಈ ರೀತಿಯ ಅನಗತ್ಯ ಔಷಧಗಳು ಅವರ ಹೃದಯಗಳನ್ನು ಸಾಮಾನ್ಯಕ್ಕಿಂತ ವೇಗವಾಗಿ ಬಡಿಯುವಂತೆ ಮಾಡುತ್ತವೆ.