ಆಹಾರದ ವಿಚಾರದಲ್ಲಿ ನಾವೆಲ್ಲರೂ ಬಹಳ ಜಾಗರೂಕರಾಗಿರುತ್ತೇವೆ. ಮುಖ್ಯವಾಗಿ ನಾವು ತಿನ್ನುವ ಆಹಾರವು ನಮ್ಮ ಆರೋಗ್ಯ ಮತ್ತು ನಡವಳಿಕೆಯನ್ನು ಸಂಪೂರ್ಣವಾಗಿ ಪರಿಣಾಮ ಬೀರುತ್ತದೆ ಎನ್ನುವ ನಂಬಿಕೆ ಇದೆ. ಈ ಕಾರಣದಿಂದಲೇ ಅನೇಕ ಜನರು ಕೆಲವು ಆಹಾರಗಳನ್ನ ಸೇವಿಸುವುದಿಲ್ಲ.
ಮುಖ್ಯವಾಗಿ ಸೇವಿಸದ ಆಹಾರಗಳಲ್ಲಿ ದಿನ ನಿತ್ಯ ಬಳಸುವ ಈರುಳ್ಳಿ ಹಾಗೂ ಬೆಳ್ಳುಳ್ಳಿಯಿಂದ ದೂರ ಇರುತ್ತಾರೆ. ಇದಕ್ಕೆ ಸಹ ಕೆಲ ಕಾರಣವಿದೆ. ಅದು ಏನು ಎಂದು ತಿಳಿದುಕೊಳ್ಳೋಣ.
ತುಂಬಾ ಕಹಿ, ಹುಳಿ, ಉಪ್ಪು, ಬಿಸಿ, ಕಟುವಾದ, ಒಣ ಮತ್ತು ಉರಿಯುವ ಆಹಾರಗಳು ಭಾವೋದ್ರೇಕದ ವಿಧಾನದಲ್ಲಿರುವವರಿಗೆ ಪ್ರಿಯವಾಗಿವೆ. ಅಂತಹ ಆಹಾರಗಳು ದುಃಖ ಮತ್ತು ರೋಗವನ್ನು ಉಂಟುಮಾಡುತ್ತವೆ. ಈ ಪ್ರಕಾರ ಈರುಳ್ಳಿ ಹಾಗೂ ಬೆಳ್ಳುಳ್ಳಿ ಸಹ ಇದೇ ಆಹಾರದ ಅಡಿಯಲ್ಲಿ ಬರುತ್ತದೆ. ಬೆಳ್ಳುಳ್ಳಿ ಮತ್ತು ಈರುಳ್ಳಿ ಮನಸ್ಸಿನಲ್ಲಿ ಕೆಟ್ಟ ಪ್ರಚೋದನೆಗಳನ್ನು ಹುಟ್ಟುಹಾಕುತ್ತದೆ ಮತ್ತು ಸಂವೇದನಾ ನಿಯಂತ್ರಣವನ್ನು ಪಡೆಯಲು ಪರದಾಡಬೇಕಾಗುತ್ತದೆ.
ಜೊತೆಗೆ ಈರುಳ್ಳಿ ಮತ್ತು ಬೆಳ್ಳುಳ್ಳಿಯನ್ನು ಸೇವಿಸುವುದರಿಂದ ದೇಹದಲ್ಲಿ ಶಾಖ ಉತ್ಪತ್ತಿಯಾಗುತ್ತದೆ ಎನ್ನಲಾಗುತ್ತದೆ. ಇದರಿಂದ ರಜೋ ಗುಣ ಸಹ ದೇಹದಲ್ಲಿ ಹೆಚ್ಚಾಗುತ್ತದೆ. ಇದರಿಂದ ರೋಗಗಳು ಹಾಗೂ ಕಷ್ಟಗಳು ಬರುವ ಸಾಧ್ಯತೆ ಇದೆ.
ಹೀಗಾಗಿ ಈ ರೀತಿಯ ಆಹಾರಗಳನ್ನು ಸೇವಿಸಲು ಅನೇಕ ಜನರು ಇಷ್ಟಪಡುವುದಿಲ್ಲ.