ಸಿಕ್ಕಾಪಟ್ಟೆ ನೀರಿನಂಶವಿರುವ ಹಣ್ಣು ಅಂದ್ರೆ ಅದು ಕಲ್ಲಂಗಡಿ. ದೇಹವನ್ನು ತಂಪುಮಾಡುವುದರ ಜೊತೆಗೆ ಪೋಷಕಾಂಶಗಳ ಶಕ್ತಿಯನ್ನು ಕೂಡ ಈ ಹಣ್ಣು ಹೊಂದಿದೆ. ಆದರೆ ಕಲ್ಲಂಗಡಿ ತಿಂದ ನಂತರ ಕೆಲ ಆಹಾರಗಳನ್ನು ಸೇವಿಸುವುದರಿಂದ ಆರೋಗ್ಯದ ಮೇಲೆ ಪ್ರತಿಕೂಲ ಪರಿಣಾಮ ಬೀರುತ್ತದೆ ಎಂಬ ಎಚ್ಚರಿಕೆಯನ್ನು ತಜ್ಞರು ನೀಡಿದ್ದಾರೆ.
ಹಾಲು ಸೇವನೆ ತಪ್ಪಿಸಿ:
ಕಲ್ಲಂಗಡಿಯ ನಂತರ ತಕ್ಷಣವೇ ಹಾಲು ಅಥವಾ ಹಾಲಿನ ಉತ್ಪನ್ನಗಳನ್ನು ಸೇವಿಸುವುದು ಅಜೀರ್ಣ, ಹೊಟ್ಟೆಯುಬ್ಬರದ ಸಮಸ್ಯೆಗಳಿಗೆ ಕಾರಣವಾಗಬಹುದು. ಇದರಲ್ಲಿರುವ ವಿಟಮಿನ್ ಸಿ ಮತ್ತು ಹಾಲಿನ ಲ್ಯಾಕ್ಟೋಸ್ ಪರಸ್ಪರ ಕ್ರಿಯೆಗೊಳ್ಳುವ ಸಾಧ್ಯತೆ ಇದ್ದು, ಜೀರ್ಣಕ್ರಿಯೆಯ ಅಡಚಣೆ ಉಂಟಾಗಬಹುದು.
ಪ್ರೋಟೀನ್ ಆಹಾರಗಳನ್ನು ತಿನ್ನಬೇಡಿ:
ಕಲ್ಲಂಗಡಿ ಜೀವಸತ್ವಗಳು ಮತ್ತು ಖನಿಜಗಳನ್ನು ಹೊಂದಿರುತ್ತದೆ. ಸ್ವಲ್ಪ ಪಿಷ್ಟವೂ ಇರುತ್ತದೆ. ಬೇಳೆಕಾಳುಗಳಂತಹ ಪ್ರೋಟೀನ್ ಭರಿತ ಆಹಾರವನ್ನು ಸೇವಿಸುವುದರಿಂದ ಜೀರ್ಣಕಾರಿ ಕಿಣ್ವಗಳಿಗೆ ಹಾನಿಯಾಗುತ್ತದೆ. ಇದು ಹೊಟ್ಟೆಗೆ ಹಾನಿಕಾರಕ.
ಮೊಟ್ಟೆ ಸೇವನೆ ಬೇಡ:
ವೈದ್ಯಕೀಯ ತಜ್ಞರ ಪ್ರಕಾರ, ಕಲ್ಲಂಗಡಿ ತಿಂದ ನಂತರ ಮೊಟ್ಟೆ ತಿನ್ನುವುದು ಮಲಬದ್ಧತೆಯನ್ನು ಉಂಟುಮಾಡಬಹುದು. ಮೊಟ್ಟೆಯಲ್ಲಿರುವ ಕೊಬ್ಬಿನಾಮ್ಲ ಹಾಗೂ ಪ್ರೋಟೀನ್‌ಗಳು ಕಲ್ಲಂಗಡಿಯಲ್ಲಿನ ತಂಪು ಗುಣಧರ್ಮಗಳೊಂದಿಗೆ ಹೊಂದಿಕೆಯಾಗದು.
ತಕ್ಷಣವಾಗಿ ಬೇರೆ ಆಹಾರ ಸೇವನೆ ಬೇಡ:
ಕಲ್ಲಂಗಡಿ ತಿಂದ ತಕ್ಷಣವೇ ಬೇರೆ ಆಹಾರ ಸೇವಿಸಿದರೆ, ದೇಹವು ಪೋಷಕಾಂಶಗಳನ್ನು ಸರಿಯಾಗಿ ಹೀರಿಕೊಳ್ಳಲು ಸಾಧ್ಯವಿಲ್ಲ. ಕನಿಷ್ಠ 30 ನಿಮಿಷಗಳ ಕಾಲ ಯಾವುದೇ ಆಹಾರ ಸೇವಿಸದೆ ಇರುವುದೇ ಉತ್ತಮ.
ತಂಪಾದ ಪಾನೀಯಗಳ ಜತೆ ಸೇವನೆ ತಪ್ಪಿಸಿ:
ಕಲ್ಲಂಗಡಿ ತಿನ್ನುವಾಗ ಅಥವಾ ತದನಂತರ ತಣ್ಣನೆಯ ಸೋಡಾ, ಐಸ್‌ಕ್ರೀಂ, ಅಥವಾ ಜ್ಯೂಸ್‌ಗಳನ್ನು ಸೇವಿಸುವುದು ಶೀತ, ಗಂಟಲಿನ ಸೋಂಕು ಹಾಗೂ ಜೀರ್ಣ ಸಮಸ್ಯೆಗಳಿಗೆ ಕಾರಣವಾಗಬಹುದು. (Disclaimer: ಈ ಲೇಖನವು ಸಾರ್ವಜನಿಕ ಮೂಲಗಳಿಂದ ಸಂಗ್ರಹಿಸಿದ ಮಾಹಿತಿಯಾಧಾರಿತವಾಗಿದೆ. ಇದು ವೈದ್ಯಕೀಯ ಸಲಹೆಯಲ್ಲ. ಹೆಚ್ಚಿನ ಸಮಸ್ಯೆಗಾಗಿ ತಜ್ಞರನ್ನು ಸಂಪರ್ಕಿಸಿ.)