ಹೊಸದಿಗಂತ ಡಿಜಿಟಲ್ ಡೆಸ್ಕ್:
ತರಕಾರಿಗಳನ್ನು ಬೇಯಿಸುವುದರಿಂದ ಪೋಷಕಾಂಶಗಳು ಕಡಿಮೆಯಾಗುತ್ತವೆ ಎನ್ನುತ್ತಾರೆ ತಜ್ಞರು. ತರಕಾರಿಗಳು ಮತ್ತು ಹಣ್ಣುಗಳನ್ನು ಹಸಿಯಾಗಿ ತಿನ್ನುವುದರಿಂದ ನಮಗೆ ಹೆಚ್ಚಿನ ಶಕ್ತಿ, ಆರೋಗ್ಯಕರ ಚರ್ಮ, ಉತ್ತಮ ಜೀರ್ಣಕ್ರಿಯೆ ಮತ್ತು ಹೃದ್ರೋಗ ಮತ್ತು ಕ್ಯಾನ್ಸರ್ ಅಪಾಯವನ್ನು ಕಡಿಮೆ ಮಾಡುತ್ತದೆ ಎಂದು ಹೇಳಲಾಗುತ್ತದೆ.
ಆದರೆ, ಕೆಲವು ತರಕಾರಿಗಳನ್ನು ಹಸಿಯಾಗಿ ತಿನ್ನಬಾರದು, ಇವು ನಿಮ್ಮ ಆರೋಗ್ಯಕ್ಕೆ ಹಾನಿ ಮಾಡುವ ಸಾಧ್ಯತೆ ಹೆಚ್ಚಿದೆ. ಇವುಗಳು ಸಿಸ್ಟಿಸರ್ಕೋಸಿಸ್, ರೋಗಗ್ರಸ್ತವಾಗುವಿಕೆಗಳು, ತಲೆನೋವು, ಯಕೃತ್ತಿನ ಹಾನಿ ಮತ್ತು ಸ್ನಾಯುವಿನ ಚೀಲಗಳಂತಹ ಗಂಭೀರ ಕಾಯಿಲೆಗಳಿಗೆ ಕಾರಣವಾಗಬಹುದು.
1. ಕೆಸುವಿನ ಎಲೆ, ಗೆಡ್ಡೆ- ಕೆಸುವಿನ ಎಲೆ ಹಾಗೂ ಗೆಡ್ಡೆಗಳನ್ನು ಆಹಾರದಲ್ಲಿ ಬಳಸುವ ಮೊದಲು ಕುದಿಯುವ ನೀರಿನಲ್ಲಿ ಚೆನ್ನಾಗಿ ಬೇಯಿಸಿ. ಇವು ಹೆಚ್ಚಿನ ಆಕ್ಸಲೇಟ್ ಮಟ್ಟವನ್ನು ಹೊಂದಿರುತ್ತವೆ. ಬೇಯಿಸುವುದರಿಂದ ಇವುಗಳ ಮಟ್ಟ ಕಡಿಮೆಯಾಗುತ್ತದೆ.
2. ಎಲೆಕೋಸು- ಕಣ್ಣಿಗೆ ಕಾಣದ ಟೇಪ್ ವರ್ಮ್, ಅದರ ಮೊಟ್ಟೆಗಳು ಎಲೆಕೋಸಿನಲ್ಲಿ ಕಂಡುಬರುತ್ತವೆ. ಆದ್ದರಿಂದ ಎಲೆಕೋಸನ್ನು ಚೆನ್ನಾಗಿ ತೊಳೆದು ನಂತರ ಬಿಸಿ ನೀರಿಗೆ ಹಾಕಿ ಚೆನ್ನಾಗಿ ಬೇಯಿಸಿ ನಂತರ ತಿನ್ನಬೇಕು.
3. ಕ್ಯಾಪ್ಸಿಕಂ- ಕ್ಯಾಪ್ಸಿಕಂ ಒಳಗಿನ ಬೀಜಗಳು ಟೇಪ್ ವರ್ಮ್ ಮೊಟ್ಟೆಗಳಿಗೆ ನೆಲೆಯಾಗಿದೆ, ಇದು ಕ್ಯಾಪ್ಸಿಕಂನ ಒಳಭಾಗದಲ್ಲಿ ಉಳಿದುಕೊಂಡಿರುತ್ತದೆ. ಹಾಗಾಗಿ ಬೇಯಿಸಿ ತಿನ್ನುವುದು ಒಳಿತು.
4. ಬೆಂಡೆಕಾಯಿ- ಬೆಂಡೆಕಾಯಿಯ ಬೀಜಗಳು ಕೂಡ ಟೇಪ್ ವರ್ಮ್ ಮೊಟ್ಟೆಗಳಿಗೆ ನೆಲೆಯಾಗಿದೆ. ಹಸಿಯಾಗಿ ತಿಂದು ನಮ್ಮ ರಕ್ತ ಪ್ರವೇಶಿಸುವುಕ್ಕೆ ಅನುವು ಮಾಡಿಕೊಡುವುದಕ್ಕಿಂತ, ಬೇಯಿಸಿ ತಿನ್ನುವುದು ಒಳ್ಳೆಯದು.