ಹೊಸದಿಗಂತ ಡಿಜಿಟಲ್ ಡೆಸ್ಕ್:
ಕಾಂಗ್ರೆಸ್‌ನವರು ಭಾರತದಲ್ಲಿ ಉಗ್ರರನ್ನು ಸಾಕ್ತಿದ್ದಾರೆ ಎಂದು ಪರಿಷತ್ ಸದಸ್ಯ ರವಿಕುಮಾರ್ ವಾಗ್ದಾಳಿ ನಡೆಸಿದ್ದಾರೆ.
ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಐಎಂಎಫ್‌ನಿಂದ ಪಡೆದ ಸಾಲದ ಹಣದಲ್ಲಿ ಪಾಕಿಸ್ತಾನದ ಸರ್ಕಾರ ಮಸೂದ್ ಅಜರ್‌ಗೆ ಪರಿಹಾರ ಕೊಟ್ಟಿದೆ. ಆ ಮೂಲಕ ಪಾಕಿಸ್ತಾನ ಉಗ್ರರನ್ನ ಸಾಕ್ತಿದೆ. ಇದೇ ಕಾಂಗ್ರೆಸ್ ಸರ್ಕಾರ ಕೊಟ್ಟ ಪರಿಹಾರದಿಂದ ಬಂದಿದೆ. ಅಲ್ಲಿಗೆ ಕಾಂಗ್ರೆಸ್‌ನವ್ರೂ ಭಯೋತ್ಪಾದಕರನ್ನು ಸಾಕ್ತಿದ್ದಾರೆ ಅಂತಾ ಆಯ್ತು ಅಲ್ವಾ ಎಂದು ಕಿಡಿಕಾರಿದ್ದಾರೆ.
ಪಹಲ್ಗಾಮ್ ಕೃತ್ಯ ನಡೆಯುವಾಗ ಮೋದಿಯವ್ರು ಎಲ್ಲಿದ್ರು ಅಂತ ಪ್ರಿಯಾಂಕ್ ಖರ್ಗೆ ಕೇಳಿದ್ದಾರೆ. ಎಲ್ಲರಿಗೂ ಗೊತ್ತಿರುವ ವಿಷಯ ಪ್ರಿಯಾಂಕ್ ಖರ್ಗೆಗೆ ಯಾಕೆ ಗೊತ್ತಿಲ್ಲ ಎಂದು ಪ್ರಶ್ನಿಸಿದ್ದಾರೆ.
ಕಾಂಗ್ರೆಸ್ ಅವಧಿಯಲ್ಲಿ 2004ರಿಂದ 2014ರವರೆಗೆ ಹೆಚ್ಚಿನ ಉಗ್ರ ದಾಳಿಗಳು ದೇಶದಲ್ಲಿ ನಡೆಯಿತು. 900ಕ್ಕೂ ಹೆಚ್ಚು ನಾಗರಿಕರು ಸತ್ರು, ಆಗ ಎಲ್ಲಿತ್ತು ಕಾಂಗ್ರೆಸ್? ಯಾಕೆ ಅಧಿಕಾರದಲ್ಲಿದ್ರೂ ಉಗ್ರ ವಿರುದ್ಧ ಕ್ರಮ ಕೈಗೊಳ್ಳಲಿಲ್ಲ ಎಂದು ತಿರುಗೇಟು ನೀಡಿದ್ದಾರೆ.