March 2, 2026
Monday, March 2, 2026
spot_img

ಇಷ್ಟು ದಿನ ಸಂಜುನನ್ನು ಪ್ಲೇಯಿಂಗ್-11 ನಿಂದ ಹೊರಗಿಟ್ಟಿದ್ದೇಕೆ? ಗಂಭೀರ್ ಉತ್ತರ ಕೊಟ್ರು ನೋಡಿ

ಹೊಸದಿಗಂತ ಡಿಜಿಟಲ್ ಡೆಸ್ಕ್:

ವೆಸ್ಟ್ ಇಂಡೀಸ್ ವಿರುದ್ಧದ ಸೂಪರ್ 8 ಪಂದ್ಯದಲ್ಲಿ ಸಂಜು ಸ್ಯಾಮ್ಸನ್ 50 ಎಸೆತಗಳಲ್ಲಿ ಅಜೇಯ 97 ರನ್ ಸಿಡಿಸಿ ಭಾರತವನ್ನು ಸೆಮಿಫೈನಲ್‌ಗೆ ಮುನ್ನಡೆಸಿದರು. ಈ ಪ್ರದರ್ಶನದ ಬಳಿಕ ಅವರನ್ನು ಪ್ಲೇಯಿಂಗ್ 11ರಲ್ಲಿ ಏಕೆ ನಿರಂತರವಾಗಿ ಸೇರಿಸಲಿಲ್ಲ ಎಂಬ ಪ್ರಶ್ನೆಗೆ ಹೆಡ್ ಕೋಚ್ ಗೌತಮ್ ಗಂಭೀರ್ ಉತ್ತರ ನೀಡಿದ್ದಾರೆ.

ಗಂಭೀರ್ ಪ್ರಕಾರ, ನ್ಯೂಜಿಲೆಂಡ್ ವಿರುದ್ಧದ ಸರಣಿಯಲ್ಲಿ ಸ್ಯಾಮ್ಸನ್ ಭಾರೀ ಒತ್ತಡ ಎದುರಿಸಿದ್ದರು. ಕೆಲವೊಮ್ಮೆ ಆಟಗಾರನಿಗೆ ವಿಶ್ರಾಂತಿ ನೀಡಿ ಮನೋಭಾರ ಕಡಿಮೆ ಮಾಡುವುದು ಅಗತ್ಯವೆಂದು ತಂಡ ನಿರ್ವಹಣೆ ಭಾವಿಸಿತು. ವಿಶ್ವಕಪ್ ವೇಳೆ ಅಗತ್ಯವಾದಾಗ ಅವರು ದೊಡ್ಡ ಇನಿಂಗ್ಸ್ ಆಡುತ್ತಾರೆ ಎಂಬ ವಿಶ್ವಾಸ ನಮ್ಮಲ್ಲಿತ್ತು ಎಂದು ಗಂಭೀರ್ ಹೇಳಿದರು.

ಇದನ್ನೂ ಓದಿ:

ಗುಂಪು ಹಂತದಲ್ಲಿ ಸ್ಯಾಮ್ಸನ್ ಹೆಚ್ಚು ಅವಕಾಶ ಪಡೆಯಲಿಲ್ಲ. ನಮೀಬಿಯಾ ವಿರುದ್ಧ 22 ರನ್, ಜಿಂಬಾಬ್ವೆ ವಿರುದ್ಧ 24 ರನ್ ಗಳಿಸಿದ್ದ ಅವರು ಟೀಕೆಗೆ ಗುರಿಯಾಗಿದ್ದರು. ಅಭಿಷೇಕ್ ಶರ್ಮಾ ವೈಫಲ್ಯಗಳ ನಡುವೆಯೂ ಅವರಿಗೆ ಸತತ ಅವಕಾಶ ಸಿಗಲಿಲ್ಲ ಎಂಬ ಅಸಮಾಧಾನ ಅಭಿಮಾನಿಗಳಲ್ಲಿ ಕಾಣಿಸಿಕೊಂಡಿತ್ತು.

ಆದರೆ ನಿರ್ಣಾಯಕ ಪಂದ್ಯದಲ್ಲಿ ತಾಳ್ಮೆಯ ಇನಿಂಗ್ಸ್ ಮೂಲಕ ಸ್ಯಾಮ್ಸನ್ ಎಲ್ಲ ಪ್ರಶ್ನೆಗಳಿಗೆ ಬ್ಯಾಟ್‌ನಿಂದಲೇ ಉತ್ತರ ನೀಡಿ ಟೀಮ್ ಇಂಡಿಯಾದ ವಿಶ್ವಾಸವನ್ನು ಗಟ್ಟಿಮಾಡಿಕೊಂಡಿದ್ದಾರೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !