ಹೊಸ ದಿಗಂತ ಡಿಜಿಟಲ್ ಡೆಸ್ಕ್:
ನಟ ಸುದೀಪ್ ಅವರಿಗೆ ತುಮಕೂರು ವಿಶ್ವವಿದ್ಯಾಲಯವು ಕೆಲವು ದಿನಗಳ ಹಿಂದೆಯಷ್ಟೇ ಡಾಕ್ಟರೇಟ್ ಘೋಷಣೆ ಮಾಡಿತ್ತು. ಆದರೆ ನನಗಿಂತಲೂ ಅರ್ಹರು ಸಾಕಷ್ಟು ಜನರು ಇದ್ದಾರೆ. ಅವರಿಗೆ ಈ ಗೌರವ ನೀಡಿ ಎಂದು ಡಾಕ್ಟರೇಟ್‌ನ್ನು ನಿರಾಕರಿಸಿದ್ದರು.
ಇಂದು ಬೆಂಗಳೂರು ನಗರದಲ್ಲಿ ಸುದ್ದಿಗಾರರೊಂದಿಗೆ ಈ ಕುರಿತು ಮಾತನಾಡಿದ ಸುದೀಪ್, ನಾನು ಅಂತದ್ದೇನು ಮಾಡಿಲ್ಲ. ಹತ್ತಾರು ಸಿನಿಮಾ ಮಾಡಿದ್ದೀನಿ ಅಷ್ಟೇ, ನಾನು ಇನ್ನೂ ಲೈಫ್‌ಲ್ಲಿ ಮಾಡೋದು ತುಂಬಾ ಇದೆ. ನನ್ನ ಪ್ರಕಾರ ನಾನು ಏನಾದರೂ ಮಾಡಿದ್ದೀನಿ ಅಂತ ಅನಿಸಿದಾಗ ನಾನೇ ಪತ್ರ ಬರೆದು ಡಾಕ್ಟರೇಟ್ ಕೊಡಿ ಎಂದು ಕೇಳ್ತೀನಿ. ಆದರೆ ಅವರು ಕೊಟ್ಟಿರುವ ಡಾಕ್ಟ್ರೇಟ್ ಮೇಲೆ ನನಗೆ ತುಂಬಾ ಗೌರವವಿದೆ ಎಂದರು.