ಹೊಸದಿಗಂತ ಡಿಜಿಟಲ್ ಡೆಸ್ಕ್:
ನಾಳೆಯಿಂದ ಭಾರತವು ಇರಾನ್‌ನಲ್ಲಿ ಸಿಲುಕಿರುವ ನಾಗರಿಕರನ್ನು ಸ್ಥಳಾಂತರಿಸಲು ಪ್ರಾರಂಭಿಸಲಿದೆ.
ಹೀಗಾಗಿ, ಮುನ್ನೆಚ್ಚರಿಕಾ ಕ್ರಮವಾಗಿ ಭಾರತ ಈ ಕ್ರಮ ತೆಗೆದುಕೊಂಡಿದೆ. ಮೂಲಗಳ ಪ್ರಕಾರ, ಸ್ಥಳಾಂತರಿಸುವವರ ಮೊದಲ ಬ್ಯಾಚ್ ಅನ್ನು ನಾಳೆ ಮುಂಜಾನೆಯೇ ವಿಮಾನದಲ್ಲಿ ಕಳುಹಿಸುವ ಸಾಧ್ಯತೆಯಿದೆ.
ಟೆಹ್ರಾನ್‌ನಲ್ಲಿರುವ ಭಾರತೀಯ ರಾಯಭಾರ ಕಚೇರಿಯು ವಿವಿಧ ಪ್ರದೇಶಗಳಲ್ಲಿನ ಭಾರತೀಯ ವಿದ್ಯಾರ್ಥಿಗಳನ್ನು ಸಂಪರ್ಕಿಸಲು ಪ್ರಾರಂಭಿಸಿದೆ ಎಂದು ಸರ್ಕಾರಿ ಮೂಲಗಳು ತಿಳಿಸಿವೆ. ಆದರೆ, ಹಲವಾರು ಪ್ರದೇಶಗಳಲ್ಲಿ ಇಂಟರ್ನೆಟ್ ಸೇವೆಗಳು ಸ್ಥಗಿತಗೊಂಡಿರುವುದರಿಂದ ಮತ್ತು ಫೋನ್ ಲೈನ್‌ಗಳು ಸರಿಯಾಗಿ ಕಾರ್ಯನಿರ್ವಹಿಸದಿರುವುದರಿಂದ ಈ ಪ್ರಕ್ರಿಯೆ ಕೊಂಚ ತಡವಾಗುತ್ತಿದೆ.
ಇರಾನ್‌ನಾದ್ಯಂತ ವ್ಯಾಪಕ ಪ್ರತಿಭಟನೆಗಳ ನಡುವೆ ಭಾರತೀಯ ವಿದ್ಯಾರ್ಥಿಗಳ ಸುರಕ್ಷತೆಯ ಬಗ್ಗೆ ಕಳವಳಗಳು ಹೆಚ್ಚಾಗಿದೆ. ಇರಾನಿನ ರಿಯಾಲ್‌ನಲ್ಲಿ ಕಳೆದ ತಿಂಗಳ ಕೊನೆಯಲ್ಲಿ ಅಶಾಂತಿ ಪ್ರಾರಂಭವಾಯಿತು. ಅಂದಿನಿಂದ ಪ್ರತಿಭಟನೆ ಎಲ್ಲಾ 31 ಪ್ರಾಂತ್ಯಗಳಿಗೆ ಹರಡಿ, ರಾಜಕೀಯ ಬಿಕ್ಕಟ್ಟಾಗಿ ರೂಪ ತಳೆದಿದೆ.


