ಹೊಸದಿಗಂತ ವರದಿ, ಕಾರವಾರ :
ವ್ಯಾಪಕ ಮಳೆಯ ಹಿನ್ನಲೆಯಲ್ಲಿ ಕಾಳಿ ಜಲಾಶಯದಲ್ಲಿ ಒಳಹರಿವುಹೆಚ್ಚಿದ್ದು ಶುಕ್ರವಾರ ಮಧ್ಯಾಹ್ನ 3.30 ರಿಂದ ನಾಲ್ಕು ಕ್ರಸ್ಟ್ ಗೇಟ್ ತೆರೆಯಲಾಗಿದೆ. ಡ್ಯಾಂನಿಂದ 6000 ಕ್ಯೂ ನೀರನ್ನು ಬಿಡಲಾಗಿದೆ.
ನದಿಪಾತ್ರದ ಜನರಿಗೆ ಪ್ರವಾಹ ಎಚ್ಚರಿಕೆ ನೀಡಲಾಗಿದೆ. ಜಿಲ್ಲಾಡಳಿತ ನಿಗದಿಪಡಿಸಿರುವ ನೀರಿನ ಮಟ್ಟದ ವರೆಗೆ ನೀರನ್ನು ಹೊರಬಿಡಲಾಗುತ್ತಿದ್ದು, ವಿದ್ಯುತ್ ಉತ್ಪಾದನೆ ಯಿಂದ 22000 ಕ್ಯೂಸೆಕ್ಸ್ ನೀರನ್ನು ಹೊರಬಿಡಲಾಗುತ್ತಿದೆ.